Home uncategorized ಮೂಗುತಿ ಕೇಳಿ ಮೋಸ | ವಿದೇಶಿ ಕರೆನ್ಸಿ, ಸ್ವದೇಶಿ ನೋಟಿಗೆ ಕನ್ನ | ಗದಗನಲ್ಲಿ ಘಟನೆ

ಮೂಗುತಿ ಕೇಳಿ ಮೋಸ | ವಿದೇಶಿ ಕರೆನ್ಸಿ, ಸ್ವದೇಶಿ ನೋಟಿಗೆ ಕನ್ನ | ಗದಗನಲ್ಲಿ ಘಟನೆ

ಗದಗ : ಬಂಗಾರದ ಮೂಗುತಿ ಖರೀದಿಗಾಗಿ ವಿದೇಶಿಗರ ಸೋಗಿನಲ್ಲಿ ಬಂದು ಬರೋಬ್ಬರಿ 18 ಸಾವಿರ ರೂಪಾಯಿ ಎಗರಿಸಿ ಎಸ್ಕೇಪ್ ಆದ ಘಟನೆ ಗದಗ ಜಿಲ್ಲೆ ರೋಣ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಶ್ರೀ ಲಕ್ಷ್ಮೀ ವೇಂಕಟೇಶ್ವರ ಜುವೇಲರ್ಸ್ ಶಾಪ್ ಗೆ ಯುವಕ-ಯುವತಿಯರಿಬ್ಬರು ವಿದೇಶಿಗರಂತೆ ಸ್ಟೈಲ್ ನಲ್ಲಿ ಇಂಗ್ಲೀಷ್ ಮಾತನಾಡಿದ್ದಾರೆ. ಗೋಲ್ಡ್ ಮೂಗುತಿ ಬೇಕೆಂದು ಹೇಳಿ ಮೂಗುತಿ ಖರೀದಿಸಿ ವಿದೇಶಿ ಕರೆನ್ಸಿ ನೀಡಿದ್ದಾರೆ. ಈ ನೋಟು ನಮ್ಮಲ್ಲಿ ನಡೆಯೊಲ್ಲ, ಭಾರತೀಯ ನೋಟು ಕೊಡಿ ಎಂದಿದ್ದಾರೆ. ನಮ್ಮಲ್ಲಿ ಭಾರತೀಯ ನೋಟು ಇಲ್ಲ, ಅದು ಹೇಗಿರುತ್ತೆ ತೋರಿಸಿ ಎಂದು ಪುಸಲಾಯಿಸಿದ್ದಾರೆ. ಆಗ ಅಂಗಡಿ ಮಾಲಿಕ, ಮೊದಲು ತನ್ನ ಬಳಿಯಿರುವ 2 ಸಾವಿರ ನೋಟು ತೋರಿಸಿದ್ದಾರೆ. ನಂತರ ಬೇರೆ ಯಾವೆಲ್ಲಾ ಇವೆ ತೋರಿಸಿ ಅಂದಿದಕ್ಕೆ, ೧೦ ರೂಪಾಯಿನಿಂದ ಹಿಡಿದು ೨ ಸಾವಿರ ರೂಪಾಯಿ ವರೆಗೆ ಕಂತೆ ಕಂತೆ ನೋಟು ತೋರಿಸಿದ್ದಾರೆ. ಆಗ ಈ ಕಳ್ಳರು ಆ ನೋಟಿನ ಕಂತೆಯನ್ನು ಹಿಡಿದು, ನಂಬರ್,ಭಾಷೆ, ಚಿತ್ರ, ಚಿನ್ಹೆ ಎಲ್ಲವನ್ನು ನೋಡುವ ರೀತಿ ನಟಿಸಿದ್ದಾರೆ. ಆಗ ಅಲ್ಲಿದ್ದ ಯುವತಿ ಮಾಲಿಕನ ಗಮನ ಬೆರೆಕಡೆ ಸೇಳೆದಾಗ 18 ಸಾವಿರ ರೂಪಾಯಿ ಜೇಬಿಗೆ ಇಳಿಸಿಕೊಂಡಿದ್ದಾನೆ. ಈ ಎಲ್ಲಾ ದೃಶ್ಯಗಳು ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿವೆ. ನಂತರ ಬ್ಯಾಂಕ್ ಗೆ ಹೋಗಿ ಕರೆನ್ಸಿ ಬದಲಿಸಿಕೊಂಡು ಬರುವದಾಗಿ ಹೇಳಿ, ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅರ್ಧಗಂಟೆ ನಂತರ ಬೆರೆಯವರಿಗೆ ಹಣ ಕೊಡಬೇಕಾದ ವೇಳೆ ಎಣಿಸಿಕೊಂಡಾಗ ಬರೋಬ್ಬರಿ 18 ಸಾವಿರ ರೂಪಾಯಿ ಇಲ್ಲವಾಗಿದೆ. ಸಿಸಿ ಕ್ಯಾಮರಾ ಚೆಕ್ ಮಾಡಿದಾಗ ವಿದೇಶಿಗರ ಅಸಲಿಯತ್ತು ಗೊತ್ತಾಗಿದೆ. ಆದ್ರೆ ವಿದೇಶಿಗರಿಗೆ, ನಮ್ಮ ದೇಶದ ನೋಟನ್ನು ತೋರಿಸಬೇಕು ಎಂಬ ದಾವಂತದಲ್ಲಿ ಮಾಲಿಕ ಮೋಸಕ್ಕಿಡಾಗಿರುವುದು ವಿಪರ್ಯಾಸ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

ಅಪಮಾನದಿಂದ ಶೋಕ್ದಾರ್ ಮುಕ್ತ.. ನೋ ಮಿಸ್ಟೇಕ್..?!

ನೈಟ್ ಸಫಾರಿಯಿಂದ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದ ಸ್ಯಾಂಡಲ್​ವುಡ್​ನ ಶೋಕ್ದಾರ್, ಟಾಕ್ ಆಫ್ ದ ಟೌನ್ ಆಗಿದ್ರು. ಆದ್ರೀಗ ಅರಣ್ಯಾಧಿಕಾರಿಗಳು ಆ ಕೇಸ್​ನ ಟ್ರೇಸ್ ಮಾಡಿದ್ದಾರೆ. ಅವಮಾನ ಹಾಗೂ ಅಪಮಾನಗಳಿಂದ ಬಜಾರ್ ಹುಡ್ಗನಿಗೆ ಮುಕ್ತಿ...

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

ಕಾಡಾನೆ ದಾಳಿಗೆ ಸಕ್ರೆಬೈಲು ಬಿಡಾರದ ದೈತ್ಯ ಆನೆ `ರಂಗ’ ಸಾವು

ಶಿವಮೊಗ್ಗ :  ಕಾಡಾನೆ ದಾಳಿಯಿಂದ ಸಕ್ರೆಬೈಲು ಬಿಡಾರದ ಆನೆ ರಂಗ ಮೃತಪಟ್ಟಿದೆ. 35 ವರ್ಷದ ಆನೆ ರಂಗ ಸಕ್ರೆಬೈಲು ಬಿಡಾರದ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ರಾತ್ರಿ ಬಿಡಾರಕ್ಕೆ ನುಗ್ಗಿದ ಕಾಡೆನೆಯೊಂದು ಏಕಾಏಕಿ ರಂಗನ ಮೇಲೆರಗಿದೆ....

ದೇವೇಂದ್ರ ಫಡ್ನವಿಸ್​​ಗೆ ಕೊರೋನಾ

ಮುಂಬೈ : ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರಿಗೆ ಕೊರೋನಾ ಸೋಂಕು ತಗುಲಿದೆ. ಫಡ್ನವೀಸ್ ಅವರು ಬಿಹಾರದ ಬಿಜೆಪಿ ಚುನಾವಣಾ ಪ್ರಚಾರ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಹಾರ ವಿಧಾನಸಭಾ...

Recent Comments