14 ತಿಂಗಳ ನರಕ ಅಂತ್ಯ : ಜಿ.ಎಸ್​ ಬಸವರಾಜ್​

0
87

ಬೆಂಗಳೂರು : ದೋಸ್ತಿ ಸರ್ಕಾರ ರಾಜ್ಯದ ಜನರು ನರಕ ಅನುಭವಿಸುವ ಸ್ಥಿತಿ ತಂದಿತ್ತು. ಆದ್ರೆ ಈಗ ರಾಜ್ಯದಲ್ಲಿ 14 ತಿಂಗಳ ನರಕ ಅಂತ್ಯವಾಗಿದೆ ಅಂತ ತುಮಕೂರು ಸಂಸದ ಜಿ.ಎಸ್​ ಬಸವರಾಜ್​ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದಿಂದ ರಾಜ್ಯದಲ್ಲಿ ನರಕ ಸ್ಥಿತಿ ನಿರ್ಮಾಣವಾಗಿತ್ತು. ಈ 14 ತಿಂಗಳ ನರಕ ಈಗ ಅಂತ್ಯವಾಗಿದೆ. ನಮ್ಮ ನಾಯಕರು ರಾಜ್ಯದ ಮುಖ್ಯಮಂತ್ರಿ ಆಗ್ತಾರೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಆಡಳಿತ ಇರುತ್ತೆ. ಯಾವುದೇ ಭಿನ್ನಾಭಿಪ್ರಾಯ ಉದ್ಭವಿಸುವುದಿಲ್ಲ. ಉತ್ತಮ ಅಭಿವೃದ್ಧಿ ಕೆಲಸ ಹೊಸ ಸರಕಾರದಿಂದ ಸಾಧ್ಯ ಎಂದಿದ್ದಾರೆ.

LEAVE A REPLY

Please enter your comment!
Please enter your name here