Saturday, May 28, 2022
Powertv Logo
Homeರಾಜ್ಯಶ್ರೀರಂಗಪಟ್ಟಣ ಲಾಡ್ಜ್​ನಲ್ಲಿ ಯುವತಿಯ ಬರ್ಬರ ಹತ್ಯೆ

ಶ್ರೀರಂಗಪಟ್ಟಣ ಲಾಡ್ಜ್​ನಲ್ಲಿ ಯುವತಿಯ ಬರ್ಬರ ಹತ್ಯೆ

ಮಂಡ್ಯ: ಮೈಸೂರು ಮೂಲದ ಯುವತಿಯನ್ನು ಕರೆತಂದು ಕತ್ತು ಕುಯ್ದು ಕೊಲೆ ಮಾಡಿದ ಘಟನೆ  ಶ್ರೀರಂಗಪಟ್ಟಣದ ರೂಮ್ಸ್ ಲಾಡ್ಜ್​ನಲ್ಲಿ‌ ನಡೆದಿದೆ.

ಶ್ರೀರಂಗಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ರೂಮ್ಸ್ ಲಾಡ್ಜ್​ನಲ್ಲಿ ಘಟನೆ ನಡೆದಿದ್ದು, ಪತಿ-ಪತ್ನಿಯೆಂದು ಲಾಡ್ಜ್​ನಲ್ಲಿ ರೂಂ ಪಡೆದು ಅಪರಿಚಿತ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಮಂಗಳವಾರ ಬೆಳಗ್ಗೆ ರೂಮ್ ಪಡೆದಿದ್ದ ಜೋಡಿ ಮಧ್ಯಾಹ್ನದ ವೇಳೆಗೆ ಕೊಲೆಗಾರ ಪರಾರಿಯಾಗಿದ್ದಾನೆ. ರಾತ್ರಿಯಾದರೂ ಯುವತಿ ರೂಮ್‌ನಿಂದ ಹೊರಬಾರದನ್ನು ಗಮನಿಸಿ ಡೋರ್ ಒಡೆದು ನೋಡುವಾಗ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆಯಾದ ಯುವತಿಗೆ ಸುಮಾರು 25 ವರ್ಷ ವಯಸ್ಸಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಕೊಲೆಯಾದ ಮತ್ತು ಕೊಲೆಗೈದು ಪರಾರಿಯಾಗಿರುವವನ ಮಾಹಿತಿ ಕಲೆ ಹಾಕಲಾಗುತ್ತಿದೆ.

ಅಕ್ರಮ ಸಂಬಂಧದ ಶಂಕೆ:

ಯುವತಿಯನ್ನು ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಯುವತಿಯನ್ನು ಸಂಪೂರ್ಣವಾಗಿ ಬೆತ್ತಲು ಮಾಡಿ, ಮನಬಂದಂತೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಹೀಗಾಗಿ ಪರಿಚಿತರೇ ಕೃತ್ಯ ಮಾಡಿರಬಹುದು ಎನ್ನಲಾಗ್ತಿದೆ. ಪ್ರಕರಣ ಸಂಬಂಧ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments