Home ರಾಜ್ಯ ‘ಪಿಬಿ ರಸ್ತೆ ಮೇಲ್ದರ್ಜೆಗೆ ಏರಿಸುವಂತೆ ಗಬ್ಬೂರು ಬೈಪಾಸ್ ಬಂದ್’

‘ಪಿಬಿ ರಸ್ತೆ ಮೇಲ್ದರ್ಜೆಗೆ ಏರಿಸುವಂತೆ ಗಬ್ಬೂರು ಬೈಪಾಸ್ ಬಂದ್’

ಹುಬ್ಬಳ್ಳಿ: ಪುಣಾ-ಬೆಂಗಳೂರ ಬೈಪಾಸ್ ರಸ್ತೆಯು ಕಿರಿದಾಗಿದ್ದು, ಇದರಿಂದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಗಬ್ಬೂರು ಬೈಪಾಸ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಕಾರ್ಯಕರ್ತರು ಹೆದ್ದಾರಿ ಪ್ರತಿಭಟನೆ ಹಿನ್ನೆಲೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಆಗ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹು-ಧಾ ಪೊಲೀಸ್ ಕಮೀಷನರ್ ಲಾಭುರಾಮ್ ಪ್ರತಿಭಟನೆ ಕೈ ಬಿಡುವಂತೆ ಹೇಳಿದರು. ಆಗಲೂ ಪ್ರತಿಭಟನೆ ನಿಲ್ಲಿಸದಿದ್ದಾಗ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನಚಕಮಕಿ ನಡೆಯಿತು.

ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ಶರ್ಟ ಹಿಡಿದ್ದಾರೆಂದು ಪೊಲೀಸರು ಮತ್ತು ಕಾರ್ಯಕರ್ತರು ತಳ್ಳಾಟ ನೂಕಾಟ ನಡೆಯಿತು. ಇದರಿಂದ ಕೆಲಹೊತ್ತು ಟ್ರಾಪೀಕ್ ಜಾಮ್ ಉಂಟಾಗಿತ್ತು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಂಡು ರಾಷ್ಟ್ರೀಯ ಹೆದ್ದಾರಿ 4ನ್ನು ವಿಸ್ತರಿಸಬೇಕು. ಇಲ್ಲದೇ ಹೋದಲ್ಲಿ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಇನ್ನೂ ಉಗ್ರವಾದ ಹೋರಾಟ ಮಾಡಲಾಗುವುದು ಎಂದು  ಕಾಂಗ್ರೆಸ್ ನಾಯಕರು ಎಚ್ಚರಿಸಿದರು.

LEAVE A REPLY

Please enter your comment!
Please enter your name here

- Advertisment -

Most Popular

‘ಡಿಜಿಟಲ್‌ ಮೀಡಿಯಾಗೆ ಹೊಸ ಗೈಡ್‌ಲೈನ್ಸ್ ‘

ಬೆಂಗಳೂರು: ಸೋಶಿಯಲ್ ಮೀಡಿಯಾಗಳಿಗೆ ಮೇಲೆ ಕೇಂದ್ರ ಸರ್ಕಾರ ಮೂಗುದಾರ ಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಗಳು ಹೆಚ್ಚಾಗುತ್ತಿವೆ. ನಿಂಧನೆ ಮಾಡುವಂತಹ ಪೋಸ್ಟ್ ಗಳನ್ನು ನಿರ್ಬಂಧಿಸಬೇಕು ಎಂದು ಕೇಂದ್ರ ಸರ್ಕಾರ ಸೋಶಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾಗೆ...

ನನ್ನ ಸೋಲು ಲಿಂಗಾಯತ ಸುಮುದಾಯಕ್ಕೆ ಹಿನ್ನಡೆ: ಸುನಂದಾ

ಮೈಸೂರು: ಮೈಸೂರು ಮೇಯರ್ ಚುನಾವಣೆಯಲ್ಲಿ ಬಿಜೆಪಿಗೆ ಸೋತ ಹಿನ್ನೆಲೆಯಲ್ಲಿ‌ ಬಿಜೆಪಿ ಅಭ್ಯರ್ಥಿ ಸುನಂದ ಪಾಲನೇತ್ರ ಕಣ್ಣೀರು ಹಾಕಿದ್ದಾರೆ. ನನ್ನ ಸೋಲು ಲಿಂಗಾಯತ ಸುಮುದಾಯಕ್ಕೆ ಹಿನ್ನೆಡೆಯಾಗಿದೆ. ನಾನು ಮೇಯರ್ ಆಗುತ್ತೇನೆ ಅಂತ ತುಂಬಾ‌ ನಿರೀಕ್ಷೆ ಇಟ್ಟುಕೊಂಡಿದ್ದೆ....

‘ಗ್ರಾಮಸ್ಥರ ಕೆರೆ ನಿರ್ಮಾಣಕ್ಕೆ ನಿನಾಸಂ ಸತೀಶ್ ಮೆಚ್ಚುಗೆ’

ಶಿವಮೊಗ್ಗ: ಗ್ರಾಮದ ಜನರೇ ಸೇರಿಕೊಂಡು, ಗ್ರಾಮದ ಕೆರೆಗಳನ್ನು ಅಭಿವೃದ್ಧಿಗೊಳಿಸಿದ ಮುತ್ತಲ ಗ್ರಾಮಕ್ಕೆ ನಟ ನೀನಾಸಂ ಸತೀಶ್ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮುತ್ತಲ ಗ್ರಾಮದಲ್ಲಿ ಎರಡು ಕೆರೆಗಳನ್ನು...

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು ಬುದ್ಧಿ ಬಂದಿಲ್ಲ: ಈಶ್ವರಪ್ಪ

ವಿಜಯಪುರ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು ಬುದ್ಧಿ ಬಂದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಜಯಪುರದಲ್ಲಿ ಗ್ರಾಮೀಣಾಬಿವೃದ್ಧಿ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಹೋದಲೆಲ್ಲಾ ಮುಂದಿನ ಸಿಎಂ ನಾನೇ ಅಂತಾ ಹೇಳ್ತಾರೆ. ಸಿದ್ದರಾಮಯ್ಯ ಹಗಲು-ರಾತ್ರಿ...

Recent Comments