ಚಿಕ್ಕಮಗಳೂರು : ಭಾರಿ ಮಳೆಯಿಂದಾಗಿ ರಸ್ತೆ ಕಾಣದೆ ವಾಹನವೊಂದು ಪಾತಾಳಕ್ಕೆ ಉರುಳಿರುವ ಘಟನೆ ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಚಾರ್ಮಾಡಿ ಹೆದ್ದಾರಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿ ಘಾಟ್ ರಸ್ತೆ 5ನೇ ತಿರುವಿನಲ್ಲಿ ಈ ಅವಘಡ ಸಂಭವಿಸಿದ್ದು, ಭಾರಿ ಮಳೆಯಿಂದಾಗಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 200 ಅಡಿ ಪಾತಾಳಕ್ಕೆ ಟಂ ಟಂ ವಾಹನ ಉರುಳಿ ಬಿದ್ದಿದೆ. ಬೆಂಗಳೂರಿನಿಂದ ಮಂಗಳೂರಿಗೆ ಅಲ್ಯೂಮಿನಿಯಂ ತಂತಿಯನ್ನು ಲೋಡ್ ಮಾಡಿಕೊಂಡು ತೆರಳುವ ವೇಳೆ ರಸ್ತೆಯ ಬದಿಗೆ ಜರುಗಿದ ವಾಹನ ನಿಯಂತ್ರಣ ತಪ್ಪಿ ಏಕಾಏಕಿ ಪಾತಾಳಕ್ಕೆ ಬಿದ್ದಿದೆ. ಸ್ಥಳಕ್ಕೆ ಸ್ಥಳೀಯರು ಧಾವಿಸಿ ವಾಹನ ತೆರುವು ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಇನ್ನು ಮಳೆಗಾಲ ಆರಂಭವಾಯಿತೆಂದರೆ ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ವಾಹನಗಳು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು ಸಾಮಾನ್ಯವಾಗಿದೆ. ಆದಷ್ಟು ಬೇಗ ಸರ್ಕಾರ ತಿರುವಿನಲ್ಲಿ ರಸ್ತೆಗಳ ಅಗಲೀಕರಣ ಸೇರಿದಂತೆ ಅಪಘಾತ ವಲಯಗಳಲ್ಲಿ ಚಾಲಕರಿಗೆ ಗೋಚರವಾಗುವಂತೆ ಸೂಚನಾ ಫಲಕಗಳನ್ನು ಅಳವಡಿಸುವಂತೆ ವಾಹನ ಸವಾರರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ…
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on
ಕೊರೊನ ನಡುವೆಯೇ ನಾಳೆಯಿಂದ ರಾಜ್ಯಾದ್ಯಂತ ಕೆ-ಸಿಇಟಿ ಪರೀಕ್ಷೆ , ಕೊರೊನ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು
on