ಖಾಕಿ ತೊಟ್ಟ ಚಿನ್ನದ ಹುಡುಗಿ..!

0
172

2010ರ ಕಾಮನ್​ ವೆಲ್ತ್​​ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದಿದ್ದ ಗೀತಾ ಪೋಗಾಟ್ ಈಗ ಖಾಕಿ ತೊಟ್ಟಿದ್ದಾರೆ..! ಕುಸ್ತಿ ಹುಡುಗಿ ಈಗ ಡಿಎಸ್​​​​ಪಿ..!
ಹೌದು ಗೀತಾ ಅವರ ಸಾಧನೆಯನ್ನು ಮೆಚ್ಚಿರುವ ಹರಿಯಾಣ ಸರ್ಕಾರ ಹೆಚ್ಚುವರಿ ಪೊಲೀಸ್​ ಅಧೀಕ್ಷ ಹುದ್ದೆಯನ್ನು ನೀಡಿದೆ. ಕ್ರೀಡಾ ಕೋಟಾದ ಮೇಲೆ ಅವರಿಗೆ ಡಿಎಸ್​​ಪಿ ಹುದ್ದೆ ಸಿಕ್ಕಿದೆ. ಸರ್ಕಾರ ಕಳೆದ ವರ್ಷವೇ ಈ ಹುದ್ದೆಯನ್ನು ಗೀತಾ ಅವ್ರಿಗೆ ನೀಡಿದ್ದು, ಸದ್ಯ ಅವರು 9 ತಿಂಗಳ ಪೊಲೀಸ್ ತರಬೇತಿಯಲ್ಲಿದ್ದಾರೆ.
ಪೊಲೀಸ್​ ತರಬೇತಿ ಪಡೆಯುತ್ತಿರುವ ಗೀತಾ ಮೊದಲ ಬಾರಿಗೆ ಖಾಕಿ ಬಟ್ಟೆಯಲ್ಲಿರೋ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಆ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇನ್ನು ಕಾಮನ್ ವೆಲ್ತ್​, ಒಲಂಪಿಕ್, ಏಷ್ಯಯನ್ ಗೇಮ್ಸ್​ ಸೇರಿ ಅನೇಕ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಪೋಗಾಟ್​ ಅವರ ಜೀವನ ಆಧಾರಿತ ಸಿನಿಮಾ ಕೂಡ ಈಗಾಗಲೇ ತೆರೆಕಂಡಿದೆ. ಅಮಿರ್ ಖಾನ್ ನಟನೆಯ ‘ದಂಗಲ್​’ ಸಿನಿಮಾ ಇದೆಯಲ್ಲಾ.. ಅದು ಇದೇ ಗೀತಾ ಪೋಗಾಟ್​ ಅವರ ಜೀವನಾಧಾರಿತ ಮೂವಿ. ಆ ಬಾಕ್ಸ್​ಆಫೀಸಲ್ಲೂ ಸಖತ್ ಸದ್ದು ಮಾಡಿತ್ತು.

LEAVE A REPLY

Please enter your comment!
Please enter your name here