ವಿಜಯಪುರ: ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ವಿಶ್ವ ವಿಖ್ಯಾತ ಯಲಗೂರೇಶ್ವರ ದೇವಾಲಯದ 3 ಹುಂಡಿಯನ್ನು ನಿನ್ನೆ ಎರಡು ವರ್ಷದ ಬಳಿಕ ತಹಶಿಲ್ದಾರ ಅವರ ಆದೇಶದ ಮೇರೆಗೆ ಹುಂಡಿ ಒಡೆದಾಗ ಒಟ್ಟು 43,97,110 ರೂಪಾಯಿ ಹಣ, 240 ಗ್ರಾಂ ಬೆಳ್ಳಿ, 11 ಗ್ರಾಂ ಚಿನ್ನ ಪತ್ತೆಯಾಗಿದೆ. ದೇವಸ್ಥಾನದ ಹುಂಡಿಯಲ್ಲಿ ವಿದೇಶಿ ನೋಟು, ಚಲಾವಣೆಯಲ್ಲಿ ಇರದ ನೋಟು, ವಿವಿಧ ಬೇಡಿಕೆಗಳುಳ್ಳ ಪತ್ರಗಳು ಸಹ ಲಬ್ಯವಾಗಿವೆ.
ಇನ್ನೂ ಹುಂಡಿಯಲ್ಲಿ ದಿನವೀಡಿ ದುಶ್ಚಟ ಬಿಡಲು ಕೃಪೆ ತೋರು ಎಂದು ವಿದ್ಯಾರ್ಥಿಯೊಬ್ಬ ಯಲಗೂರಪ್ಪನಿಗೆ ಪತ್ರ ಬರೆದಿದ್ದಾನೆ. ಸಂಗಮೇಶ ಎನ್ನುವವರು ದೇವರಿಗೆ ನನ್ನ ವ್ಯಾಪಾರ ವಹಿವಾಟು ಚೆನ್ನಾಗಿ ಮಾಡು ಎಂದು ಮೂರು ಪುಟದ ಪತ್ರ ಬರೆದಿದ್ದಾನೆ. ಇನ್ನೊಬ್ಬ ಭಕ್ತ ನನ್ನ ತಂದೆಗೆ ಕ್ಯಾನ್ಸರ್ ಇದೆ ಅದರಿಂದ ಅವರನ್ನು ಕಾಪಾಡು ಎಂದು ಬರೆದಿದ್ದಾರೆ. ಇನ್ನೊಬ್ಬರು ನನ್ನ ಮಗಳು ಡಿಸ್ಟಿಂಕ್ಷನ್ ನಲ್ಲಿ ವಾಪಾಸಗುವಂತೆ ಮಾಡು ಎಂದು ಬರೆದಿದ್ದಾರೆ. ಇನ್ನೂ ಅನೇಕರು ಐ.ಐ.ಎಸ್, ಐ.ಪಿ.ಎಸ್ ಪರಿಕ್ಷೆ ಪಾಸ್ ಮಾಡು ಎಂದು ಪತ್ರ ಬರೆದರೆ, ಕೆಲವರು ನನಗೆ ಪೋಲಿಸ್ ಅಧಿಕಾರಿನ್ನಾಗಿ ಮಾಡು ಎಂದೆಲ್ಲ ಪತ್ರ ಬರೆದು ದೇವರ ಹುಂಡಿಯಲ್ಲಿ ಹಾಕಿದ್ದಾರೆ. ಇನ್ನೂ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯ ಪ್ರಚಾರದ ಪತ್ರಗಳು ಸಹಿತ ಹುಂಡಿಯಲ್ಲಿ ಪತ್ತೆಯಾಗಿವೆ. ಇನ್ನೂ 30 ಕ್ಕೂ ಅಧಿಕ ಶಿಕ್ಷಕರು ಸೇರಿಂದತೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಕೆನರಾ ಬ್ಯಾಂಕ್ ಸಿಬ್ಬಂದಿ ಸೇರಿ ಒಟ್ಟು 55 ಕ್ಕೂ ಅಧಿಕ ಜನ ಸಿಬ್ಬಂದಿ ಸೇರಿಕೊಂಡು ಎಣಿಕೆ ಕಾರ್ಯದಲ್ಲಿ ತೊಡಗಿಕೊಂಡಿದ್ದರು.