ಹೆಣ್ಣು ಹಣೆಗೆ ಬೊಟ್ಟು ಇಡೋದು ಯಾಕ್ ಗೊತ್ತಾ?

0
594

ಹೆಣ್ಣು‌ ಮಕ್ಕಳು ಹಣೆಗೆ ಬೊಟ್ಟು ಇಡೋದು ಯಾಕೆ ಅಂತ ಯಾರನ್ನಾದ್ರೂ ಕೇಳ್ ನೋಡಿ. ಅದು ಭಾರತೀಯ ಸಂಸ್ಕೃತಿ , ಸಂಪ್ರದಾಯ ಅಂತ ಹೇಳ್ತಾರೆ! ಹೌದು, ಹಣೆಗೆ ಕುಂಕುಮದ ಬೊಟ್ಟು ಇಡೋದು ನಮ್ ಸಂಸ್ಕೃತಿ, ನಮ್ ಸಂಪ್ರದಾಯವೇ. ಆದರೆ, ಯಾವ್ದೇ ಸಂಪ್ರದಾಯಕ್ಕೆ ಒಂದು ಹುಟ್ಟು, ಕಾರಣ ಅಂತ ಇರುತ್ತಲ್ವಾ..? ಅದೇರೀತಿ ಹೆಣ್ಣು ಮಕ್ಕಳು ಬೊಟ್ಟು ಇಡೋಕೂ ಕಾರಣ ಇದೆ! ಇದು ಅಂತೆ-ಕಂತೆ ಕಾರಣ ಅಲ್ಲ. ಸೈಂಟಿಫಿಕ್ ರೀಸನ್..!

ಯೋಗದ ಪ್ರಕಾರ ಮನುಷ್ಯನ ದೇಹದಲ್ಲಿ 6 ಶಕ್ತಿಯುತ ಚಕ್ರಗಳಿವೆ. ಆ ಚಕ್ರಗಳಲ್ಲಿ ‘ಆಗ್ಯ ಚಕ್ರ’ ಕೂಡ ಒಂದು. ಈ ಚಕ್ರ ಎರಡು ಹುಬ್ಬುಗಳ‌ ಮಧ್ಯೆ ಇದ್ದು, ಇದು ದೇಹದ ಬೇರೆ ಬೇರೆ ಭಾಗಗಳಿಗೆ ಹೊಂದಿಕೊಂಡಿರುತ್ತೆ. ಈ ಚಕ್ರವನ್ನು ಬೆರಳಲ್ಲಿ ಒತ್ತಿ ಹಿಡಿಯೋದ್ರಿಂದ ಮನಸ್ಸಿನ ಒತ್ತಡ ಕಮ್ಮಿ ಆಗುತ್ತೆ. ಅಷ್ಟೇ ಅಲ್ದೆ ಮೆದುಳಿನ ಶಕ್ತಿ ಕೂಡ ಹೆಚ್ಚುತ್ತೆ.

ಇನ್ನೂ ಒಂದು ಮುಖ್ಯವಾದ ವಿಷ್ಯ ಏನಪ್ಪಾ ಅಂದ್ರೆ, ಹೆಣ್ಣಿನ‌ ಮನಸ್ಸು ಗಂಡಿನ ಮನಸ್ಸಿಗಿಂತ ತುಂಬಾನೇ ಚಂಚಲ.‌ಇದು ನಿಮ್ಗೂ ಗೊತ್ತಿರ್ಬಹುದು. ಹಣೆಗೆ ಬೊಟ್ಟು ಇಡೋ ಮೂಲಕ ಆಗ್ಯ ಚಕ್ರವನ್ನು ಒತ್ತಿ ಹಿಡಿಯೋದ್ರಿಂದ ಏಕಾಗ್ರತೆ ಹೆಚ್ಚುತ್ತೆ, ಚಂಚಲತೆ ಕಮ್ಮಿ ಆಗಿ ಮನಸ್ಸು ನಿಯಂತ್ರಣದಲ್ಲಿರುತ್ತಂತೆ. ಈ ಕಾರಣಗಳಿಂದ ಹೆಣ್ಣುಮಕ್ಕಳು ಬೊಟ್ಟು ಇಡ್ತಾರೆ.

ಇನ್ಯಾರಾದ್ರು ಹೆಣ್ಣು ಮಕ್ಕಳು ಬೊಟ್ಟು ಇಡೋದು ಯಾಕಂತ ಕೇಳಿದ್ರೆ ಈ ಕಾರಣಗಳನ್ನು ನೀಡಿ.

LEAVE A REPLY

Please enter your comment!
Please enter your name here