Home ರಾಜ್ಯ ಗಣೇಶನನ್ನು ಕೂರಿಸಲು ಸಂಗ್ರಹಿಸಿದ್ದ ಹಣದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ..!

ಗಣೇಶನನ್ನು ಕೂರಿಸಲು ಸಂಗ್ರಹಿಸಿದ್ದ ಹಣದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ..!

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹಳಿಕೆ ಗ್ರಾಮಸ್ಥರು ತಾವು ಗಣೇಶ ಹಬ್ಬಕ್ಕೆ ಗಣಪತಿಯನ್ನು ಕೂರಿಸಲು ಸಂಗ್ರಹಿಸಿದ ಹಣದಲ್ಲಿ ಮಕ್ಕಳಿಗೆ ನೋಟ್​ ಪುಸ್ತಕ ಕೊಡಿಸಿ, ಪಿಯುಸಿ ಹಾಗೂ ಎಸ್​​ಎಸ್​ಎಲ್​ಸಿ ಮಕ್ಕಳಿಗೆ ಸನ್ಮಾನ ಮಾಡಿ ಶಿಕ್ಷಣ ಕಾಳಜಿ ಮೆರೆದಿದ್ದಾರೆ. 

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಎರಡು ಏರುತ್ತಲೇ ಇದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಕೂಡ ಗಣಪತಿ ಕೂರಿಸಲು ಹಲವು ಷರತ್ತುಗಳನ್ನ ಹೇರಿತ್ತು. 20ಕ್ಕಿಂತ ಹೆಚ್ಚು ಜನ ಸೇರಬಾರದು ಎಂದು ಆದೇಶ ತಂದಿತ್ತು. ಆದ್ದರಿಂದ ಹಳ್ಳಿಗಳಲ್ಲಿ 20ಕ್ಕಿಂತ ಹೆಚ್ಚು ಜನ ಸೇರದಂತಿರೋದು ಕಷ್ಟ, ಅಲ್ಲದೆ ಊರಿಗೆ ಒಂದೇ ಗಣಪತಿ ಇಡೋದು. ಸೀಮಿತ ಜನ ಇರೋದು ಕಷ್ಟಸಾಧ್ಯ ಎಂದು ಹಳಿಕೆ ಗ್ರಾಮಸ್ಥರು ಗಣಪತಿಯನ್ನೇ ಕೂರಿಸಿಲ್ಲ.

ಗ್ರಾಮೀಣ ಭಾಗದಲ್ಲಿ ಗಣೇಶನ ಹೆಸರಲ್ಲಿ ಸಂಘಗಳನ್ನ ಮಾಡಿಕೊಂಡಿರುತ್ತಾರೆ. ಮನೆಗೆ ಇಷ್ಟು ಹಣ, ವರ್ಷಕ್ಕೆ ಇಷ್ಟು ಹಣ ಎಂದು ಗ್ರಾಮಸ್ಥರು ಹಾಕಬೇಕು. ಅದೇ ಹಣದಲ್ಲಿ ವರ್ಷಕ್ಕೊಮ್ಮೆ ಎಂಟತ್ತು ದಿನ ಗಣಪತಿ ಕೂರಿಸಿ ಗ್ರಾಮಸ್ಥರೆಲ್ಲಾ ಸೇರಿ ಸಂಭ್ರಮಿಸುತ್ತಾರೆ. ಆದರೆ, ಈ ವರ್ಷ ಕೊರೋನ ಆತಂಕ ಹಾಗೂ ಸರ್ಕಾರದ ಷರತ್ತುಗಳಿಂದ ಹಳಿಕೆ ಗ್ರಾಮದಲ್ಲಿ ಗಣಪತಿಯನ್ನೇ ಕೂರಿಸಿಲ್ಲ. ಗಣಪತಿ ಕೂರಿಸಲು ಮೀಸಲಿದ್ದ ಹಣದಲ್ಲಿ ಗ್ರಾಮದಲ್ಲಿರುವ ಒಂದರಿಂದ ಹತ್ತನೇ ತರಗತಿಯ ಎಲ್ಲಾ ಮಕ್ಕಳಿಗೆ ಉಚಿತ ನೋಟ್‍ಬುಕ್ ವಿತರಿಸಿದ್ದಾರೆ. ಜೊತೆಗೆ, ತಮ್ಮ ಗ್ರಾಮದಲ್ಲಿ ಎಸ್ಎಸ್ಎಲ್​​ಸಿ ಹಾಗೂ ಪಿಯುಸಿ ಪಾಸಾಗಿರೋ ಮಕ್ಕಳಿಗೆ ಸನ್ಮಾನ ಮಾಡಿದ್ದಾರೆ.

ಊರಿನವರ ಕಾರ್ಯಕ್ಕೆ ಮಕ್ಕಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾವು ಚೆನ್ನಾಗಿ ಓದಿ ಒಳ್ಳೆಯ ಫಲಿತಾಂಶ ತಂದು ಗ್ರಾಮಕ್ಕೆ ಒಳ್ಳೆ ಹೆಸರು ತರುತ್ತೇವೆಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.

-ಸಚಿನ್ ಶೆಟ್ಟಿ 

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments