Home ರಾಜ್ಯ ಡಾ. ನಾಗೇಂದ್ರ ಆತ್ಮಹತ್ಯೆಗೆ ಕೆಲಸದ ಒತ್ತಡವೇ ಕಾರಣವಿರಬಹುದು : ಡಾ. ರಾಧಿಕ ಕುಲಕರ್ಣಿ

ಡಾ. ನಾಗೇಂದ್ರ ಆತ್ಮಹತ್ಯೆಗೆ ಕೆಲಸದ ಒತ್ತಡವೇ ಕಾರಣವಿರಬಹುದು : ಡಾ. ರಾಧಿಕ ಕುಲಕರ್ಣಿ

ಗದಗ : ಕೊವಿಡ್​ ಸಂದರ್ಭದಲ್ಲಿ ಸರ್ಕಾರಿ ಮತ್ತು ಖಾಸಗಿ ವೈದ್ಯರು ಸಾಕಷ್ಟು ರೀತಿಯಲ್ಲಿ ಕೆಲಸದ ಒತ್ತಡದಲ್ಲಿ ಸಿಲುಕಿದ್ದಾರೆ. ಇದೇ ಒತ್ತಡಕ್ಕೆ ಮೈಸೂರು ಜಿಲ್ಲೆ ನಂಜನಗೂಡಿನ ತಾಲ್ಲೂ ವೈದ್ಯಾಧಿಕಾರಿ ಡಾ.ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು. ಕಿರಿಯ ವೈದ್ಯರೊಬ್ಬರ ಸಾವಿನ ಸುದ್ದಿ ಆಘಾತ ತಂದಿದೆ ಎಂದು ಐಎಂಎ ಅಧ್ಯಕ್ಷೆ ಡಾ.ರಾಧಿಕಾ ಕುಲಕರ್ಣಿ ತೀವ್ರ ಕಳವಳ ವ್ಯಕ್ತಪಡಿಸಿದರು. ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಮಹಾಮಾರಿ ಕೊರೊನಾ ಸೋಂಕು ರಣಕೇಕೆ ಹಾಕುತ್ತಿದೆ. ಜನರ ಆರೋಗ್ಯ ರಕ್ಷಣೆಗಾಗಿ ವೈದ್ಯರು ತಮ್ಮ ಪ್ರಾಣದ ಹಂಗು ತೊರೆದು ಹಗಲಿರುಳು ಶ್ರಮಿಸುತ್ತಿದ್ದಾರೆ. ಸದ್ಯ ದೇಶದಲ್ಲಿ ಸರಕಾರಿ ವೈದ್ಯರು ಸೇರಿದಂತೆ ಕೋವಿಡ್ ಡ್ಯೂಟಿ ನಿರ್ವಹಿಸಿದರೆ, ಕೆಲ ಖಾಸಗಿ ಆಸ್ಪತ್ರೆಗಳೂ ಕೊವಿಡ್ ರೋಗಿಗಳನ್ನು ಉಪಚರಿಸುತ್ತಿವೆ.ಇನ್ನಿತರೆ ವೈದ್ಯರು ಕೋವಿಡ್ ಅಲ್ಲದೇ ರೋಗಿಗಳಿಗೆ ಚಿಕಿತ್ಸೆ ನೀಡಿದರೂ, ಎಲ್ಲ ವೈದ್ಯರಿಗೂ ನೇರವಾಗಿ ಇಲ್ಲವೇ, ಪರೋಕ್ಷವಾಗಿ ಕೋವಿಡ್ ಸೋಂಕು ತಗುಲುವ ಆತಂಕ ಇದ್ದೇ ಇದೆ. ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕಳೆದ 6 ತಿಂಗಳಿಂದ ತಮ್ಮ ಮನೆಗೆ ಹಿಂದಿರುಗಿಲ್ಲ. ಹೆಂಡತಿ, ಮಕ್ಕಳ ಮುಖವನ್ನೇ ನೋಡಿಲ್ಲ. ಆದರೆ, ಸರಕಾರ ಕೋವಿಡ್ ವಿಚಾರದಲ್ಲಿ ವೈದ್ಯರ ಮೇಲೆ ಸಾಕಷ್ಟು ಒತ್ತಡ ಹೇರುತ್ತಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದರೊಂದಿಗೆ ಆನ್‌ಲೈನ್‌ನಲ್ಲಿ ಪಾಸಿಟಿವ್ ಪ್ರಕರಣಗಳ ಪ್ರಗತಿಯನ್ನು ಕಾಲಕಾಲಕ್ಕೆ ಅಪ್‌ಲೋಡ್ ಮಾಡಬೇಕು. ಕೂಡಲೇ ವೈದ್ಯರ ಮೇಲಿನ ಕೆಲಸ ಒತ್ತಡವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.ಈ ವೇಳೆ ಐಎಂಎ ಸಂಸ್ಥೆಯ ಪದಾಧಿಕಾರಿಗಳು, ಹಾಗೂ ಹಲವು ವೈದ್ಯರುಗಳು ಉಪಸ್ಥಿತರಿದ್ದರು.

