HomeP.Specialಗದಗದಲ್ಲಿ ಕೊರೋನಾ ಆ್ಯಂಟಿವೈರಸ್ ಗಣಪ

ಗದಗದಲ್ಲಿ ಕೊರೋನಾ ಆ್ಯಂಟಿವೈರಸ್ ಗಣಪ

ಗದಗ : ಇಂದು ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ. ಗಣಪನ ಮೂರ್ತಿಗಳನ್ನ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸ್ತಾರೆ. ಸಾಮಾನ್ಯವಾಗಿ ಗಣಪ ಅಂದ್ರೆ, ಪ್ಲಾಸ್ಟರ್ ಗಣಪ, ಮಣ್ಣಿನ ಗಣಪ, ಪರಿಸರ ಪ್ರೇಮಿ ಗಣಪ, ಉತ್ತತ್ತಿ ಗಣಪ, ತೆಂಗಿನಕಾಯಿ ಗಣಪ, ಸಾಸಿವೆ ಕಾಳು ಗಣಪ ಹೀಗೆ ನಾನಾ ರೀತಿಯ ವಿಶೇಷ ಗಣಪನ ಮೂರ್ತಿಗಳನ್ನು ತಯಾರಿಸಿರೋದನ್ನ ನೋಡಿರ್ತೀವಿ. ಆದರೆ ಸದ್ಯ ಪ್ರಪಂಚದಾದ್ಯಂತ ರಣಕೇಕೆ ಹಾಕ್ತಿರೋ ಕೊರೋನಾ ವೈರಸ್ ವಿರುದ್ಧ ಇಲ್ಲೊಂದು ವಿಘ್ನನಿವಾರಕನ ಮೂರುತಿ ತಯಾರಾಗಿದೆ.‌

ಹೌದು, ಆಯುರ್ವೇದದಲ್ಲಿ ಎಲ್ಲಾ ರೋಗಗಳಿಗೂ ಹೆಚ್ಚಾಗಿ ಬಳಸೋ ಪಚ್ಚ ಕರ್ಪೂರದ ಗಣೇಶನನ್ನ ತಯಾರಿಸಲಾಗಿದೆ.
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ರಸಾಯನಶಾಸ್ತ್ರ ಉಪನ್ಯಾಸಕರಾಗಿರೋ ವಿನಾಯಕ ಜಾಧವ ಅನ್ನೋರು ಈ ಪಚ್ಚಕರ್ಪೂರದ ವಿಘ್ನೇಶ್ವರನನ್ನ ತಯಾರಿಸಿದ್ದಾರೆ. ಪ್ರತಿವರ್ಷವೂ ವಿಶೇಷವಾಗಿರೋ ಗಣಪನ ಪ್ರತಿಷ್ಠಾಪಿಸೋ ಇವರು ಈ ಬಾರಿ ಆಯುರ್ವೇದದಲ್ಲಿ ಕಲಿಯುಗದ ಸಂಜೀವಿನಿ ಅಂತಾನೆ ಕರೆಯೋ ಪಚ್ಚ ಕರ್ಪೂರದ ಗಣನಾಯಕನನ್ನ ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿದ್ದಾರೆ.

ಕೊರೋನಾ‌ ಎಂಬ‌ ಮಹಾಮಾರಿ‌ ವೈರಸ ಇಡಿ‌ ವಿಶ್ವವನ್ನೆ ಬುಡ ಮೆಲು‌ಮಾಡಿದೆ. ಇಂತಹ ಸಾಕಷ್ಟು ವಿವಿದ ವೈರಸ್ ಗಳು ನಮ್ಮ‌ ಸುತ್ತಮುತ್ತಲು‌ ಇರುತ್ತವೆ. ಆದರೆ ನಾವುಗಳು ಎಷ್ಟೆ ಜಾಗರುಕರಾಗಿದ್ದರೂ ಕೂಡ ಅವುಗಳ ಪ್ರಭಾವದಿಂದ ಅನೇಕ ರೋಗಗಳಿಗೆ ನಾವೆಲ್ಲರೂ ತುತ್ತಾಗುತ್ತಿದ್ದೆವೆ. ಆದರೆ ನಮ್ಮ ಪೂರ್ವಜರು ನಮಗೆ ನಿಡಿದ‌‌ ಆಯುರ್ವೇದ ಎಂಬ ಪ್ರಾಕೃತಿಕ ಚಿಕೆತ್ಸೆ ಮತ್ತು ಆಯುರ್ವೇದಿಕ‌ ಔಷಧಗಳು ನಮ್ಮನ್ನು ಇನ್ನೂ ಸಹ ರಕ್ಷಣೆ ಮಾಡುತ್ತಿವೆ ಎಂಬುದಕ್ಕೆ ನಾವು ಹೆಮ್ಮೆ ಪಡಬೇಕಾಗಿದೆ.

ಹಾಗಾಗಿ ಇಂತಹ ಆರ್ಯುವೇದಲ್ಲಿ ಎಲ್ಲಾ ರೋಗಗಳಿಗೂ ಸಾಮಾನ್ಯವಾಗಿ ಉಪಯೋಗಿಸುವ ವಸ್ತು ಒಂದನ್ನು ಉಪಯೋಗಿಸಿ ಈ ವರುಷ ಗಣೇಶನನ್ನ ಪಚ್ಚ ಕರ್ಪೂರದಿಂದ ಸಿದ್ಧಪಡಿಸಿದ್ದಾರೆ. ಮುಖ್ಯವಾಗಿ ಉಸಿರಾಟದ ಎಲ್ಲಾ ಅಂಗಾಂಗಗಳ ‌ಚಿಕೆತ್ಸೆಗೆ ಹಾಗೂ ದೇಹದಲ್ಲಿರುವ ಅನೇಕ‌ರಿತಿಯ ಬ್ಯಾಕ್ಟಿರಿಯಾ , ವೈರಸ್‌ ಗಳು ಹಾಗೂ ಅನೇಕ ‌ರೀತಿಯಾದಂತಹ ವಿಷಯುಕ್ತ‌ ಪದಾರ್ಥಗಳನ್ನು, ಕಲ್ಮಶಗಳನ್ನು ಹೊಗಲಾಡಿಸುವಲ್ಲಿ ಪಚ್ಚಕರ್ಪೂರ ಪಾತ್ರ ಬಹಳ‌ ಮಹತ್ವದ್ದಾಗಿದೆ.

ಇದರ ಒಂದು ವಿಷೇಶ ಗುಣ‌ವೆನೆಂದರೆ ಗಾಳಿಯಲ್ಲಿ ನಾವು ಇದನ್ನು ತೆರೆದಿಟ್ಟಾಗ ಇದು ಬೇಗನೆ ಆವಿಯಾಗುತ್ತದೆ. ನಂತರ ನಾವು ಇರುವ ಸುತ್ತಮುತ್ತಲಿನ‌ ಪ್ರದೇಶದಲ್ಲಿ ಎಂತಹದ್ದೆ ಬ್ಯಾಕ್ಟಿರಿಯಾ ವೈರಸ್ ಗಳು ಇದ್ದರೆ ಅವುಗಳನ್ನು ನಾಶಮಾಡುವಲ್ಲಿ ನಮಗೆ ತುಂಬಾ ಸಹಾಯಕಾರಿಯಾಗುತ್ತಂತೆ. ಸಹಜವಾಗಿ ಇದನ್ನು ಪ್ರಾಕೃತಿಕ ಸ್ಯಾನಿಟೈಸರ್ ಅಂತಾನೂ ಕರಿತಾರೆ.

ಇನ್ನೊಂದು ಇದರ ಉಪಯೋಗವೆಂದರೆ ಇದನ್ನು ನಾವು ನಿರೀರುವ‌ ಪ್ರದೇಶದಲ್ಲಿ ವಿಸರ್ಜನೆ‌ ಮಾಡಿದರೆ ಆ ನೀರಿನಲ್ಲಿರುವ ಎಲ್ಲಾ ಕ್ರಿಮಿಗಳು ನಾಶವಾಗಿ‌ ಮತ್ತೆ ನಮಗೆ ಕುಡಿಯಲು ಯೋಗ್ಯವಾದ ನೀರು ದೊರಕುತ್ತದೆ.

ಅದಲ್ಲದೆ ನಾವು ನೀರಿನಲ್ಲಿ ವಿಸರ್ಜನೆ‌ಮಾಡಿಲ್ಲ‌ ಅಂದರೆ ಈ  ಪಚ್ಚಕರ್ಪೂದ ಗಣೇಶನನ್ನು ಗಾಳಿಯಲ್ಲಿ ತೇರದಿಟ್ಟರೆ ತನ್ನಿಂದ ತಾನೆ ಇದು ಕರಗಿ ಹೋಗಿ ವಾತಾವರಣದಲ್ಲಿನ ಕ್ರಿಮಿಗಳನ್ನು ಶುದ್ಧೀಕರಿಸಿ ಗಾಳಿಯಿಂದ ಹರಡುವ ರೋಗಗಳಿಂದ ನಮ್ಮ ನಮ್ಮೆಲ್ಲರನ್ನು ರಕ್ಷಿಸುತ್ತದೆ ಅಂತೆ. ಹೀಗಾಗಿ ಪಚ್ಚ ಕರ್ಪೂರದಿಂದ ತಯಾರಿಸೋ ವಿಘ್ನನಿವಾರಕನನ್ನ ನೋಡೋಕೆ ಜನ್ರು ತಂಡೋಪ ತಂಡವಾಗಿ ಬರ್ತಿದಾರೆ. ಅದೇನೆ ಇರಲಿ. ಬರೋ ದಿನಗಳಲ್ಲಿ ವಿಘ್ನರಾಜ ಮನುಕುಲಕ್ಕೆ ಒಳ್ಳೆಯದನ್ನ ಮಾಡಲಿ. ಸದ್ಯ ಎದುರಾಗಿರೋ ಎಲ್ಲ ಕಷ್ಟಗಳನ್ನ ದೂರವಾಗಿಸಲಿ.

-ಮಹಾಲಿಂಗೇಶ್ ಹಿರೇಮಠ

LEAVE A REPLY

Please enter your comment!
Please enter your name here

- Advertisment -

Most Popular

Recent Comments