ಶಿವಮೊಗ್ಗ : ಮೊಬೈಲ್ ಅಂಗಡಿ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ ಮತ್ತು ಇತರೆ ವಸ್ತುಗಳನ್ನು ಕದ್ದಿದ್ದ ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ಇದೇ ನವೆಂಬರ್ 29 ರಂದು ಶಿವಮೊಗ್ಗದ ಬಿ.ಹೆಚ್. ರಸ್ತೆಯ ಸಿ.ಕೆ ಟವರ್ಸ್ನಲ್ಲಿರುವ ಮೊಬೈಲ್ ಶೋ ರೂಂ ಒಂದರಲ್ಲಿ ಕೈಚಳಕ ತೋರಿದ್ದ ಕಳ್ಳರು, ಶಟರ್ನ ಬೀಗ ಮುರಿದು ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಶಿವಮೊಗ್ಗ ಟಿಪ್ಪು ನಗರ ಬಡಾವಣೆಯ ಶೇಖ್ ಅರ್ಬಾಸ್ , ಮಹಮ್ಮದ್ ಶಾಫಿಲ್, ಹಾಗೂ ಅಣ್ಣಾ ನಗರದ ಮನ್ಸೂರ್ ಅಹಮ್ಮದ್ ಎಂಬ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿಗಳಿಂದ 27 ವಿವಿಧ ಮೊಬೈಲ್ ಫೋನ್ಗಳು, ಬ್ಲೂಟೂತ್ ಮತ್ತಿತ್ತರ ಸಾಮಾಗ್ರಿಗಳು ಮತ್ತು ಕೃತ್ಯಕ್ಕೆ ಬಳಸಿದ ಬಜಾಜ್ ಪ್ಲಾಟಿನಾ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.