Home ಸಿನಿ ಪವರ್ ಬರ್ತ್​​ಡೇ ಸೆಲೆಬ್ರೇಟ್ ಮಾಡಿಕೊಳ್ಲಿಲ್ಲ... ಗಿಫ್ಟ್ ಕೊಡೋದನ್ನು ಮರೀಲಿಲ್ಲ..!

ಬರ್ತ್​​ಡೇ ಸೆಲೆಬ್ರೇಟ್ ಮಾಡಿಕೊಳ್ಲಿಲ್ಲ… ಗಿಫ್ಟ್ ಕೊಡೋದನ್ನು ಮರೀಲಿಲ್ಲ..!

‘ಚೆಲ್ಲಾಟ’ ವಾಡುತ್ತ ನಾಯಕ ನಟನಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟು ‘ಮಳೆಯಲಿ ಜೊತೆಯಲಿ’ ಎನ್ನುತ್ತಾ ‘ಮುಂಗಾರು ಮಳೆ’ ಸುರಿಸಿ ಕನ್ನಡಿಗರ ಹೃದಯದ ‘ಅರಮನೆ’ಯಲ್ಲಿ  ‘ಚೆಲುವಿನ ಚಿತ್ತಾರ’ ಬಿಡಿಸಿದ ‘ಹುಡುಗಾಟ’ದ ಹುಡುಗ ಚಂದನವನದ ಗೋಲ್ಡನ್ ಸ್ಟಾರ್.

‘ಖುಷಿ ಖುಷಿಯಾಗಿ’ ಕಿರುತೆರೆ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ ವೀಕ್ಷಕರ ಮುಖದಲ್ಲಿ ‘ಮುಗುಳು ನಗೆ’ ತಂದು, ‘ಕೂಲ್’ ಆಗಿ ಚಂದನವನದಲ್ಲಿ ಛಾಪು ಮೂಡಿಸಿ ಸಿನಿ ಪ್ರಿಯರ ಮನ ಗೆದ್ದ  ‘ಸುರಸುಂದರಾಂಗ ಜಾಣ’. ಎಲ್ಲರ ಅಚ್ಚುಮೆಚ್ಚಿನ ‘ರೋಮಿಯೋ’ ಗಣೇಶ್​ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ.

ಮಗುವಿನಂತೆ ನಗುತ್ತಾ ನಗಿಸುತ್ತಾ ‘ಗಾಳಿಪಟ’ ಹಾರಿಸಿ ‘ಸರ್ಕಸ್​ ‘ ಮಾಡಿ ಸಿನಿ ರಂಗದಲ್ಲಿ ಯಶಸ್ಸು ಕಂಡ ‘ಬೊಂಬಾಟ್​ ‘ ಸ್ಟಾರ್ ಈ ‘ಆಟೋ ರಾಜ’.   ಇವರ ಸಿನಿಮಾ ನೋಡ್ತಾ ಇದ್ರೆ  ‘ಏನೋ ಒಂಥರಾ’  ‘ಉಲ್ಲಾಸ ಉತ್ಸಾಹ’. ಇವರ ಯಾವ್ದೇ ಸಿನಿಮಾ ತೆಗೆದುಕೊಳ್ಳಿ ಮನರಂಜನೆ 100 %. ಇಷ್ಟ ಆಗ್ದೇ ಇರೋ ಸಿನಿಮಾಗಳೇ ಇಲ್ಲ ಅಂದ್ರೆ ತಪ್ಪಲ್ಲ.

‘ಮುಂಜಾನೆ’ಯೇ ಆಗಿರಲಿ, ಮುಸ್ಸಂಜೆಯೇ ಆಗಿರಲಿ,  ‘ಮದುವೆ ಮನೆ’ ಆಗಿರಲಿ,  ‘ಅರಮನೆ’ಯೇ ಆಗಿರಲಿ ‘Zoom’ ಆಗಿ ಈ ‘ಕೃಷ್ಣ’ ಎಂಟ್ರಿ ಕೊಟ್ಟರೆ ಹಾಸ್ಯದ ‘ಬುಗರಿ’ ಬಿಟ್ಟು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿ ಸಂಭ್ರಮ ಹೆಚ್ಚಿಸ್ತಾರೆ.

ಶ್ರಾವಣಿಯ ಹೃದಯದಲ್ಲಿ ಪ್ರೀತಿಯನ್ನು ಹುಟ್ಟು ಹಾಕಿದ ಸುಬ್ರಮಣ್ಯ, ದಿಲ್ ರಂಗೀಲ ಎಂದು ಹುಡುಗಿಯರ ಮನ ಗೆದ್ದ ಚೋರ. ಕನ್ನಡಿಗರೆಲ್ಲರ ಮುಖದಲ್ಲಿ ನಗು ಅರಳಿಸಿ ಮಿಂಚುತ್ತಿರುವ ಹೆಮ್ಮೆಯ ಕಲಾವಿದ ಸ್ಯಾಂಡಲ್​ವುಡ್​ನ ಈ ಮಾತಿನ ‘ಪಠಾಕಿ’.

ಕನ್ನಡಿಗರ ಮನದ ರಾಜ  ಈ ಗೋಲ್ಡನ್ ಸ್ಟಾರ್ ಅವರ ಹುಟ್ಟುಹಬ್ಬ ಪ್ರತಿವರ್ಷ ಬಹಳ ಅದ್ಧೂರಿಯಾಗಿ ನೆರವೇರುತ್ತಿತ್ತು. ಅಭಿಮಾನಿಗಳ ಜೊತೆ ಗಣಿ ಬರ್ತ್​ಡೇ ಸೆಲಬ್ರೇಟ್ ಮಾಡ್ತಿದ್ರು. ಆದ್ರೆ, ತಂದೆಯ ಅಗಲಿಕೆ ನೋವಿನಲ್ಲಿರುವ ಗಣಿ ಈ ಬಾರಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿಲ್ಲ.

ನೆಚ್ಚಿನ ನಟನ ಮನವಿಯಂತೆ ಅಭಿಮಾನಿಗಳು ಕೂಡ ಗಣಿ ಅವರ ಬರ್ತ್​ ಡೇಯನ್ನು ಸೆಲಬ್ರೇಟ್ ಮಾಡ್ತಿಲ್ಲ. ಅಭಿಮಾನಿಗಳು ಗಣಿಗೆ ಮೆಸೇಜ್,  ಫೇಸ್​ಬುಕ್ ಪೋಸ್ಟ್, ಟ್ವೀಟ್​ ಮೂಲಕ ವಿಶ್ ಮಾಡ್ತಿದ್ದಾರೆ. ಜೊತೆಗೆ ಸೆಲಬ್ರೆಟಿಗಳು ಕೂಡ  ಗಣೇಶ್ ಅವರಿಗೆ ಶುಭ ಹಾರೈಸಿದ್ದಾರೆ.

ಇನ್ನು ಕಳೆದ ವರ್ಷದ ಕೊನೆಯಲ್ಲಿ ‘ಆರೆಂಜ್’ ಗಿಫ್ಟ್ ಕೊಟ್ಟಿದ್ದ ಗಣೇಶ್ ಈ ವರ್ಷ ಈಗಾಗಲೇ ’99’ ಗಿಫ್ಟ್ ಕೊಟ್ಟಿದ್ದಾರೆ. ಇನ್ನು ಗಣಿ ‘ಗಿಮಿಕ್ ‘ ರಿಲೀಸ್​​​​ ಗೆ ರೆಡಿಯಾಗ್ತಿದೆ. ಬರ್ತ್​ ಡೇ ಪ್ರಯುಕ್ತ ಗಣಿ  ‘ಗೀತಾ’ ಸಿನಿಮಾದ ಟೀಸರ್​ ಅನ್ನು ಗಿಫ್ಟ್​ ಕೊಟ್ಟಿದ್ದಾರೆ. ಅದು ಸಖತ್ ಸದ್ದು ಮಾಡ್ತಿದೆ.  ಗೋಲ್ಡನ್ ಸ್ಟಾರ್ ಗಣೇಶ್ ಇನ್ನೂ ಹೆಚ್ಚು ಹೆಚ್ಚು ಒಳ್ಳೆಯ ಸಿನಿಮಾಗಳನ್ನು ಅಭಿಮಾನಿಗಳಿಗೆ, ಕನ್ನಡ ಚಿತ್ರರಂಗಕ್ಕೆ ಉಡುಗೊರೆಯಾಗಿ ನೀಡಲಿ. ಅವರ ಕೀರ್ತಿ ಮತ್ತಷ್ಟು ಹೆಚ್ಚಲಿ ಅಂತ ಮನತುಂಬಿ ಹಾರೈಸುತ್ತಾ… ನಮ್ಮ ಕಡೆಯಿಂದಲೂ ಗಣೇಶ್ ಅವರಿಗೆ ಜನ್ಮದಿನದ ಶುಭಾಶಯಗಳು.

 

 

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments