ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸೂಪರ್ ಹಿಟ್ ಸಿನಿಮಾಗಳಲ್ಲಿ ಗೂಗ್ಲಿ ಕೂಡ ಒಂದು. 2013ರಲ್ಲಿ ರಿಲೀಸ್ ಆದ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಡೈರೆಕ್ಟರ್ ಪವನ್ ಒಡೆಯರ್. ಯಶ್ ಮತ್ತು ಒಡೆಯರ್ ಕಾಂಬಿನೇಷನ್ ದೊಡ್ಡಮಟ್ಟಿನ ಯಶಸ್ಸು ಪಡೆದಿತ್ತು.
ಗೂಗ್ಲಿ -2 ಬಗ್ಗೆ ಆಗಾಗ ಮಾತುಗಳು ಕೇಳಿಬರುತ್ತಲೇ ಇರುತ್ತೆ. ಆ ಬಗ್ಗೆ ಇದೀಗ ಪವನ್ ಒಡೆಯರ್ ಮಾತಾಡಿದ್ದಾರೆ. ಪವರ್ ಟಿವಿಯ `ಲಾಕ್ಡೌನ್ ಡೈರಿ with ರಹಮಾನ್’ ಕಾರ್ಯಕ್ರಮದಲ್ಲಿ ಅದರ ಸುಳಿವು ನೀಡಿದ್ದಾರೆ. ಯಶ್ ಜೊತೆ ಸಿನಿಮಾ ಮಾಡೋ ಅವಕಾಶವನ್ನು ಯಾರ್ ಬಿಡ್ತಾರೆ ಹೇಳಿ? ಗೂಗ್ಲಿ -2 ಮಾಡಿ ಮಾಡಿ ಅಂತ ಸಾಕಷ್ಟು ಜನ ಕೇಳ್ತಿದ್ದಾರೆ. ಆ ಬಗ್ಗೆ ಪ್ಲ್ಯಾನ್ ಇದೆ… ಬಹುಶಃ ಟೈಟಲ್ ಬೇರೆ ಇರಬಹುದೇನೋ ಅಂತ ಹೇಳಿದ್ದಾರೆ.
ಪವನ್ ಒಡೆಯರ್ ಗೂಗ್ಲಿ -2 ಬಗ್ಗೆ ಏನಂದಿದ್ದಾರೆ ಅನ್ನೋದನ್ನು ನೀವೇ ನೋಡಿ…