Home ಸಿನಿ ಪವರ್ ಮತ್ತೆ ಒಂದಾಗ್ತಾರಾ ಗಣೇಶ್- ಭಾವನಾ?

ಮತ್ತೆ ಒಂದಾಗ್ತಾರಾ ಗಣೇಶ್- ಭಾವನಾ?

ಗೋಲ್ಡನ್ ಸ್ಟಾರ್ ಗಣೇಶ್, ಭಾವನಾ ಮತ್ತು ಡೈರೆಕ್ಟರ್ ಪ್ರೀತಮ್ ಗುಬ್ಬಿ ಕಾಂಬಿನೇಷನ್​ನ ’99’ ಸಿನಿಮಾ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣ್ತಾ ಇದೆ. ಇದೇ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ಬರ್ತಾ ಇದೆ. ಡೈರೆಕ್ಟರ್ ಪ್ರೀತಮ್ ಮುಂದಿನ ಆ ಸಿನಿಮಾದ ಸೀಕ್ರೆಟ್​ ಬಿಟ್ಟು ಕೊಟ್ಟಿದ್ದಾರೆ.

‘ಚೆಲ್ಲಾಟ’ವಾಡುತ್ತಾ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಟ್ಟು ‘ಹುಡಗಾಟ’ವಾಡುತ್ತಾ ‘ಮುಂಗಾರು ಮಳೆ’ ಸುರಿಸಿ, ಕನ್ನಡಿಗರ ಮನದ ‘ಅರಮನೆ’ಯಲ್ಲಿ ‘ಚೆಲುವಿನ ಚಿತ್ತಾರ’ ಬಿಡಿಸಿದ ‘ಬೊಂಬಾಟ್’ ಹುಡುಗ ಗೋಲ್ಡನ್ ಸ್ಟಾರ್ ಗಣೇಶ್. ‘ಜಾಕಿ’ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ, ‘ವಿಷ್ಣುವರ್ಧನ’ನ ರಾಣಿಯಾಗಿ, ‘ಬಚ್ಚನ್’ ಹಾರ್ಟಲ್ಲಿ ಕುಣಿದಾಡಿದ ಮಲೆಯಾಳಂ ಬೆಡಗಿ ಭಾವನಾ. ‘ಹಾಗೇ ಸುಮ್ಮನೆ’ ಸಿನಿಯಾನ ಶುರುಮಾಡಿ, ‘ಮಳೆಯಲಿ ಜೊತೆಯಲಿ’, ‘ಜಾನು’ ಸಿನಿಮಾ ಮೂಲಕ ಯಶಸ್ಸು ಕಂಡ ಡೈರೆಕ್ಟರ್ ಪ್ರೀತಮ್ ಗುಬ್ಬಿ. ಈ ಮೂವರ ಕಾಂಬಿನೇಷನ್​​ನಲ್ಲಿ ಸದ್ದು ಮಾಡ್ತಿರೋ ಸಿನಿಮಾ 99..!
ಯಸ್, ಗೋಲ್ಡನ್ ಸ್ಟಾರ್ ಗಣೇಶ್, ಬಹುಭಾಷಾ ನಟಿ, ನಗು ಮೊಗದ ಚೆಲುವೆ ಭಾವನಾ ಮತ್ತು ಕ್ರಿಯೇಟಿವ್ ಡೈರೆಕ್ಟರ್ ಪ್ರೀತಮ್ ಗುಬ್ಬಿ ಕಾಂಬಿನೇಷನ್​​ ಸಿನಿಮಾ ’99’. ಇದು ಕಾಲಿವುಡ್​ನ ’96’ ಸಿನಿಮಾದ ರಿಮೇಕ್ ಆದರೂ ಕನ್ನಡದ ನೇಟಿವಿಟಿಗೆ ಒಪ್ಪುವಂತೆ ಮೂಡಿಬಂದಿದ್ದು, ಸಖತ್ ಕ್ಲಿಕ್ ಆಗಿದೆ.
’99’ ಗಣೇಶ್ ಮತ್ತು ಭಾವನಾ ಜೋಡಿಯ 2ನೇ ಸಿನಿಮಾ. 2012ರಲ್ಲಿ ತೆರೆಕಂಡ ‘ರೋಮಿಯಾ’ ಚಿತ್ರದಲ್ಲಿ ಗಣೇಶ್ ಮತ್ತು ಭಾವನಾ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಇನ್ನು ಪ್ರೀತಮ್ ಗುಬ್ಬಿ ಮತ್ತು ಗಣೇಶ್ ಕಾಂಬಿನೇಷನ್​​ನ ಮೂರನೇ ಸಿನಿಮಾ ಈ 99..! ಅವರಿಬ್ಬರ ಕಾಂಬಿನೇಷನ್​ನಲ್ಲಿ 2009ರಲ್ಲಿ ಮಳೆಯಲಿ ಜೊತೆಯಲಿ, 2014ರಲ್ಲಿ ದಿಲ್ ರಂಗಲೀಲಾ ಸಿನಿಮಾ ತೆರೆಕಂಡಿತ್ತು.
ಈ ಸಕ್ಸಸ್ ಜೋಡಿಗಳ ಮತ್ತೊಂದು ಸಿನಿಮಾ 99. ಇದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವೀಕ್ಷಕರನ್ನು ತಮ್ಮ ಸ್ಕೂಲ್ ಡೇಸ್​​​ಗೆ ಕರೆದುಕೊಂಡು ಹೋಗುವಲ್ಲಿ, ಮನ ತಲುಪುವಲ್ಲಿ ಸಿನಿಮಾ ಗೆದ್ದಿದೆ. ಇದೇ ಗೆಲುವಿನ ಖುಷಿಯಲ್ಲಿ ಇದೇ ಕಾಂಬಿನೇಷನ್ ಮತ್ತೆ ಬರಲು ತಯಾರಾಗಿದೆ.
ಹೌದು, ಪವರ್ ಟಿವಿ ಜೊತೆ ಮಾತನಾಡಿದ ಪ್ರೀತಮ್ ಗುಬ್ಬಿ ಮುಂದಿನ ಸಿನಿಮಾದ ಸೀಕ್ರೆಟ್​ ಬಿಟ್ಟುಕೊಟ್ಟಿದ್ದಾರೆ. ಗಣೇಶ್ ಮತ್ತು ಭಾವನಾ ಅವರನ್ನೇ ಹಾಕಿಕೊಂಡು ಮತ್ತೊಂದು ಸಿನಿಮಾ ಮಾಡೋ ಪ್ಲಾನ್ ಕೂಡ ಅವರಲ್ಲಿದೆ. ಬ್ರಿಲಿಯಂಟ್ ಪರ್ಫಾರ್ಮೆನ್ಸ್ ನೀಡೋ ಜೋಡಿ ಗಣೇಶ್- ಭಾವನಾ ಜೋಡಿ. ಎಂಥಾ ಪಾತ್ರವಿದ್ದರೂ ಮಾಡ್ತಾರೆ ಅಂತ ಹೇಳೋ ಮೂಲಕ ಅವರಿಬ್ಬರನ್ನು ಹಾಕಿಕೊಂಡು ಮತ್ತೊಂದು ಸಿನಿಮಾ ಮಾಡೋ ಸೂಚನೆಯನ್ನು ನೀಡಿದ್ದಾರೆ.
ಪ್ರೀತಮ್ ಅವರ ಮುಂದಿನ ಸಿನಿಮಾದಲ್ಲಿ ಭಾವನಾ ಇರ್ತಾರಾ ಇಲ್ವೋ? ಅದಿನ್ನೂ ಪಕ್ಕಾ ಆಗಿಲ್ಲ. ಆದ್ರೆ, ಅವರು ಗಣೇಶ್ ಜೊತೆಯೇ ಮುಂದಿನ ಸಿನಿಮಾ ಮಾಡೋದು ಬಹುತೇಕ ಖಚಿತವಾಗಿದೆ. ಅವರೇ ಪವರ್ ಟಿವಿಗೆ ತಿಳಿಸಿರುವಂತೆ ಗಣೇಶ್ ಮತ್ತು ಅವರ ಕಾಂಬಿನೇಷನ್​ನಲ್ಲಿ ಸಿನಿಮಾ ಬರಲಿದೆ. ಪ್ಲಾನ್ ಮಾಡಿಯಾಗಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಆಗಸ್ಟ್​ನಲ್ಲಿ ಸಿನಿಮಾ ಸೆಟ್ಟೇರಲಿದೆ.

-ಚರಿತ ಪಟೇಲ್

 

 

 

 

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments