Home ರಾಜ್ಯ ಹೆಣ್ಣು ಮಕ್ಕಳ ಶಿಕ್ಷಣ ಎಸ್.ಎಸ್.ಎಲ್.ಸಿಗೆ ಕೊನೆಯಾಗಬಾರದು : ಸುರೇಶ್ ಕುಮಾರ್

ಹೆಣ್ಣು ಮಕ್ಕಳ ಶಿಕ್ಷಣ ಎಸ್.ಎಸ್.ಎಲ್.ಸಿಗೆ ಕೊನೆಯಾಗಬಾರದು : ಸುರೇಶ್ ಕುಮಾರ್

ಶಿವಮೊಗ್ಗ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.  ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಜೊತೆ ಇಂದು ನಗರದ ವಿವಿಧ ಸರ್ಕಾರಿ ಶಾಲೆಗಳಿಗೆ ರೌಂಡ್ಸ್ ಹಾಕಿದ ಸಚಿವ ಸುರೇಶ್ ಕುಮಾರ್, ಮೊದಲು ನಗರದ ದುರ್ಗಿಗುಡಿ ಶಾಲೆಗೆ ಆಗಮಿಸಿ, ಇಲ್ಲಿನ ವಿವಿಧ ಯೋಜನೆಗಳನ್ನು ವೀಕ್ಷಣೆ ಮಾಡಿದರು. 

ನಗರದ ದುರ್ಗಿಗುಡಿ ಶಾಲೆಯಲ್ಲಿ ಸ್ಮಾರ್ಟ್ ಎಜುಕೇಷನ್ ಯೋಜನೆ ವೀಕ್ಷಿಸಿ ಶ್ಲಾಘಿಸಿದರು.  ಈ ವೇಳೆ, ಇಲ್ಲಿನ ಸ್ಮಾರ್ಟ್ ಕ್ಲಾಸ್ ಕಲಿಕೆ ನಡೆಸುತ್ತಿರುವ ವಿದ್ಯಾರ್ಥಿಗಳ ಜೊತೆ ಸುರೇಶ್ ಕುಮಾರ್ ಚರ್ಚೆ ನಡೆಸಿದರು. ಕೆಲವು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಜೊತೆ ಚರ್ಚಿಸಿ, ಮುಂದಿನ ಬಾರಿ ನಾನು ಮತ್ತೇ ಬರುತ್ತೆನೆ. ಆ ಸಂದರ್ಭದಲ್ಲಿ ಪರೀಕ್ಷೆಗಾಗಿ ಹೇಗೆಲ್ಲಾ ತಯಾರಿ ಮಾಡಿಕೊಂಡಿದ್ದಿರಾ ಎಂಬುದರ ಬಗ್ಗೆ  ನಿಮ್ಮ ಜೊತೆ ಸಂವಾದ ನಡೆಸುತ್ತೆನೆ ಎಂದು ಹೇಳಿದರು. ನಿಮ್ಮೆಲ್ಲರ ಅದೃಷ್ಟ ಒಳ್ಳೆಯ ಶಾಲೆಯಲ್ಲಿ ಓದುತ್ತಿದ್ದಿರಾ. ಕಳೆದ ಎಂಟು ತಿಂಗಳು ರಜೆಯಾಗಿದೆ. ಪರೀಕ್ಷೆಗೆ ಇನ್ನೂ ನಾಲ್ಕು ತಿಂಗಳಿದೆ.  ಚೆನ್ನಾಗಿ ಓದಿ, ಉತ್ತಮ ಅಂಕ ಗಳಿಸಿ ಎಂದು ಕಿವಿ ಮಾತು ಹೇಳಿದರು. 

ಅಲ್ಲದೇ, ಸರ್ಕಾರಿ ಶಾಲೆಯಲ್ಲಿ ವ್ಯಾಸಾಂಗ ಮಾಡುವ ಕೆಲವು ವಿದ್ಯಾರ್ಥಿಗಳು, ವ್ಯಾಸಂಗ ಮೊಟಕುಗೊಳಿಸುತ್ತಾರೆ.  ಹಾಗೆ ಮಾಡದೇ, ಮುಂದೆಯೂ ಓದಿ ಎಂದು ಕಿವಿ ಮಾತು ಹೇಳಿದರು. 

ನಿಮ್ಮ ತಂದೆ ತಾಯಂದಿರಿಗೆ, ಶಿಕ್ಷಕರಿಗೆ ಎಲ್ಲರಿಗೂ ಸಂತೋಷ. ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣ ಎಸ್‍ಎಸ್‍ಎಲ್‍ಸಿಗೆ ಕೊನೆಯಾಗಬಾರದು. ಮುಂದೆಯೂ ಛಲದಿಂದ ಕಲಿಯಬೇಕು. ಶಾಲೆಗೆ ಉತ್ತಮ ಫಲಿತಾಂಶವನ್ನು ತನ್ನಿ ಎಂದು ಹಾರೈಸಿದರು.

