Saturday, October 1, 2022
Powertv Logo
Homeದೇಶ3ನೇ ಅಲೆಗೆ ಮುನ್ನುಡಿ ಬರೆದೇ ಬಿಟ್ಟಿದ್ಯಾ ಒಮೈಕ್ರಾನ್‌..?

3ನೇ ಅಲೆಗೆ ಮುನ್ನುಡಿ ಬರೆದೇ ಬಿಟ್ಟಿದ್ಯಾ ಒಮೈಕ್ರಾನ್‌..?

ಒಮೈಕ್ರಾನ್.. ಇದೇನು ಹೊಸ ವೈರಸ್‌ ಅಲ್ಲ.. ಕೊವಿಡ್‌ 19 ವೈರಸ್‌ನ ರೂಪಾಂತರಿ.. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡು ಅಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿಸಿತು. ಯಾವುದೇ ಸಾವು ನೋವು ಸಂಭವಿಸಿಲ್ಲ ಅನ್ನೋ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿದೆ. ಆದರೆ ತೊಂದರೆ ತಪ್ಪಿದ್ದಲ್ಲ.. ಹೌದು ಈಗಾಗಲೇ ಕೊರೋನಾ 2 ನೇ ಅಲೆ ರಾಜ್ಯದಲ್ಲಿ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ಇದರ ನಡುವೆಯೇ ಈಗ 3 ನೇ ಅಲೆ ಜನವರಿ ಹಾಗೂ ಫೆಬ್ರವರಿಯಲ್ಲಿ ತಾರಕಕ್ಕೆ ತಲುಪುವ ಸಾಧ್ಯತೆ ಇದೆ ಅಂತ IIT ಕಾನ್ಪುರದ ಪ್ರಾಧ್ಯಾಪಕ ಮಣೀಂದ್ರ ಅಗರ್ವಾಲ್‌ ಶಾಕಿಂಗ್ ಸುದ್ದಿ ಹೊರ ಹಾಕಿದ್ದಾರೆ.

ಹೌದು ನಿನ್ನೆ ಒಂದೇ ದಿನ ದೇಶದಲ್ಲಿ17 ಕೇಸ್ ದಾಖಲಾಗಿದ್ದು, 4 ದಿನಗಳ ಅಂತರದಲ್ಲಿ ಒಮೈಕ್ರಾನ್ ಸೋಂಕಿತರ ಸಂಖ್ಯೆ 21 ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ ಪಂಚರಾಜ್ಯ ಚುನಾವಣೆ ನಡೆಯುವ ಹೊತ್ತಿಗೆ ರೂಪಾಂತರಿ ಆರ್ಭಟಿಸಲಿದೆ ಎಂದು ಮಣೀಂದ್ರ ಅಗರ್ವಾಲ್‌ ಟ್ವೀಟ್‌ ಮಾಡಿದ್ದಾರೆ..

ಹೀಗಾಗಿ ಕೇಸ್‌ಗಳ ಸಂಖ್ಯೆ ಏರಿಕೆಯಾಗೋಕು ಮುನ್ನವೇ ಸರಳವಾದ ಲಾಕ್‌ಡೌನ್ ಅಗತ್ಯ ಅಂತ ಅಭಿಪ್ರಾಯ ಪಟ್ಟಿದ್ದಾರೆ . ಇನ್ನು ಈ ಹಿಂದೆ IIT ವೈದ್ಯರ ಸಮೀಕ್ಷೆ ನಿಜವಾಗಿದ್ದು, ಈ ಬಾರಿಯೂ ಕೂಡ IIT ಅವರ ವರದಿ ಸತ್ಯವಾಗಬಹುದು ಅನ್ನೋದು ವೈದ್ಯರ ಅಭಿಪ್ರಾಯವಾಗಿದೆ.

ಇನ್ನು, ಕೆಲ ವೈದ್ಯರು ಈ ವೈರಸ್‌ ಡೆಲ್ಟಾದಷ್ಟು ಡೇಂಜರ್‌ ಅಲ್ಲ.. ಸಾಮಾನ್ಯವಾಗಿ ನೆಗಡಿ ಕೆಮ್ಮಿನ ರೀತಿ ಬಂದು ಹೋಗುತ್ತದೆ. ಜನ ನಿರ್ಲಕ್ಷ್ಯ ಮಾಡದೇ ಜಾಗೃತಿ ವಹಿಸಬೇಕು ಅಂತಾರೆ . ಆದರೆ ಈ ಒಮೈಕ್ರಾನ್‌ ಡೆಲ್ಟಾಗಿಂತ ಹೆಚ್ಚು ಸಾಂಕ್ರಾಮಿಕವಾಗಿದ್ದು, ಡೆಲ್ಟಾದಷ್ಟು ಮಾರಣಾಂತಿಕವಾಗಿಲ್ಲ. ಮಕ್ಕಳ ಮೇಲೆ ಇದರ ಪರಿಣಾಮ ಹೆಚ್ಚಾಗಿ ಬೀರುವ ಸಾಧ್ಯತೆ ಹೆಚ್ಚಾಗಿದೆ.

ಒಟ್ಟಿನಲ್ಲಿ ಡೆಲ್ಟಾದಷ್ಟು ಅಪಾಯ ಇಲ್ಲವಾದ್ರೂ ಕೂಡ ಜನವರಿಯಲ್ಲಿ ಮೂರನೇ ಅಲೆಯ ಎಂಟ್ರಿ ಪಕ್ಕಾ.. ಫೆಬ್ರವರಿಯಲ್ಲಿ ಗರಿಷ್ಠಕ್ಕೆ ಹೋಗುತ್ತೆ ಅಂತ ಅಂದಾಜಿಸಲಾಗುತ್ತಿದೆ. ಹೀಗಾಗಿ ಸರ್ಕಾರ ಹಾಗೂ ಸಾರ್ವಜನಿಕರು ತಜ್ಞ ವೈದ್ಯರ ವರದಿಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಜೊತೆಗೆ, ಮಾಸ್ಕ್‌, ಸಮಾಜಿಕ ಅಂತ ಕಾಯ್ದುಕೊಂಡು ನಿಯಮ ಪಾಲನೆ ಮಾಡಬೇಕು..

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments