ಇದು ಸೋಶಿಯಲ್ ಮೀಡಿಯಾ ಜಮಾನ… ಸಾಕಷ್ಟು ವೆಬ್ಸೈಟ್ ಗಳು ತಮ್ಮ ಮನಬಂದ ಸುದ್ದಿಗಳನ್ನು, ಸಿದ್ಧಾಂತಗಳನ್ನು ವಿವೇಚನೆ ಇಲ್ದೆ ಹರಿ ಬಿಡುತ್ತಲೇ ಇರುತ್ತವೆ. ಹಲವಾರು ಮಾರ್ಗಗಳಲ್ಲಿ ದುಡ್ಡುಗಳಿಸಲು, ಸುದ್ದಿ ವೈರಲ್ ಗೀಳಿಗೆ ಬಿದ್ದು ಸುಳ್ಳು ಸುದ್ದಿಗಳಿಗೆ ಮಸಾಲೆ ಹಾಕಿ ಪೋಸ್ಟ್ ಮಾಡುತ್ತಿವೆ… ಇವುಗಳಿಗೆ ಕಡಿವಾಣ ಹಾಕಲು ಇದೀಗ ಪ್ರತಿಷ್ಠಿತ ಸರ್ಚ್ ಇಂಜಿನ್ ಗೂಗಲ್ ಮುಂದಾಗಿದೆ.
ಹೌದು ಕೋವಿಡ್ -19 ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನು ಉತ್ತೇಜಿಸುವ ವೆಬ್ಸೈಟ್ ಗಳಿಗೆ ಪಾಠ ಕಲಿಸಲು ಗೂಗಲ್ ಮುಂದಾಗಿದೆ. ಅಂಥಾ ವೆಬ್ಸೈಟ್ಗಳಿಂದ ಜಾಹಿರಾತುಗಳನ್ನು ನಿರ್ಭಂದಿಸುವುದಾಗಿ ಗೂಗಲ್ ಹೇಳಿದೆ. ಅಲ್ಲದೆ ವೆಬ್ಸೈಟ್ಗಳ ನಿಯಮಗಳನ್ನು ಮೀರುವ ವೆಬ್ ಪಬ್ಲಿಷರ್ ಹಾಗೂ ಜಾಹಿರಾತುದಾರರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಗೂಗಲ್ ಜಾಹಿರಾತುಗಳ ಮೂಲಕ ಹಣಗಳಿಸಲು ಮುಂದಾಗೋ ವೆಬ್ ಪಬ್ಲಿಷರ್ಗಳು ಯಾವ್ದೇ ರೀತಿಯ ಆಧಾರಗಳಿಲ್ಲದೆ ಬೇಕಾಬಿಟ್ಟಿ, ಮನಸೋ ಇಚ್ಛೆ ಸುದ್ದಿಗಳನ್ನು , ಜಾಹಿರಾತುಗಳನ್ನು. ಸಿದ್ಧಾಂತಗಳನ್ನು ಉತ್ತೇಜಿಸೋದನ್ನು ಪತ್ತೆ ಮಾಡಲು ಕಾರ್ಯಪ್ರವೃತ್ತವಾಗಿದೆ. ಕೋವಿಡ್ ಹಾಗೂ ಇಂಥಾ ಸಾಂಕ್ರಮಿಕ ರೋಗಗಳನ್ನು ಬಂಡವಾಳವನ್ನಾಗಿಸಿಕೊಂಡು ಲಾಭ ಪಡೆಯಲು ಪ್ರಯತ್ನಿಸುತ್ತಿದ್ದ 200 ದಶಲಕ್ಷಕ್ಕೂ ಹೆಚ್ಚಿನ ಜಾಹಿರಾತುಗಳನ್ನು ತೆಗೆದುಹಾಕಿದೆ.
ಗೂಗಲ್ ಒಡೆತನದ ಯೂಟ್ಯೂಬ್ ಕೋವಿಡ್ -19ಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ, ಇಲ್ಲಸಲ್ಲದ್ದನ್ನು ಪ್ರಕಟಿಸಿ ಹಣಗಳಿಕೆ ಮಾಡೋ ತನ್ನ ಚಾನಲ್ ಗಳನ್ನು ಬ್ಯಾನ್ ಮಾಡಿದೆ. ಹೀಗೆ ಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತಲೇ ಇದ್ದರೆ ಅಂಥಾ ವೆಬ್ಸೈಟ್ ಗಳು ಮತ್ತು ಸಂಬಂಧಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ಬೆಲ್ ಬಡಿದಿದೆ.