ಸಿನಿಮಾ ಪ್ರಮೋಷನ್​ಗೆ ಗೋಲ್ಡನ್​ ಸ್ಟಾರ್ ಟೀಮ್ ಹೊಸ ‘ಗಿಮಿಕ್​’..!

0
278

ಯಾವ್ದೇ ಒಂದು ಸಿನಿಮಾ ಆಗಿರುಬಹದು.. ರಿಲೀಸ್​ಗೆ ಮುಂಚೆ ಪೋಸ್ಟರ್, ಟೀಸರ್, ಟ್ರೇಲರ್, ಹಾಡುಗಳ ಮೂಲಕ ಸಖತ್ ಸದ್ದು ಮಾಡಿ ಬಳಿಕ ಥಿಯೇಟರ್ ಗೆ ಎಂಟ್ರಿ ಕೊಡುತ್ತವೆ. ಥಿಯೇಟರ್ ಗೆ ಲಗ್ಗೆ ಇಡೋ ಮೊದಲೇ ಒಂದು ಟ್ರೆಂಡ್​ ಸೆಟ್ ಮಾಡಿ, ಹೈಪ್ ಕ್ರಿಯೇಟ್ ಮಾಡೋದು ಅದ್ರ ಉದ್ದೇಶ.

ಈ ಟೀಸರ್, ಟ್ರೇಲರ್, ಹಾಡುಗಳಲ್ಲದೆ ಪ್ರೆಸ್​ಮೀಟ್, ಇಂಟರ್​​ವ್ಯೂ ಹಾಗೂ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಸಿನಿಮಾ ಪ್ರಮೋಷನ್ ಮಾಡುವುದು ಕೂಡ ಎಲ್ಲರೂ ಮಾಡ್ತಾರೆ. ಆದ್ರೆ, ಗೋಲ್ಡನ್ ಸ್ಟಾರ್ ಗಣೇಶ್ ಅಂಡ್ ಟೀಮ್ ಹೊಸ ‘ಗಿಮಿಕ್’ ಮಾಡಿದೆ..!

ಹೌದು,  ಗಣೇಶ್ ನಟನೆಯ ಗಿಮಿಕ್ ಚಿತ್ರ ಸ್ನೀಕ್​​ ಪೀಕ್ ವಿಡಿಯೋ ರಿಲೀಸ್ ಮಾಡಿದೆ. ಅದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಸ್ನೀಕ್ ಪೀಕ್ ಅಂದರೆ ಚಿತ್ರದದ ಪ್ರಮುಖ ದೃಶ್ಯಗಳನ್ನ ರಿಲೀಸ್ ಮಾಡೋದಾದಗಿದೆ. ಹಾಗೆಯೇ ಗಿಮಿಕ್ ಚಿತ್ರದ ಪ್ರಮುಖ ದೃಶ್ಯವೊಂದು ರಿಲೀಸ್ ಆಗಿದೆ.

ಬಾಲಿವುಡ್, ಹಾಲಿವುಡ್ ಮೂವಿಗಳಲ್ಲಿ ಈ ಸ್ನೀಕ್ ಪೀಕ್ ವಾಡಿಕೆ ಇದೆ. ಆದರೆ, ಕನ್ನಡದ ಮಟ್ಟಿಗೆ ಇದು ಹೊಸ ಪ್ರಯೋಗ. ಗಿಮಿಕ್ ಸ್ನೀಕ್ ಪೀಕ್ ಗಿಮಿಕ್​ ಮೂಲಕ ಕನ್ನಡಿಗರನ್ನು ಸೆಳೆಯುವ ಯತ್ನ ಮಾಡಿದೆ. ವಾಟ್ಸಪ್​ನಲ್ಲೂ ಇದು ಸಿಕ್ಕಾಪಟ್ಟೆ ಹರಿದಾಡ್ತಾ ಇದೆ.

ಇನ್ನು ಇದು ನಾಗಣ್ಣ ಆ್ಯಕ್ಷನ್​ ಕಟ್ ಹೇಳಿರೋ ಸಿನಿಮಾ ಇದಾಗಿದ್ದು, ಗಣೇಶ್ ಅವರದಲ್ಲದೆ ರೋನಿಕಾ ಸಿಂಗ್, ಗುರುದತ್, ಮಂಡ್ಯ ರಮೇಶ್​​, ರವಿಶಂಕರ್ ಗೌಡ ಮತ್ತಿತರರು ನಟಿಸಿದ್ದಾರೆ. ಶೀಘ್ರದಲ್ಲೇ ರಿಲೀಸ್​ ಆಗಲಿದೆ.

 

 

LEAVE A REPLY

Please enter your comment!
Please enter your name here