”ಜಂಟಲ್​ಮನ್ ಇಷ್ಟವಾಗ್ದಿದ್ರೆ ಟಿಕೆಟ್ ದುಡ್ಡು ವಾಪಸ್​”..!

0
309

ನಿರ್ದೇಶಕ ಗುರು ದೇಶಪಾಂಡೆ ಹಲವು ರಿಮೇಕ್ ಸಿನಿಮಾಗಳನ್ನು ಮಾಡಿ ಸ್ಯಾಂಡಲ್​ವುಡ್​ನಲ್ಲಿ ಟೀಕೆಗೆ ಗುರಿಯಾಗಿದ್ದರು. ಈ ಬಾರಿ ಪ್ರಜ್ವಲ್ ದೇವರಾಜ್ ಆಭಿನಯದ `ಜಂಟಲ್​ಮನ್’ ನಿರ್ಮಿಸಿ ಸ್ವ-ಮೇಕ್ ಸಿನಿಮಾವನ್ನು ಮಾಡಿದ್ದಾರೆ. ಈಗಾಗಲೇ ಸಿನಿಮಾ ನೋಡಿದವರೆಲ್ಲಾ ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ತಿಳಿಸಿದ್ದಾರೆ. ಆದರೆ ನಿರ್ದೇಶಕ ಗುರು ದೇಶಪಾಂಡೆ ಮಾತ್ರ  ಖುಷಿ ಪಡದೆ ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.  

‘‘ನಾನು ಮಾಡಿದ ಸಿನಿಮಾಕ್ಕೆ ಪತ್ರಿಕೆ ಹಾಗೂ ಟಿವಿಗಳಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಒಂದು ಸಿನಿಮಾ ಗೆಲ್ಲಬೇಕಾದ್ರೆ ಹೆಚ್ಚು ಜನ ಸಿನಿಮಾ ಮಾಡಬೇಕು. ನಾನು ರಿಮೇಕ್ ಸಿನಿಮಾ ಮಾಡಿದಾಗ ಬೈತಿದ್ರಿ ಅಲ್ವಾ. ಈಗ ಸ್ವಮೇಕ್ ಸಿನಿಮಾ ಮಾಡಿದ್ದೇನೆ. ರಿಮೇಕ್ ಮಾಡಿದಾಗ ಹೇಗೆ ಕಮೆಂಟ್ ಮಾಡ್ತಿದ್ರೋ ಹಾಗೆಯೇ ಈಗ ಮಾಡಿರೋ ಸ್ವಮೇಕ್ ಸಿನಿಮಾಕ್ಕೂ ಕಮೆಂಟ್​ಗಳನ್ನು ಮಾಡಿ. ಈ ಸಿನಿಮಾಕ್ಕೆ ಯಾಕೆ ಕಮೆಂಟ್ ಮಾಡ್ತಿಲ್ಲ?‘‘ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಜಂಟಲ್​ಮ್ಯಾನ್ ಸಿನಿಮಾ ನೋಡಿ ಇಷ್ಟ ಆಗ್ಲಿಲ್ಲ ಅಂತಾದ್ರೆ ಆಫೀಸಿಗೆ ಬನ್ನಿ ಟಿಕೆಟ್ ದುಡ್ಡು ವಾಪಸ್ ಕೊಡ್ತೀನಿ ಅಂತಲೂ ಸಿನಿಮಾ ಬಗ್ಗೆ ವಿಶ್ವಾಸದ ನುಡಿಗಳನ್ನಾಡಿದ್ದಾರೆ. 

LEAVE A REPLY

Please enter your comment!
Please enter your name here