ಬೆಂಗಳೂರು : ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆ ಪಡೆದುಕೊಳ್ಲುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಕಿತ್ಸಾ ದರಪಟ್ಟಿಯನ್ನು ಇಮದು ಪರಿಷ್ಕರಿಸಿ ಬಿಡುಗಡೆಗೊಳಿಸಿದೆ. ಈವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವೇ ಕೊರೋನಾ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು, ಆದ್ರೆ ಇದೀಗ ಖಾಸಗಿ ಆಸ್ಪತ್ರೆಗಳಲ್ಲೂ ಕೊವಿಡ್ ರೋಗಿಗಳಿಗಿ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ, ಆದ್ರೆ ಸರ್ಕಾರ ನಿಗದಿ ಮಾಡಿರುವಂತಹಾ ದರದಲ್ಲೇ ಚಿಕಿತ್ಸೆ ನೀಡಬೇಕಿದೆ.
ಸರ್ಕಾರ ಅಧೀನದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಜನರಲ್ ವಾರ್ಡ್ಗೆ ಪ್ರತಿ ದಿನಕ್ಕೆ 5000 ರೂಪಾಯಿ ನೀಡಬೇಕಾಗಿದೆ. ಅದೇ ರೀತಿ ಎಚ್ಡಿಯು ವಾರ್ಡ್ಗೆ ದಿನಕ್ಕೆ-7000 ರೂಪಾಯಿ, ಐಸಿಯು- 8,500, ವೆಂಟಿಲೇಟರ್ ಇರುವ ಐಸಿಯುಗೆ – 10,000 ನಿಗದಿ ಮಾಡಲಾಗಿದೆ.
ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಕೋವಿಡ್- 19 ರೋಗಿಗಳಿಗೆ ಜನರಲ್ ವಾರ್ಡ್- 10,000, ಎಚ್ಡಿಯು- 12,000,ಐಸಿಯು- 15,000 ಹಾಗೂ ವೆಂಟಿಲೇಟರ್ ಸಹಿತ ಐಸಿಯುಗೆ- 25,000 ರೂಪಾಯಿ ಪ್ರತಿದಿನಕ್ಕೆ ಎಂದು ಸರ್ಕಾರ ದರ ನಿಗದಿಪಡಿಸಿದೆ.
ಆದ್ರೆ ಬಿಪಿಎಲ್, ಎಪಿಎಲ್, ವಲಸೆ ಕಾರ್ಮಿಕರು ಮತ್ತು ಬೇರೆ ರಾಜ್ಯಗಳಿಂದ ಆಗಮಿಸಿ ಪಡಿತರ ಚೀಟಿ ಇಲ್ಲದವರ ಸಂಪೂಣ್ ಚಿಕಿತ್ಸಾ ವೆಚ್ಚವನ್ನು ಸರ್ಕಾರಿ ಸ್ವಾಮ್ಯದ ಸುವರ್ಣ ಸುರಕ್ಷಾ ಯೋಜನೆಯ ಮುಖಾಂತರ ಭರಿಸಲಾಗುವುದು. ಯಾವುದೇ ಕಾರಣಕ್ಕೂ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ದರವನ್ನು ಆಸ್ಪತ್ರೆಗಳು ಪಡೆಯುವಂತಿಲ್ಲ ಎಂದು ಸೂಚಿಸಲಾಗಿದೆ. ಹೆಚ್ಚಿನ ದರ ಪಡೆದ ಬಗ್ಗೆ ವರದಿಯಾದಲ್ಲಿ ಸರ್ಕಾರ ಈ ಬಗ್ಗೆ ಕಾನೂನು ರಿತ್ಯಾ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.