Sunday, May 29, 2022
Powertv Logo
Homeರಾಜ್ಯರಸ್ತೆ ದಾಟುತ್ತಿದ್ದ ಬಾಲಕಿ ಮೇಲೆ ಹರಿದ ಕ್ರೇನ್ : ಸ್ಥಳದಲ್ಲೇ ಸಾವು

ರಸ್ತೆ ದಾಟುತ್ತಿದ್ದ ಬಾಲಕಿ ಮೇಲೆ ಹರಿದ ಕ್ರೇನ್ : ಸ್ಥಳದಲ್ಲೇ ಸಾವು

ಬೆಂಗಳೂರು: ರಸ್ತೆ ದಾಟುತ್ತಿದ್ದ ಬಾಲಕಿ ಮೇಲೆ ಹರಿದ ಕ್ರೇನ್ ವಾಹನ, ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನೆಲಮಂಗಲ ತಾಲ್ಲೂಕು ಅವೇರಹಳ್ಳಿ ಕೈಗಾರಿಕಾ ಪ್ರದೇಶದ ಮುನೇಶ್ವರ ದೇವಾಲಯ ಬಳಿ ನಡೆದಿದೆ.

ಕ್ರೇನ್ ವಾಹನ ಚಾಲಕನ ಅತೀ ವೇಗ ಚಾಲನೆ ಮತ್ತು ಅಜಾಗರೂಕತೆಯಿಂದಾಗಿ ಈ ಅವಘಡ, ಸಂಭವಿಸಿದ್ದು, ರಾಯಚೂರು ಮೂಲದ ಹುಸೇನ್ಬಿ 15 ವರ್ಷ ಮೃತ ಬಾಲಕಿ, ತಂದೆ ಇಮಾಮ್ ಕಳೆದ 6 ತಿಂಗಳ ಹಿಂದೆ ಸ್ವಂತ ಊರು ಬಿಟ್ಟು ಹೊಟ್ಟೆ ಪಾಡಿಗಾಗಿ ಬಂದ ವಲಸಿಗರು, ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕ್ರೇನ್ ವಾಹನ ಬಾಲಕಿಗೆ ಡಿಕ್ಕಿಯಾಗಿದ್ದು, ಬಾಲಕಿ ತಲೆ ದೇಹದ ಮೇಲೆ ಕ್ರೇನ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

- Advertisment -

Most Popular

Recent Comments