ಮೈಸೂರು : ಇಳಿ ವಯಸ್ಸಿನಲ್ಲಿ ಮದುವೆಯಾಗಿ ಅಚ್ಚರಿ ಮೂಡಿಸಿದ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ. ಫಾತಿಮಾ ಬೇಗಂ (65) ಮುಸ್ತಫಾ (85) ಮೈಸೂರಿನ ಉದಯಗಿರಿಯ ಗೌಸಿಯಾನಗರದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮನೆಯಲ್ಲೇ ಮದುವೆಯಾಗಿದ್ದಾರೆ.
ಮುಸ್ತಫಾ ಎರಡು ವರ್ಷಗಳ ಹಿಂದೆ ಪತ್ನಿ ಖುರ್ಷಿದ್ ಬೇಗಂರನ್ನ ಕಳೆದುಕೊಂಡಿದ್ದ. ಮಕ್ಕಳಿಗೆಲ್ಲಾ ಮದುವೆ ಮಾಡಿದ್ದರಿಂದ ಗೌಸಿಯಾನಗರದಲ್ಲಿ ಒಂಟಿ ಜೀವನ ಸಾಗಿಸುತ್ತಿದ್ದ ಮುಸ್ತಫಾ. ಒಂಟಿ ಜೀವನಕ್ಕೆ ಜೋಡಿಯೊಂದು ಬೇಕೆಂದು ಹಂಬಲಿಸಿ ಫಾತಿಮಾ ಬೇಗಂ ಎಂಬುವವರನ್ನು ಮದುವೆಯಾಗಿದ್ದಾರೆ.
ಮುಸ್ತಫಾ ಕಣ್ಣಿಗೆ ಬಿದ್ದಳು ಅದೇ ಏರಿಯಾದ ಫಾತಿಮಾ ಬೇಗಂ ಗೌಸಿಯಾನಗರದಲ್ಲೇ ಒಂಟಿ ಜೀವನ ಸಾಗಿಸುತ್ತಿದ್ದ 65 ವರ್ಷದ ವೃದ್ದೆ ಫಾತಿಮಾ ಬೇಗಂ. ಫಾತಿಮಾ ಬೇಗಂರನ್ನ ಮದುವೆಯಾಗಲು ಮುಸ್ತಫಾ ಮನವಿ ಮಾಡಿದ್ದನು. ಮುಸ್ತಫಾನಿಗೆ ನಿರಾಸೆ ಮಾಡದೆ ಮದುವೆಯಾಗಲು ಫಾತಿಮಾ ಬೇಗಂ ಒಪ್ಪಿ ಇಳಿ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಳಿ ವಯಸ್ಸಿನಲ್ಲಿ ಮದುವೆಯಾಗಲು ಇಚ್ಚಿಸಿದ ತಂದೆಗೆ ಮಕ್ಕಳು ಶುಭ ಹಾರೈಸಿದ್ದಾರೆ. ಇಡೀ ಕುಟುಂಬಕ್ಕೆ ಅಚ್ಚರಿ ಎನಿಸಿದ್ರೂ ತಂದೆಯ ನಿರ್ಧಾರಕ್ಕೆ ಜೈ ಎಂದು ನಿಖಾ ಮಾಡಿದ ಮಕ್ಕಳು. ಮನೆಯಲ್ಲೇ ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಫಾತಿಮಾಬೇಗಂರನ್ನ ವರಿಸಿದ ಮುಸ್ತಫಾ. ಇಳಿ ವಯಸ್ಸಿನಲ್ಲಿ ಆಸರೆ ಬಯಸಿದ ಮುಸ್ತಫಾರ ಆಸೆ ಈಡೇರಿಸಿದ ಫಾತಿಮಾ ಬೇಗಂ. ಇಳಿ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಜ್ಜ ಅಜ್ಜಿ ಫುಲ್ಖುಷ್.