ಈ ವೇಳೆ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ, ಸ್ಮಾರ್ಟ್ ಕ್ಲಾಸ್ ಯೋಜನೆ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಒಟ್ಟು 45 ಶಾಲೆಗಳಲ್ಲಿ ಡಿಜಿಟಲ್ ಕ್ಲಾಸ್ ರೂಂ ಸಜ್ಜುಗೊಳಿಸಲಾಗಿದೆ. ಅತ್ಯಾಧುನಿಕ ಡಿಜಿಟಲ್ ಕ್ಲಾಸ್‍ನಲ್ಲಿ ಇಂಟರ್ಯಾಕ್ಟೀವ್ ಬೋರ್ಡ್, ವಿದ್ಯಾರ್ಥಿಗಳಿಗೆ ಲ್ಯಾಟ್‍ಟಾಪ್, ಸಿಸಿ ಕ್ಯಾಮರಾ ಸೇರಿದಂತೆ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಡಿಜಿಟಲ್ ಕ್ಲಾಸ್‍ರೂಂ ಬಳಕೆ ಬಗ್ಗೆ ಈಗಾಗಲೇ 300 ಶಿಕ್ಷಕರಿಗೆ ತರಬೇತಿಯನ್ನು ಸಹ ನೀಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಮೇಯರ್ ಸುವರ್ಣಾ ಶಂಕರ್ ಉಪಮೇಯರ್ ಸುರೇಖಾ ಮುರಳಿಧರ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

- Advertisment -

Most Popular

‘ಮನೆ ಮಾಲೀಕನನ್ನು ರಕ್ಷಿಸಿ ಸಾವಿಗೆ ಶರಣಾದ ಶ್ವಾನ’

ವಿಜಯಪುರ: ಶ್ವಾನ ಮನುಷ್ಯನ ಅತಿ ನಿಯತ್ತಿನ ಪ್ರಾಣಿ, ತನ್ನನು ಸಾಕಿದ ಯಜಮಾನನ ಮಾನ ಪ್ರಾಣ ಉಳಿಸಲು ಜೀವವನ್ನೇ ಪಣಕ್ಕಿಟ್ಟಿರುವ ಸಾವಿರಾರು ಪ್ರಕರಣ ದೇಶದಲ್ಲಿ‌ನಡೆದು ಹೋಗಿವೆ. ಅಂತದೇ ಒಂದು ಪ್ರಕರಣ ವಿಜಯಪುರ ಜಿಲ್ಲೆಯಲ್ಲಿ ಬೆಳಕಿಗೆ...

‘ಅಂಗ ವೈಕಲ್ಯತೆ ಶಾಪವಲ್ಲ,ಹುಟ್ಟಿನಿಂದ ಬರಬಹುದು’ : ಶಶಿಕಲಾ ಜೊಲ್ಲೆ

ಬೆಂಗಳೂರು : ಅಂಗ ವೈಕಲ್ಯತೆ ಶಾಪವಲ್ಲ,ಹುಟ್ಟಿನಿಂದ ಅಥವಾ ಅಪಘಾತದಿಂದಲೂ ಬರಬಹುದು.ಬಂದ ಮೇಲೆ ಕುಗ್ಗದೆ ಧೈರ್ಯವಾಗಿ ಎದುರಿಸಿ ಸಾಧನೆಯ ಮೆಟ್ಟಿಲನ್ನು ಏರಬೇಕಾಗಿದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಚಿವೆ ಶಶಿಕಲಾ ಜೊಲ್ಲೆ ಎಂದು ಹೇಳಿದರು. ಬೆಂಗಳೂರು...

ಕೋರ್ಟ್ ಆವರಣದಲ್ಲೇ ವಕೀಲನ ಬರ್ಬರ ಹತ್ಯೆ !

ವಿಜಯನಗರ (ಹೊಸಪೇಟೆ) : ಕೋರ್ಟ್ ಆವರಣದಲ್ಲೇ ವಕೀಲನೋರ್ವನ ಬರ್ಬರ ಹತ್ಯೆಯಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಕೋರ್ಟ್ ಆವರಣದಲ್ಲಿ ಘಟನೆ ನಡೆದಿದೆ. ಡಾ. ತಾರಿಹಳ್ಳಿ ವೆಂಕಟೇಶ್ ಎನ್ನುವವರನ್ನ ಮನೋಜ್ ಎಂಬ ಯುವಕ (22) ಮಚ್ಚಿನಿಂದ...

ಬಾಲಕನ ಮೇಲೆ ಪೈಶಾಚಿಕ ಕೃತ್ಯ ಮರ್ಮಾಂಗಕ್ಕೆ ಚಿತ್ರಹಿಂಸೆ ನೀಡಿ ಕಗ್ಗೊಲೆ

ಕಲಬುರಗಿ/ಜೇವರ್ಗಿ : ಅನ್ಯ ಕೋಮಿನ ಯುವತಿಯನ್ನ ಪ್ರೀತಿಸುತ್ತಿದ್ದ 14 ವರ್ಷದ ಬಾಲಕನ ಮರ್ಮಾಂಗಕ್ಕೆ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿರುವಂತಹ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ಮಹೇಶ್ ಎಂಬ...

Recent Comments