Home P.Special ಮಂಡ್ಯದಲ್ಲಿ ಮಾದರಿ ಗಣೇಶೋತ್ಸವ ; ವಿಜೃಂಭಣೆಗೆ ಕಡಿವಾಣ, ಕೊವಿಡ್ ಆಸ್ಪತ್ರೆಗೆ ನೆರವಾದ ಗಣಪತಿ ಸಮಿತಿ

ಮಂಡ್ಯದಲ್ಲಿ ಮಾದರಿ ಗಣೇಶೋತ್ಸವ ; ವಿಜೃಂಭಣೆಗೆ ಕಡಿವಾಣ, ಕೊವಿಡ್ ಆಸ್ಪತ್ರೆಗೆ ನೆರವಾದ ಗಣಪತಿ ಸಮಿತಿ

ಮಂಡ್ಯ : ಅದು ಪ್ರತಿ ವರ್ಷವೂ ವಿಶಿಷ್ಟ ಹಾಗೂ ವಿಜೃಂಭಣೆಯ ಗಣೇಶೋತ್ಸವವಕ್ಕೆ ಹೆಸರುವಾಸಿಯಾಗಿದ್ದ ಸಂಘ. ತಿಂಗಳವರೆಗೆ ನಡೆಯುತ್ತಿದ್ದ ಗಣೇಶೋತ್ಸವಕ್ಕೆ ಬ್ರೇಕ್ ಹಾಕಿರೋ ಆ ಸಮಿತಿ ಕೊರೋನಾ ಸಂಕಷ್ಟಕ್ಕೆ ನೆರವಾಗಿದೆ.

ಮಂಡ್ಯ ನಗರದ ಬಂದೀಗೌಡ ಬಡಾವಣೆಯಲ್ಲಿರುವ ಮಹಾ ಗಣಪತಿ ಉತ್ಸವ ಸಮಿತಿ. ಕಳೆದ ಮೂರು ದಶಕಗಳಿಂದಲೂ ಈ ಸಮಿತಿ ತನ್ನದೇ ಶೈಲಿಯಲ್ಲಿ ವಿಶಿಷ್ಟ, ವಿಭಿನ್ನ ಹಾಗೂ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದೆ.
ಪ್ರತಿ ಬಾರಿಯೂ ಬಾಂಬೆಯಿಂದ ಲಕ್ಷಾಂತರ ರೂ. ಮೌಲ್ಯದ ವಿಶೇಷ ಮತ್ತು ವಿಭಿನ್ನ ರೀತಿಯ ಬೃಹತ್ ಗಣೇಶ ಮೂರ್ತಿ ತಂದು ಪ್ರತಿಷ್ಠಾಪಿಸುತ್ತಿದ್ದರು . ಅಲ್ದೆ, ತಿಂಗಳುಗಳ ಕಾಲ ಮೂರ್ತಿಗೆ ನಿತ್ಯವೂ ವಿಶೇಷ ಕಾರ್ಯಕ್ರಮ ಆಯೋಜನೆ, ಬೃಹತ್ ಅನ್ನ ಸಂತರ್ಪಣೆ ಮಾಡಿ, ವಿಜೃಂಭಣೆಯಿಂದ ಉತ್ಸವ ನಡೆಸಿ, ವಿಸರ್ಜನೆ ಮಾಡ್ತಿದ್ರು.

ಈ ಬಾರಿ ಒಂದೇ ದಿನಕ್ಕೇ ಸೀಮಿತ : ಈ ಬಾರಿ ಕೊವಿಡ್ ಮಹಾ ಮಾರಿ ಎಲ್ಲರನ್ನೂ ಬೆಚ್ಚಿ ಬೀಳಿಸುವ ಜೊತೆಗೆ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರಿದೆ. ಹೀಗಾಗಿ ಈ ಬಾರಿ ವಿಜೃಂಭಣೆಯ ಗಣೇಶೋತ್ಸವಕ್ಕೆ ಕಡಿವಾಣ ಹಾಕಿರೋ ಸಮಿತಿ, ಸಿಂಪಲ್ಲಾಗಿ ಒಂದು ದಿನದ ಸಾಂಪ್ರದಾಯಿಕ ಗಣೇಶೋತ್ಸವ ಆಚರಿಸುವ ನಿರ್ಧಾರ ಮಾಡಿದೆ.

