Friday, September 30, 2022
Powertv Logo
Homeಸಿನಿಮಾ'ಜಂಟಲ್​​ಮನ್'ಗೆ ಶಬಹಬ್ಬಾಶ್ ಅಂದ ಬಾಲಿವುಡ್ ವಿಮರ್ಶಕರು

‘ಜಂಟಲ್​​ಮನ್’ಗೆ ಶಬಹಬ್ಬಾಶ್ ಅಂದ ಬಾಲಿವುಡ್ ವಿಮರ್ಶಕರು

ಪ್ರಜ್ವಲ್​ ದೇವರಾಜ್, ನಿಶಿಕಾ ನಾಯ್ಡು, ಸಂಚಾರಿ ವಿಜಯ್ ಅಭಿನಯದ ‘ಜಂಟಲ್​​ಮನ್’ ಸಿನಿಮಾಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರ ನೋಡಿದವರು ವ್ಹಾವ್ ಅಂತಿದ್ದಾರೆ! ಡೈರೆಕ್ಟರ್ ಜಡೇಶ್ ಕುಮಾರ್ ಹಂಪಿ ವಿಭಿನ್ನ ಕಥಾಹಂದರದ ಸಿನಿಮಾ ಮೂಲಕ ಸ್ಯಾಂಡಲ್​​ವುಡ್​ನಲ್ಲಿ ಈ ಹಿಂದೆ ಎಂದೂ ಬರದ ಸಿನಿಮಾವನ್ನು ನೀಡಿದ್ದಾರೆ.
‘ಸ್ಲೀಪಿಂಗ್​ ಬ್ಯೂಟಿ ಸಿಂಡ್ರೋಮ್​​’ನಿಂದ ಬಳಲುತ್ತಿರುವ ಭರತ್ ಪಾತ್ರದಾರಿಯಾಗಿ ನಾಯಕ ಪ್ರಜ್ವಲ್​ ದೇವರಾಜ್​ ನಟನೆ ನಿಜಕ್ಕೂ ಅದ್ಭುತ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸಖತ್ ಆಗಿ ಅಭಿನಯಿಸಿದ್ದಾರೆ. ಅವರ ಪಾತ್ರ ಚಿತ್ರಕ್ಕೆ ಹೊಸ ಆಯಾಮವನ್ನು ನೀಡುತ್ತದೆ. ನಾಯಕಿ ನಿಶಿಕಾ ನಾಯ್ಡು ಸ್ಟಾರ್ ನಟಿಯಾಗಿ ಸ್ಯಾಂಡಲ್​​ವುಡ್​ನಲ್ಲಿ ಗಟ್ಟಿಯಾಗಿ ನೆಲೆನಿಲ್ಲುವ ಭರವಸೆ ಮೂಡಿಸಿದ್ದಾರೆ. ಪುಟಾಣಿ ಆರಾಧ್ಯಳ ಮುದ್ದು ಮುದ್ದು ನಟನೆ ಇಷ್ಟ ಆಗ್ದೆ ಇರೋಕೆ ಚಾನ್ಸೇ ಇಲ್ಲ. ತಬಲ ನಾಣಿ, ಹನುಮಂತೆ ಗೌಡ, ವಿಜಯ್​ ಚೆಂಡೂರ್, ಅರುಣಾ ಬಾಲರಾಜ್ ಸೇರಿದಂತೆ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸಂಭಾಷಣೆ, ಸಂಗೀತಾ, ಸಿನಿಮಾಟೋಗ್ರಫಿ ಸೇರಿದಂತೆ ಇಡೀ ಚಿತ್ರಕ್ಕೆ ನೋಡುಗರು ಫುಲ್​​ ಮಾರ್ಕ್ಸ್ ಕೊಟ್ಟಿದ್ದಾರೆ.
ಇನ್ನು ಜಂಟಲ್​ಮನ್ ಸಿನಿಮಾವನ್ನು ಬಾಲಿವುಡ್​ ಸಿನಿ ವಿಮರ್ಶಕರು ಕೂಡ ಮೆಚ್ಚಿದ್ದಾರೆ. ಹಿಂದಿ ಚಿತ್ರಗಳಿಗೆ ಸ್ಯಾಂಡಲ್​​ವುಡ್​ನ ‘ಜಂಟಲ್​ಮನ್’ ಅನ್ನು ತಾಳೆಹಾಕಿ ಕೊಂಡಾಡಿದ್ದಾರೆ. ಒಟ್ನಲ್ಲಿ ಜಂಟಲ್​​ಮನ್​​​ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಆದರೆ, ಈ ವಾರ 11 ಸಿನಿಮಾಗಳು ರಿಲೀಸ್ ಆಗಿರೋದ್ರಿಂದ 2ನೇ ವಾರಕ್ಕೇ ಥಿಯೆಟರ್​ ಸಮಸ್ಯೆ ಎದುರಾಗಿದ್ದು, ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ. ಚಿತ್ರ ಉಳಿಸಿಕೊಡುವಂತೆ ಮನವಿ ಮಾಡಿದೆ. ಇಂಥಾ ಚಿತ್ರಗಳನ್ನು ಉಳಿಸಿ, ಪ್ರೋತ್ಸಾಹಿಸಿ ಸ್ಯಾಂಡಲ್​​ವುಡ್​ ಬೆನ್ನಿಗೆ ನಿಲ್ಲಬೇಕಾಗಿರೋದು ನಮ್ಮೆಲ್ಲರ ಕರ್ತವ್ಯ ಕೂಡ.

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments