ಗದಗ : ಕೊರೋನಾ ವೈರಸ್ ಭೀತಿ ಹಾಗೂ 144 ಕಾಲಂ ಜಾರಿ ನಡುವೆಯೂ ಆರೋಗ್ಯ ಸಚಿವ ಶ್ರೀರಾಮುಲು ಆಪ್ತ ಸಹಾಯಕ ಗದಗದಲ್ಲಿ ಭರ್ಜರಿಯಾಗಿಯೇ ಬರ್ತಡೇ ಆಚರಿಸಿಕೊಂಡಿದ್ದಾನೆ. ಬಿ.ಶ್ರೀರಾಮುಲು ಆಪ್ತಸಹಾಯಕ ಎಸ್.ಎಚ್ ಶಿವನಗೌಡ ತನ್ನ ಬರ್ತಡೇ ನಿಮಿತ್ತ ಗದಗ ಹೊರವಲಯದ ಶ್ರೀನಿವಾಸ ಭವನದಲ್ಲಿ ಗುಂಡು ತುಂಡು ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ ಸಾಮಾಜಿಕ ಅಂತರ ಮರೆತು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದರು. ಈ ಪಾರ್ಟಿನಲ್ಲಿ ನೂರಾರು ಜನ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಕೆಲವು ಮುಖಂಡರು ಭಾಗಿಯಾಗಿದ್ರು. ಇನ್ನು ಪಾರ್ಟಿಯಲ್ಲಿ ಭಾಗವಹಿಸಿದ್ದವರು ಎಣ್ಣೆಯ ಗಮ್ಮತ್ತಿನಲ್ಲಿ ಕುಣಿದು ಕುಪ್ಪಳಿಸಿದರು. ಈ ಪಾರ್ಟಿ ತಡ ರಾತ್ರಿವರೆಗೂ ನಡೆದಿದ್ದು, ನಿಷೇದಾಜ್ಞೆ ನಡುವೆ ಸಚಿವ ಶ್ರೀರಾಮುಲು ಆಪ್ತನ ಬೇಜವಾಬ್ದಾರಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮದುವೆ, ಸಭೆ ಸಮಾರಂಭಗಳಿಗೆ ಅನುಮತಿ ದೊರೆಯದ ಈ ಸಮಯದಲ್ಲಿ ಇವರಿಗೆ ಅನುಮತಿ ನೀಡಿದವರ್ಯಾರು? ಸಾಮಾನ್ಯ ಜನ ದುಡಿಯೋಕೆ ಅಂಗಡಿ ತೆರೆದರೆ ಪೊಲೀಸರು ಬಂದು ಅಂಗಡಿ ಬಂದ್ ಮಾಡಿಸ್ತಾರೆ. ಜನ್ರ ಮೇಲೆ ಕೇಸ್ ಹಾಕ್ತಾರೆ. ಮದುವೆ ಮಾಡಿಕೊಡಬೇಕು ಅಂತಾ ಪರ್ಮಿಷನ್ ಗೆ ಹೋದರೆ ಕೊರೋನಾ ಇದೆ ಅಂತ ಕಾರಣ ನೀಡೋ ಅಧಿಕಾರಿಗಳು ದೊಡ್ಡ ಮಂದಿ ಇಂತಹ ದೊಡ್ಡ ಪಾರ್ಟಿ ಆಯೋಜನೆ ಮಾಡಿದ್ರೂ ಅಧಿಕಾರಿಗಳು ಜಾಣ ಕುರಡುತನ ಪ್ರದರ್ಶನ ಮಾಡ್ತಾ ಇದ್ದಾರೆ. ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು ಇವರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.
ಮಹಾಲಿಂಗೇಶ್ ಹಿರೇಮಠ. ಪವರ್ ಟಿವಿ.ಗದಗ