ಕೊವಿಡ್ ಆಸ್ಪತ್ರೆಗೆ ನೆರವು : ಇನ್ನು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ವ್ಯಯಿಸುತ್ತಾ ಬಂದಿದ್ದ ಈ ಸಮಿತಿ ಸದಸ್ಯರು ಆ ಹಣವನ್ನ ಮಂಡ್ಯ ಮಿಮ್ಸ್ ನ ಕೊವಿಡ್ ಆಸ್ಪತ್ರೆಗೆ ಮತ್ತು ಕೊರೋನಾ ವಾರಿಯರ್ಸ್ ಗಳ ಸೇವೆಗೆ ನೀಡಲು ನಿರ್ಧರಿಸಿತ್ತು. ಅದರಂತೆ ಕೊವಿಡ್ ಆಸ್ಪತ್ರೆ ಮತ್ತು ಕೊರೋನಾ ವಾರಿಯರ್ಸ್ ಗಳಾದ ವೈದ್ಯರುಗಳಿಗೆ ಅಗತ್ಯವಿರುವ 50 ಮಂಚ, 50 ಟೇಬಲ್ ಫ್ಯಾನ್ ಗಳು, ಶುದ್ಧ ಕುಡಿಯುವ ನೀರಿನ ಯಂತ್ರಗಳನ್ನ ಕೊಡುಗೆಯಾಗಿ ನೀಡಿ ಮಾದರಿಯಾಗಿದೆ.
ಇನ್ನು ಇಂತಹ ಸಂಕಷ್ಟದ ಸಂಧರ್ಭವನ್ನ ವಿಜೃಂಭಣೆ ಹೆಸರಲ್ಲಿ ದುರುಪಯೋಗ ಮಾಡಿಕೊಳ್ಳದೆ ಮಾದರಿ ಗಣೇಶೋತ್ಸವಕ್ಕೆ ಬಂದೀಗೌಡ ಬಡಾವಣೆಯ ಮಹಾ ಗಣಪತಿ ಉತ್ಸವ ಸಮಿತಿ ಮುಂದಾಗಿದೆ. ಸಮಿತಿಯ ಈ ಮಾದರಿ ಸೇವೆಗೆ ಜಿಲ್ಲೆಯ ಜನರಿಂದಲೂ ಕೂಡ ಮೆಚ್ಚುಗೆ ವ್ಯಕ್ತವಾಗಿದೆ. ಕೊವಿಡ್ ಆಸ್ಪತ್ರೆ ಮತ್ತು ಕೊರೋನಾ ವಾರಿಯರ್ಸ್ ಗಳ ಅಗತ್ಯತೆಗೆ ತಕ್ಕ ನೆರವು ನೀಡಿರೋ ಸಮಿತಿ ಕಾರ್ಯವನ್ನ ಮಿಮ್ಸ್ ಆಸ್ಪತ್ರೆ ನಿರ್ದೇಶಕ ಜಿ.ಎಂ.ಪ್ರಕಾಶ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಶ್ಲಾಘಿಸಿದ್ದಾರೆ.
ಏನೇ ಆಗ್ಲಿ, ಉತ್ಸವದ ನೆಪದಲ್ಲಿ ದುಂದು ವೆಚ್ಚ, ಅಕ್ರಮ ಚಟುವಟಿಕೆಗಳೇ ಹೆಚ್ಚು ನಡೆಯೋದನ್ನ ನೋಡಿದ್ದೇವೆ. ಅದೆಲ್ಲದ್ದಕ್ಕೂ ವಿಭಿನ್ನ ಎಂಬಂತೆ ಮಂಡ್ಯದ ಈ ಸಮಿತಿಯ ಸಾಂಪ್ರದಾಯಿಕ ಉತ್ಸವ ಮತ್ತು ಮಾದರಿ ಕಾರ್ಯ ನಿಜವಾಗಿಯೂ ಪ್ರಶಂಸನೀಯ.

-ಡಿ.ಶಶಿಕುಮಾರ್ 

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments