‘ಗಂಡುಗಲಿ ಮದಕರಿ ನಾಯಕ’ನಾಗಿ ದರ್ಶನ್ ಹೇಗೆ ಕಾಣ್ತಿದ್ದಾರೆ ಗೊತ್ತಾ?

0
190

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಗಂಡುಗಲಿ ಮದಕರಿ ನಾಯಕ’ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ.
ದರ್ಶನ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ದರ್ಶನ್ ಅವರ ಅಭಿಮಾನಿಗಳಿಗೆ ಪೋಸ್ಟರ್ ಗಿಫ್ಟ್ ನೀಡಿದೆ. ಮದಕರಿ ನಾಯಕನ ಅವತಾರದಲ್ಲಿ ದರ್ಶನ್ ಅವರನ್ನು ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ.
ರಾಕ್​ಲೈನ್ ವೆಂಕಟೇಶ್ ನಿರ್ಮಾಣದ ‘ಗಂಡುಗಲಿ ಮದಕರಿ ನಾಯಕ’ಗೆ ರಾಜೇಂದ್ರ ಸಿಂಗ್ ಬಾಬು ಆ್ಯಕ್ಷನ್ ಕಟ್ ಹೇಳಿದ್ದಾರೆ.


ನಾಳೆ, ಅಂದರೆ ಫೆಬ್ರವರಿ 16ರಂದು ದರ್ಶನ್ ಅವರ ಹುಟ್ಟುಹಬ್ಬ. ರೆಬಲ್ ಸ್ಟಾರ್ ಅಂಬರೀಶ್ ಅವರ ಅಗಲಿಕೆ ಹಿನ್ನೆಲೆಯಲ್ಲಿ ದರ್ಶನ್ ಅದ್ಧೂರಿ ಆಚರಣೆ ಬೇಡ ಅಂತ ಹೇಳಿದ್ದಾರೆ. ಆದ್ದರಿಂದ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಅರ್ಥಗರ್ಭಿತವಾಗಿ ಹಾಗೂ ದರ್ಶನ್ ಅವರಿಗೆ ಇಷ್ಟವಾಗೋ ರೀತಿಯಲ್ಲಿ ಸೆಲಬ್ರೇಟ್ ಮಾಡ್ತಿದ್ದಾರೆ. ದರ್ಶನ್ ಅವರು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ದಾಸೋಹಕ್ಕೆ ಕೈಲಾದ ಮಟ್ಟಿನ ದಾನ ನೀಡಲು ಮುಂದಾಗಿದ್ದು, ಅಭಿಮಾನಿಗಳು ನೆಚ್ಚಿನ ನಟನಿಗೆ ಕೈ ಜೋಡಿಸಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಬದಲು ಅಕ್ಕಿ, ಬೇಳೆ ಮತ್ತಿತರ ದಿನಸಿ ಸಾಮಗ್ರಿಗಳನ್ನು ದರ್ಶನ್ ಮನೆಗೆ ತಂದಿದ್ದಾರೆ ಫ್ಯಾನ್ಸ್. ದರ್ಶನ್ ಈ ಸಾಮಗ್ರಿಗಳನ್ನು ಸಿದ್ಧಗಂಗಾ ಮಠಕ್ಕೆ ಹಾಗೂ ಅನಾಥಾಶ್ರಮಗಳಿಗೆ ತಲುಪಿಸಲಿದ್ದಾರೆ.

LEAVE A REPLY

Please enter your comment!
Please enter your name here