Home ರಾಜ್ಯ ‘ಹಂತ ಹಂತವಾಗಿ ಕ್ಲಾಸ್ ನಡೆಸಲು ಸರ್ಕಾರ ತೀರ್ಮಾನ’

‘ಹಂತ ಹಂತವಾಗಿ ಕ್ಲಾಸ್ ನಡೆಸಲು ಸರ್ಕಾರ ತೀರ್ಮಾನ’

ಬೆಂಗಳೂರು: ಕಿಲ್ಲರ ಕೊರೋನ ನಡುವೆ ಜನವರಿ 1 ರಿಂದ 10, 12ನೇ ತರಗತಿಗಳನ್ನು ಎಲ್ಲ ಮುಂಜಾಗ್ರತ ಕ್ರಮಗಳೊಂದಿಗೆ ಪ್ರಾರಂಭ ಮಾಡಲಾಗುತ್ತೆದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.

ಜನವರಿ 1 ರಿಂದ 6-9 ನೇ ತರಗತಿಯವರಿಗೆ ವಿದ್ಯಾಗಮ ತರಗತಿ ಪ್ರಾರಂಭಿಸಲಾಗುವುದು. ಜನವರಿಗೆ 14 ರಿಂದ 1-5 ನೇ ತರಗತಿಯವರಿಗೆ ವಾರದಲ್ಲಿ 3 ದಿನ ತರಗತಿಯನ್ನು ನಡೆಸಲು ಸರ್ಕಾರ ಸೂಚನೆ ನೀಡಿದೆ. ನಂತರ ಹಂತ ಹಂತವಾಗಿ ತರಗತಿ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದರು.

ಶಾಲೆಗಳ ಆರಂಭಕ್ಕೆ ಮಾರ್ಗಸೂಚಿ ಬಿಡುಗಡೆ

 • ಕೊರೋನ ಮುಂಜಾಗ್ರತಾ ಕ್ರಮದೊಂದಿಗೆ ಸ್ಕೂಲ್ ಸ್ಟಾರ್ಟ್
 • ಶಾಲೆ ಆವರಣದಲ್ಲೇ ಮತ್ತೆ ವಿದ್ಯಾಗಮ ಆರಂಭ
 • ಖಾಸಗಿ ಶಾಲೆಗಳಲ್ಲೂ ವಿದ್ಯಾಗಮ ಆರಂಭಿಸಲು ಮನವಿ
 • ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟ ನೀಡದಿರಲು ನಿರ್ಧಾರ
 • ಸ್ಕೂಲ್ ಗೆ ಬರುವ ಮಕ್ಕಳು ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು
 • ಮಕ್ಕಳು ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಿಸಿಕೊಂಡು ಬರಬೇಕು
 • ಹಾಸ್ಟೆಲ್ ವಿದ್ಯಾರ್ಥಿಗಳು, ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಕಡ್ಡಾಯ
 • ಆನ್ ಲೈನ್ ಮೂಲಕವೂ ಮಕ್ಕಳಿಗೆ ಪಾಠ ನಡೆಸಲು ತೀರ್ಮಾನ
 • ಒಂದು ಕೊಠಡಿಯಲ್ಲಿ ಕೇವಲ 15 ವಿದ್ಯಾರ್ಥಿಗಳಿಗೆ ಅವಕಾಶ
 • ಶೀಘ್ರವೇ ರಾಜ್ಯ ಸರ್ಕಾರದಿಂದ ವೇಳಾಪಟ್ಟಿ ಪ್ರಕಟ ಸಾದ್ಯತೆ

ಶಾಲೆಗಳ ಸಿದ್ಧತೆ ಹೇಗೆ?

 • ಶಾಲೆ ಆರಂಭಕ್ಕೂ ಮುನ್ನ ಕೊಠಡಿಗಳನ್ನು ಸ್ವಚ್ಛ ಮಾಡಲು ಸೂಚನೆ
 • ಮಕ್ಕಳಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು
 • ಕಡ್ಡಾಯವಾಗಿ ಮಕ್ಕಳು ಸೋಪು, ಸ್ಯಾನಿಟೈಸರ್ ಬಳಸಬೇಕು
 • ಎಲ್ಲಾ ಶಾಲೆಗಳು ಡಿಜಿಟಲ್ ಥರ್ಮಲ್ ಮಿಟರ್ ಹೊಂದಿರಬೇಕು
 • ಹೆಚ್ಚಿನ ನೇರವು ಬೇಕಾದಲ್ಲಿ ಸ್ಥಳೀಯ ಆಡಳಿತ ಸಂಸ್ಥೆ ಸಂಪರ್ಕಿಸಬೇಕು

ಶಾಲೆಯಲ್ಲಿ ವಿದ್ಯಾರ್ಥಿಗಳು ಹೇಳಿರಬೇಕು?

 • ಮಕ್ಕಳಿಗೆ ಸೋಂಕಿನ ಲಕ್ಷಣಗಳಿದ್ದರೆ ಶಾಲೆಗೆ ಕಳಿಸಬಾರದು
 • ಪ್ರತಿ ವಿದ್ಯಾರ್ಥಿಯು ಮಾಸ್ಕ್ ಧರಿಸುವುದು ಕಡ್ಡಾಯ
 • ವಿದ್ಯಾರ್ಥಿಗಳು ಅಗತ್ಯವಿರುವ ಪುಸ್ತಕ ಮಾತ್ರ ಶಾಲೆಗೆ ತರಬೇಕು
 • ಪುಸ್ತಕಗಳನ್ನು ಬೇರೆ ವಿದ್ಯಾರ್ಥಿಗಳ ಜೊತೆ ಹಮಚಿಕೊಳ್ಳುವಂತಿಲ್ಲ
 • ಮಕ್ಕಳಿಗೆ ಶಾಲಾ ಸುತ್ತ-ಮುತ್ತ ತಿಂಡಿ ಮಾರುವವರಿಗೆ ಅವಕಾಶವಿಲ್ಲ
 • ವಿದ್ಯಾರ್ಥಿಗಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕ್ರಮ
 • ಯೋಗ, ಪ್ರಾಣಯಾಮ, ವ್ಯಾಯಾಮಕ್ಕೆ ಪ್ರೇರೇಪಣೆ
 • ಪ್ರತಿ ಸ್ಕೂಲ್ ನಲ್ಲಿ ಐಸೋಲೇಷನ್ ಕೊಠಡಿ ಸ್ಥಾಪಿಸಲು ಸೂಚನೆ

 

 

LEAVE A REPLY

Please enter your comment!
Please enter your name here

- Advertisment -

Most Popular

ಪರೀಕ್ಷೆ ಬೇಡ ಅಂತ ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ

ಬೆಂಗಳೂರು : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹಿಂದಿನ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಭೌತಿಕ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ, ಇದನ್ನು ಖಂಡಿಸಿ ನಗರದ ಮೌರ್ಯ ಸರ್ಕಲ್​ನಲ್ಲಿ  ಎನ್​​​ಎಸ್​​ಯುಐ ಸಂಘಟನೆ ಪ್ರತಿಭಟನೆ ನಡೆಸಿತು. ರಾಜ್ಯ...

ಸಚಿವ ಶಾಸಕರುಗಳ ಗುಪ್ತ ಗುಪ್ತ ಸಭೆ

ಚಿಕ್ಕಮಗಳೂರು : ಸಂಪುಟ ವಿಸ್ತರಣೆ ಖಾತೆ ಹಂಚಿಕೆ ಅಸಮಾಧಾನದ ಬೇಗುದಿ ಮಧ್ಯೆ ಬಿಜೆಪಿಯೊಳಗೆ ಹೊಸ ಬಂಡಾಯ ಬೂದಿ ಮುಚ್ಚಿದಂತೆ ಇದೆ ಪಕ್ಷದೊಳಗೆ ಒಂದೆರಡಲ್ಲ, ಹಲವು ಬಣಗಳು ರೂಪುಗೊಂಡಂತೆ ತೋರುತ್ತಿವೆ. ಸಚಿವ ಸ್ಥಾನ ಸಿಗದವರದ್ದು...

ಮಗಳಿಂದ ತಂದೆಯ ಅಂತ್ಯ ಸಂಸ್ಕಾರ

ಕಾರವಾರ : ಹೃದಯಾಘಾತದಿಂದ ಮೃತಪಟ್ಟಿದ್ದ ತಂದೆಯ ಅಂತ್ಯ ಸಂಸ್ಕಾರವನ್ನು ಮಗಳೇ ನೆರವೇರಿಸಿದ ಘಟನೆ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ನಿಪೇಟೆಯಲ್ಲಿ ನಡೆದಿದೆ.ಕುರ್ನಿಪೇಟೆಯ ಚಂದ್ರಕಾಂತ ಬುದೊ ಪಾಗಿ (56) ಹೃದಯಾಘಾತದಿಂದ ಮೃತಪಟ್ಟಿದ್ದರು. 9...

ಉದ್ಧವ್ ಠಾಕ್ರೆ ಹೇಳಿಕೆಗೆ ಸಿಲಿಕಾನ್ ಸಿಟಿ ಮರಾಠಿಗರಿಂದ ವಿರೋಧ

ಬೆಂಗಳೂರು : ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ದಿನ ದಿನಕ್ಕೆ ಪ್ರತಿಭಟನೆಗಳು ಜಾಸ್ತಿಯಾಗುತ್ತಿವೆ. ಇವತ್ತು ನಗರದ ಮೌರ್ಯ ಸರ್ಕಲ್​ನಲ್ಲಿ ಸಿಲಿಕಾನ್ ಸಿಟಿಯ ಮರಾಠಿಗರೆಲ್ಲಾ ಒಂದೆಡೆ ಸೇರಿ ತೀವ್ರ ವಿರೋಧ ವ್ಯಕ್ತ ಪಡಿಸಿದ್ರು....

Recent Comments