ಬೆಂಗಳೂರು: ಪರೀಕ್ಷೆ ಬರೆಯಲು ಕುಳಿತ ಅಭ್ಯರ್ಥಿಗಳಿಗೆ ಶಾಕ್ ಉಂಟಾಗಿದೆ. ಸಾಮಾನ್ಯ ಜ್ಞಾನ ಪ್ರಶ್ನೆಪತ್ರಿಕೆಯಲ್ಲಿ ಬರೀ ಕಾಗುಣಿತ ದೋಷಗಳನ್ನೇ ನೋಡಿದ ಅಭ್ಯರ್ಥಿಗಳು ಫುಲ್ ಕನ್ಫ್ಯೂಸ್ ಆಗಿದ್ದಾರೆ. ಪ್ರಶ್ನೆಪತ್ರಿಕೆ ತುಂಬಾ ಕಾಗುಣಿತ ದೋಷವೇ ಕಾರುಬಾರು ನಡೆಸಿರೋದು ಅಭ್ಯರ್ಥಿಗಳಿಗೆ ಕಿರಿಕಿರಿ ಉಂಟು ಮಾಡಿದೆ.
ರಾಜ್ಯಾದ್ಯಂತ ಪ್ರಥಮದರ್ಜೆ ಸಹಾಯಕರ ಎಫ್ಡಿಎ ಪರೀಕ್ಷೆ ನಡೆಯುತ್ತಿದ್ದು ಪ್ರಶ್ನೆಪತ್ರಿಕೆ ತುಂಬ ಬರೀ ತಪ್ಪುಗಳೇ ರಾರಾಜಿಸಿವೆ. ಕೆಪಿಎಸ್ಸಿಯಿಂದ ಪರೀಕ್ಷೆ ನಡೆಸಲಾಗುತ್ತಿದ್ದು, ಕೆಪಿಎಸ್ಸಿ ಈ ರೀತಿ ತಪ್ಪು ಮಾಡಿದ್ರೆ ಹೇಗೆ ಅನ್ನೋ ಪ್ರಶ್ನೆ ಮೂಡಿದೆ. ‘ಹುಲ್ಲುಗಾವಲು’ ಬದಲು ‘ಉಲ್ಲುಗಾವಲು’ ಎಂದು ಪ್ರಿಂಟ್ ಆಗಿದೆ. ‘ಚೆಂಡು’ ಬದಲು ‘ಜೆಂಡು’, ‘ಅಸಾಂವಿಧಾನಿಕ’ ಬದಲು ‘ಅಸಂವೈಧಾನಿಕ’ ಒತ್ತಕ್ಷರ, ದೀರ್ಘ, ಅಲ್ಪಪ್ರಾಣ ಮಹಾಪ್ರಾಣ ಎಲ್ಲವೂ ತಪ್ಪಾಗಿದೆ. ಕೆಪಿಎಸ್ಸಿ ಮಾಡಿರೋ ಎಡವಟ್ಟಿನಿಂದಾಗಿ ಪ್ರಶ್ನೆಪತ್ರಿಕೆ ಅಂತಿಮಗೊಳಿಸುವ ಮುನ್ನ ಕರೆಕ್ಷನ್ ಮಾಡಲ್ವಾ? ಅನ್ನೋ ಪ್ರಶ್ನೆ ಮೂಡಿದೆ.