ಹೊಸ ನ್ಯೂಸ್ ಪಬ್ಲಿಷಿಂಗ್ ಫ್ಲಾಟ್​ಫಾರ್ಮ್​: ಪತ್ರಕರ್ತರಿಗೆ ಗೂಗಲ್​ ನೆರವು

0
8799

ಪ್ರಾದೇಶಿಕ ಹಾಗೂ ಸಣ್ಣ ಸುದ್ದಿ ವಾಹಿನಗಳು ಡಿಜಿಟಲ್​ ಮುಖ್ಯ ವಾಹಿನಿಗೆ ಬರಲು ಸಾಕಷ್ಟು ಅಡೆತಡೆಗಳಿದ್ದು, ಅವರಿಗೆ ನೆರವಾಗಲು ಗೂಗಲ್ ನಿರ್ಧರಿಸಿದೆ. ಮುಖ್ಯವಾಗಿ ಸಣ್ಣ ಸುದ್ದಿವಾಹಿನಗಳಿಗಾಗಿಯೇ ಪಬ್ಲಿಶಿಂಗ್ ಫ್ಲಾಟ್​ಫಾರ್ಮ್​ನ್ನು ಗೂಗಲ್​ ಆರಂಭಿಸಲಿದೆ.

ಗೂಗಲ್​ ನ್ಯೂಸ್​ ಇನಿಶಿಯೇಟಿವ್ ವೆಬ್ ಡೆವಲಪ್​ಮೆಂಟ್​ ಕಂಪನಿಗಳಾದ ಅಟೊಮೆಟಿಕ್ ಹಾಗೂ ವರ್ಡ್​ಪ್ರೆಸ್​ ಡಾಟ್ ಕಾಂ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಕಂಪನಿಗಳು ಶೇ.30ಕ್ಕೂ ಹೆಚ್ಚು ವೆಬ್​ಸೈಟ್​ಗಳನ್ನು ಹೊಂದಿದ್ದು, ಹೊಸ ನ್ಯೂಸ್​ಪ್ಯಾಕ್ ಆರಂಭಿಸಲು ಗೂಗಲ್​ 8ವರೆ ಕೋಟಿ ರೂಪಾಯಿ ಬಂಡವಾಳ ಹೂಡಿದೆ. ಹೊಸ ನ್ಯೂಸ್​ ಫ್ಲಾಟ್​ಫಾರ್ಮ್​ ಫಾಸ್ಟ್​ ಆಗಿ ಕೆಲಸ ಮಾಡಲಿದ್ದು, ಹೆಚ್ಚು ಸುರಕ್ಷಿತವಾಗಿರಲಿದೆ. ಹಾಗೇ ಲೋಕಲ್​ ಸುದ್ದಿ ಸಂಸ್ಥೆಗಳಿಗೆ ನೆರವಾಗುವಂತೆ ಕಡಿಮೆ ವೆಚ್ಚದಲ್ಲಿ ಕೆಲಸ ಮಾಡಲಿದೆ. ವರ್ಷಾಂತ್ಯಕ್ಕೆ ಈ ಸೇವೆ ಜಗತ್ತಿನಾದ್ಯಂತ ಲಭ್ಯವಾಗಲಿದೆ ಅಂತ ಗೂಗಲ್​ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ಡಿಜಿಟಲ್​ ಪಬ್ಲಿಕೇಷನ್​ಗಳಿಂದಾಗಿ ಪತ್ರಿಕೆಗಳು ಟೆಕ್ನಿಕಲ್​ ಹಾಗೂ ಉದ್ಯಮ ಕ್ಷೇತ್ರದಲ್ಲಿ ಮುಂದುವರಿಲು ಕಷ್ಟ ಪಡುತ್ತಿವೆ. ಹಾಗಾಗಿ ಪತ್ರಕರ್ತರು ವೆಬ್​ಸೈಟ್​ ಡಿಸೈನಿಂಗ್​, ಸಿಎಂಎಸ್​ಗಳನ್ನು ಸರಿ ಮಾಡುವುದು ಮೊದಲಾದ ಟೆಕ್ನಿಕಲ್ ವಿಚಾರದಲ್ಲಿ ತಲೆಕೆಡಿಸಿಕೊಳ್ಳದೆ ಕೆಲಸ ಮಾಡುವಂತಾಗಬೇಕು ಅಂತ ಗೂಗಲ್​ನ ಉತ್ಪನ್ನ ನಿರ್ವಹಣೆ ನಿರ್ದೇಶಕ ಜಿಮ್​ ಆಲ್ಬ್ರೆಕ್ಟ್​ ತಿಳಿಸಿದ್ದಾರೆ.

1 COMMENT

LEAVE A REPLY

Please enter your comment!
Please enter your name here