ಅರೆ…ಧೋನಿ ಬಗ್ಗೆ ಇದೆಂಥಾ ‘ಗಂಭೀರ’ ಆರೋಪ..!

0
264

ಮಹೇಂದ್ರ ಸಿಂಗ್ ಧೋನಿ ವಿಶ್ವಕ್ರಿಕೆಟ್ ಕಂಡ ಅದ್ಭುತ ನಾಯಕ, ಬ್ಯಾಟ್ಸ್​ಮನ್, ವಿಕೆಟ್ ಕೀಪರ್. ಟೀಮ್ ಇಂಡಿಯಾ ಪಾಲಿಗೆ ಎರಡು ವರ್ಲ್ಡ್​ಕಪ್ ತಂದು ಕೊಟ್ಟ ಹೀರೋ. ಆದರೆ, ಇದೀಗ 2011ರ ವರ್ಲ್ಡ್​​ಕಪ್ ವಿಚಾರವಾಗಿ ಇದೇ ಧೋನಿ ವಿರುದ್ಧ ‘ಗಂಭೀರ’ ಆರೋಪ ಕೇಳಿಬಂದಿದೆ. ಇಂತಹದ್ದೊಂದು ಆರೋಪಿ ಮಾಡಿರೋದು ಮಾಜಿ ಕ್ರಿಕೆಟಿಗ, ಹಾಲಿ ಸಂಸದ ಗೌತಮ್ ಗಂಭೀರ್!
ಹೌದು, ಗೌತಿ ಮಾಹಿ ಬಗ್ಗೆ 2011ರ ವರ್ಲ್ಡ್​ಕಪ್ ವಿಷಯವಾಗಿ ಮಾತನಾಡಿದ್ದಾರೆ. ಆ ವರ್ಲ್ಡ್​ಕಪ್​​ನ ಫೈನಲ್ ಮ್ಯಾಚಲ್ಲಿ ಗಂಭೀರ್ 97ರನ್ ಮಾಡಿ ಗೆಲುವಿನಲ್ಲಿ ಪ್ರಮುಖ ಕಾರಣ ವಹಿಸಿದ್ದರು. ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಮ್ಯಾಚಲ್ಲಿ ಶ್ರೀಲಂಕಾ ನೀಡಿದ್ದ 275 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭದಲ್ಲಿ ವೀರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ವಿಕೆಟ್ ಕಳೆದುಕೊಂಡಿತು. ಈ ವೇಳೆ ಕ್ರೀಸ್​ಗೆ ಬಂದ ಗಂಭೀರ್ ಅತ್ಯುತ್ತಮವಾಗಿ ಆಡಿದ್ರು. ನಾಯಕ ಧೋನಿ ಜೊತೆಗೂಡಿ 109 ರನ್​ಗಳ ಜೊತೆಯಾಟವಾಡಿದ್ರು. 122 ಎಸೆತಗಳಲ್ಲಿ 97 ರನ್ ಗಳಿಸಿ ಔಟಾಗಿ, ಮೂರೇ ಮೂರು ರನ್​ಗಳಿಂದ ಸೆಂಚುರಿ ಮಿಸ್ ಮಾಡ್ಕೊಂಡಿದ್ರು.


ಈ ಬಗ್ಗೆ ಆಗಾಗ ಬೇಸರ ತೋಡಿಕೊಳ್ಳೋ ಗಂಭೀರ್ ಈಗ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಆರೋಪ ಮಾಡಿದ್ದಾರೆ. ‘ನಾನು 2011ರ ವರ್ಲ್ಡ್​​ಕಪ್ ಫೈನಲ್​​ ಮ್ಯಾಚಿನಲ್ಲಿ ಸೆಂಚುರಿ ಮಿಸ್​ ಮಾಡಿಕೊಳ್ಳಲು ಧೋನಿ ಕಾರಣವೆಂದು ಹೇಳಿದ್ದಾರೆ.
ನಾನು 97 ರನ್ ಆಗುವ ತನಕ ವೈಯಕ್ತಿಕ ಮೊತ್ತದ ಕಡೆ ಗಮನಹರಿಸಿರಲಿಲ್ಲ. ಗುರಿ ಬೆನ್ನಟ್ಟುವುಷ್ಟೇ ನನ್ನ ಗುರಿಯಾಗಿತ್ತು. ಆದರೆ, ನಾನು 97 ರನ್ ಗಳಿಸಿದಾಗ ನನ್ನ ಬಳಿ ಬಂದ ಧೋನಿ ,ನಿನ್ನ ಶತಕ ಪೂರ್ಣಗೊಳ್ಳಲು ಕೇವಲ 3 ರನ್ ಬೇಕಷ್ಟೇ ಎಂದರು. ಧೋನಿ ಹೀಗೆ ಹೇಳಿದಾಗ ನನ್ನ ಗಮನ ವೈಯಕ್ತಿಕ ಸಾಧನೆ ಕಡೆಗೆ ಹೋಯಿತು.ಆಗ ಏಕಾಗ್ರತೆ ಕಳೆದುಕೊಂಡೆ. ಟಾರ್ಗೆಟ್ ಮಾತ್ರ ಗಮನದಲ್ಲಿಟ್ಟುಕೊಂಡು ಆಡಿದ್ದರೆ ನಾನು ಸುಲಭವಾಗಿ ಸೆಂಚುರಿ ಮಾಡುತ್ತಿದ್ದೆ. ಆದ್ರೆ, ಧೋನಿ ಹೇಳಿದ ಆ ಒಂದು ಮಾತು 97 ರನ್​​ಗೆ ಔಟ್ ಆಗುವಂತೆ ಮಾಡಿತು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here