-ಮಹಾಲಿಂಗೇಶ್ ಹಿರೇಮಠ. ಗದಗ

LEAVE A REPLY

Please enter your comment!
Please enter your name here

- Advertisment -

Most Popular

ಡ್ರಗ್ ಜಾಲದ ಹಿಂದೆ ದೊಡ್ಡ ದೊಡ್ಡ ಕುಳಗಳಿವೆ: ಇಂದ್ರಜಿತ್ ಲಂಕೇಶ್

ಬೆಂಗಳೂರು: ಡ್ರಗ್ಸ್ ಜಾಲದ ಹಿಂದೆ ದೊಡ್ಡ ಕುಳಗಳಿವೆ ಎಂದು ಇಂದ್ರಜಿತ್ ಲಂಕೇಶ್ ಕಮೀಷನರ್ ಕಚೇರಿ ಬಳಿ ಹೇಳಿದ್ದಾರೆ. ಡ್ರಗ್ಸ್ ಜಾಲದಲ್ಲಿ ಸಣ್ಣ ಸಣ್ಣ ಮೀನು ಹಿಡಿದಿದ್ದಾರೆ. ಡೊಡ್ಡವರನ್ನು ಹಿಡಿಯಬೇಕು ಎಂದಿದ್ದಾರೆ. ಡಿಸಿಪಿ ಬಸವರಾಜ್ ಅಂಗಡಿ...

‘ಶಾಲಾ ಶುಲ್ಕದ ವಿಚಾರವಾಗಿ ಸರ್ಕಾರಕ್ಕೆ ಡೆಡ್‌ ಲೈನ್ ಕೊಟ್ಟ ಪೋಷಕರು’

ಬೆಂಗಳೂರು: ಖಾಸಗಿ ಶಾಲಾ ಶುಲ್ಕದ ಟಾರ್ಚರ್ ಹಿನ್ನಲೆಯಲ್ಲಿ ಶುಲ್ಕದ ವಿಚಾರವಾಗಿ ಪೋಷಕರು ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟಿದ್ದಾರೆ. ಶಾಲಾ ಶುಲ್ಕದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ. ಈ ಹಿಂದೆ ಮೂರು ಭಾರಿ...

‘ಒಂದೇ ಕುಟುಂಬದ ನಾಲ್ವರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ’

ರಾಯಬಾಗ: ರೈಲಿಗೆ ತಲೆ ಕೊಟ್ಟು ಒಂದೇ ಕುಟುಂಬದ 4 ಜನ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆಯೊಂದು ನಡೆದಿದೆ.  ಬೆಳಗಾವಿ ಜಿಲ್ಲೆ ರಾಯಬಾಗ ರೈಲು ನಿಲ್ದಾಣ ಬಳಿ ಈ ಘಟನೆ ನಡೆದಿದ್ದು,  ವೃದ್ಧ ತಂದೆ, ತಾಯಿ,...

ಕುಡಿದ ಮತ್ತಿನಲ್ಲಿ ಜಗಳ ಯುವಕರಿಬ್ಬರ ಮೇಲೆ ಮಾರಾಣಾಂತಿಕ ಹಲ್ಲೆ : ಓರ್ವ ಸಾವು

ಶಿವಮೊಗ್ಗ: ಕುಡಿದ ಮತ್ತಿನಲ್ಲಿ ಬೆಳೆದ ಮಾತಿಗೆ ಮಾತು, ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.  ನಗರದ ಎನ್.ಟಿ. ರಸ್ತೆಯ ಸುಂದರ ಆಶ್ರಯ ಪಕ್ಕದ ವಿಠಲ ದೇವಾಲಯದ ಬಳಿಯೇ ಈ ಘಟನೆ ನಡೆದಿದ್ದು, ಐದಾರು ಯುವಕರ ತಂಡ...

Recent Comments