ಪ್ರಾದೇಶಿಕ ಹಾಗೂ ಸಣ್ಣ ಸುದ್ದಿ ವಾಹಿನಗಳು ಡಿಜಿಟಲ್ ಮುಖ್ಯ ವಾಹಿನಿಗೆ ಬರಲು ಸಾಕಷ್ಟು ಅಡೆತಡೆಗಳಿದ್ದು, ಅವರಿಗೆ ನೆರವಾಗಲು ಗೂಗಲ್ ನಿರ್ಧರಿಸಿದೆ. ಮುಖ್ಯವಾಗಿ ಸಣ್ಣ ಸುದ್ದಿವಾಹಿನಗಳಿಗಾಗಿಯೇ ಪಬ್ಲಿಶಿಂಗ್ ಫ್ಲಾಟ್ಫಾರ್ಮ್ನ್ನು ಗೂಗಲ್ ಆರಂಭಿಸಲಿದೆ.
ಗೂಗಲ್ ನ್ಯೂಸ್ ಇನಿಶಿಯೇಟಿವ್ ವೆಬ್ ಡೆವಲಪ್ಮೆಂಟ್ ಕಂಪನಿಗಳಾದ ಅಟೊಮೆಟಿಕ್ ಹಾಗೂ ವರ್ಡ್ಪ್ರೆಸ್ ಡಾಟ್ ಕಾಂ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಕಂಪನಿಗಳು ಶೇ.30ಕ್ಕೂ ಹೆಚ್ಚು ವೆಬ್ಸೈಟ್ಗಳನ್ನು ಹೊಂದಿದ್ದು, ಹೊಸ ನ್ಯೂಸ್ಪ್ಯಾಕ್ ಆರಂಭಿಸಲು ಗೂಗಲ್ 8ವರೆ ಕೋಟಿ ರೂಪಾಯಿ ಬಂಡವಾಳ ಹೂಡಿದೆ. ಹೊಸ ನ್ಯೂಸ್ ಫ್ಲಾಟ್ಫಾರ್ಮ್ ಫಾಸ್ಟ್ ಆಗಿ ಕೆಲಸ ಮಾಡಲಿದ್ದು, ಹೆಚ್ಚು ಸುರಕ್ಷಿತವಾಗಿರಲಿದೆ. ಹಾಗೇ ಲೋಕಲ್ ಸುದ್ದಿ ಸಂಸ್ಥೆಗಳಿಗೆ ನೆರವಾಗುವಂತೆ ಕಡಿಮೆ ವೆಚ್ಚದಲ್ಲಿ ಕೆಲಸ ಮಾಡಲಿದೆ. ವರ್ಷಾಂತ್ಯಕ್ಕೆ ಈ ಸೇವೆ ಜಗತ್ತಿನಾದ್ಯಂತ ಲಭ್ಯವಾಗಲಿದೆ ಅಂತ ಗೂಗಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ಡಿಜಿಟಲ್ ಪಬ್ಲಿಕೇಷನ್ಗಳಿಂದಾಗಿ ಪತ್ರಿಕೆಗಳು ಟೆಕ್ನಿಕಲ್ ಹಾಗೂ ಉದ್ಯಮ ಕ್ಷೇತ್ರದಲ್ಲಿ ಮುಂದುವರಿಲು ಕಷ್ಟ ಪಡುತ್ತಿವೆ. ಹಾಗಾಗಿ ಪತ್ರಕರ್ತರು ವೆಬ್ಸೈಟ್ ಡಿಸೈನಿಂಗ್, ಸಿಎಂಎಸ್ಗಳನ್ನು ಸರಿ ಮಾಡುವುದು ಮೊದಲಾದ ಟೆಕ್ನಿಕಲ್ ವಿಚಾರದಲ್ಲಿ ತಲೆಕೆಡಿಸಿಕೊಳ್ಳದೆ ಕೆಲಸ ಮಾಡುವಂತಾಗಬೇಕು ಅಂತ ಗೂಗಲ್ನ ಉತ್ಪನ್ನ ನಿರ್ವಹಣೆ ನಿರ್ದೇಶಕ ಜಿಮ್ ಆಲ್ಬ್ರೆಕ್ಟ್ ತಿಳಿಸಿದ್ದಾರೆ.
Hi there! I could have sworn I’ve been to this site before but after
browsing through some of the articles I realized it’s new
to me. Anyhow, I’m definitely delighted I discovered it and
I’ll be bookmarking it and checking back regularly!