Homeರಾಜ್ಯದರ್ಶನ್ ಗೆ ಟಗರು ಗಿಫ್ಟ್ ನೀಡಿದ ಗದಗ ಅಭಿಮಾನಿ

ದರ್ಶನ್ ಗೆ ಟಗರು ಗಿಫ್ಟ್ ನೀಡಿದ ಗದಗ ಅಭಿಮಾನಿ

ಗದಗ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಗದಗನ ಅಭಿಮಾನಿಯೊಬ್ಬ ತಾನು ಸಾಕಿ ಬೆಳಿಸಿದ ಮೆಚ್ಚಿನ ಟಗರನ್ನ ಗಿಫ್ಟ್ ಆಗಿ ನೀಡಿದ್ದಾನೆ.

ಗದಗ ತಾಲೂಕಿನ ಕಣವಿ ಹೊಸೂರಿನ ಯುವಕ ಶಂಭು ಗಡಗಿ ಎಂಬಾತ ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ರಾಬರ್ಟ್ ಸಿನಿಮಾದ ಫ್ರೀ ಲಾಂಚಿಂಗ್ ಮುಗಿಸಿ ಬೆಂಗಳೂರಿನತ್ತ ಮರಳುತ್ತಿದ್ದ ನಟ ದರ್ಶನ್ ಅಭಿಮಾನಿಯನ್ನ ನೋಡಿದ ತಕ್ಷಣ ಕಾರಿನಿಂದ ಇಳಿದು ಆತನ ಉಡುಗುರೆಯನ್ನ ಖುಷಿಯಿಂದ ಸ್ವೀಕಾರ ಮಾಡಿದ್ದಾರೆ. ಶಂಭು ಗದಗನ ಶಿರಸಂಗಿ ಮೊಬೈಲ್ ಶಾಫ್ ನಲ್ಲಿ ಕೆಲಸ ಮಾಡುತ್ತಿದ್ದು, ದರ್ಶನ್ ಅವರ ಅಪ್ಪಟ ಅಭಿಮಾನಿ. ಸುಮಾರು  ಎರಡೂವರೆ ವರ್ಷಗಳಿಂದ ತಾನು ಅತೀ ಪ್ರೀತಿಯಿಂದ ಸಾಕಿದ್ದ ಟಗರನ್ನ ದರ್ಶನ್ ಗೆ ಕೊಡುವುದರ ಮೂಲಕ ಅಭಿಮಾನ ಮೆರೆದಿದ್ದಾನೆ. ಆದ್ರೆ ಸದ್ಯ ದರ್ಶನ್ ಟಗರನ್ನ ತೆಗೆದುಕೊಂಡು ಹೋಗಿಲ್ಲ. ಆದ್ರೆ ಅಭಿಮಾನಿ ಶಂಭುಗೆ ಮೈಸೂರಿನ ತಮ್ಮ ಫಾರ್ಮ್ ಹೌಸ್ ಗೆ ಆಹ್ವಾನ ನೀಡಿದ್ದಾರಂತೆ. ತಾವು ಒಂದು ವಾಹನ ಕಳಿಸುವುದಾಗಿ ತಿಳಿಸಿರೋ ಅವರು ವಾಹನದಲ್ಲಿ ಟಗರು ಮತ್ತು ನೀನು ಇಬ್ಬರು ಬನ್ನಿ ಅಂತ ಆತನ ಮೊಬೈಲ್ ನಂಬರ್ ಅನ್ನು ತೆಗೆದುಕೊಂಡು ಹೋಗಿದ್ದಾರೆ. ಸಿನಿಮಾದ ಬ್ಯೂಸಿ ಸೆಡ್ಯೂಲ್ ನಲ್ಲಿ ಇರೋದ್ರಿಂದ ಸದ್ಯ ಟಗರನ್ನ ಫಾರ್ಮ ಹೌಸ್ ಗೆ ತೆಗೆದುಕೊಂಡು ಹೋಗಲಾಗುವುದಿಲ್ಲ. ಹೀಗಾಗಿ ನೀನೆ ಬಾ ಅಂತ ತಿಳಿಸಿದ್ದಾರೆ ಅಂತ ಖುಷಿಯಿಂದ ಶಂಭು ಹೇಳಿಕೊಂಡಿದ್ದಾನೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments