Home ರಾಜ್ಯ ‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರಕ್ಕೆ ನಿಧಿ ಸಮರ್ಪಣಾ ಅಭಿಯಾನಕ್ಕೆ ತಯಾರಿ’

‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರಕ್ಕೆ ನಿಧಿ ಸಮರ್ಪಣಾ ಅಭಿಯಾನಕ್ಕೆ ತಯಾರಿ’

ಶಿವಮೊಗ್ಗ: ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಯೋಜನೆಯ ಅನ್ವಯ ಸಮಸ್ತ ಹಿಂದೂ ಸಮಾಜದಿಂದ, ಮಂದಿರ ನಿರ್ಮಾಣಕ್ಕಾಗಿ, ನಿಧಿ ಸಮರ್ಪಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಆರ್.ಎಸ್.ಎಸ್. ನ ದಕ್ಷಿಣ ಕರ್ನಾಟಕದ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್ ತಿಳಿಸಿದ್ದಾರೆ. 

ಇಂದು ಈ ಬಗ್ಗೆ ಮಾದ್ಯಮಗಳಿಗೆ ವಿಷಯ ತಿಳಿಸಿದ ಅವರು, ಅಯೋಧ್ಯೆಯಲ್ಲಿನ ಶ್ರೀ ರಾಮ ಜನ್ಮಭೂಮಿ ಮಂದಿರದ ನಿರ್ಮಾಣಕ್ಕಾಗಿ ಮತ್ತು ಅಲ್ಲಿನ ಇತರೆ ಸೌಲಭ್ಯಗಳಿಗೆ ಅನುಕೂಲವಾಗುವಂತೆ, ದೇಶದಾದ್ಯಂತ ನಿಧಿ ಸಮರ್ಪಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅದರಂತೆ, 5 ಕಾರ್ಯಕರ್ತರನ್ನೊಳಗೊಂಡ ತಂಡಗಳು, ಶಿವಮೊಗ್ಗ ಜಿಲ್ಲೆಯಲ್ಲಿನ ಎಲ್ಲಾ ಹಳ್ಳಿಗಳನ್ನು ಈ ಅಭಿಯಾನದ ಮುಖಾಂತರ ತಲುಪಿ ನಿಧಿ ಸಮರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಅಭಿಯಾನಕ್ಕೆ ನಿಧಿ ಸಂಗ್ರಹ ಎಂಬ ಹೆಸರು ಕರೆಯುವ ಬದಲಾಗಿ, ನಿಧಿ ಸಮರ್ಪಣೆ ಎಂದು ಹೆಸರಿಸಲಾಗಿದ್ದು, ರಾಜ್ಯದ 27,500 ಹಳ್ಳಿಗಳಲ್ಲಿ, 90 ಲಕ್ಷ ಜನರನ್ನು ತಲುಪಿ, ರಾಮಮಂದಿರಕ್ಕೆ ಧನ ಸಂಗ್ರಹಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.  ಅದರಂತೆ, ಸಂಗ್ರಹವಾದ ಅಷ್ಟು ಹಣವನ್ನು, 48 ಗಂಟೆಯೊಳಗಾಗಿ, ತೀರ್ಥಕ್ಷೇತ್ರ ಟ್ರಸ್ಟ್ ನ ಬ್ಯಾಂಕ್ ಖಾತೆಗೆ ಜಮಾ ಮಾಡಲು ಯೋಜಿಸಲಾಗಿದೆ. 

ಖಾತೆಗೆ ಹಣ ಪಾವತಿಸುವ ವ್ಯವಸ್ಥೆ ಸಂಪೂರ್ಣವಾಗಿ ಪಾರದರ್ಶಕವಾಗಿರಲಿದ್ದು, 10 ರೂ. ನಿಂದ ಹಿಡಿದು 1 ಸಾವಿರ ರೂ. ವರೆಗೂ ಮುದ್ರಿತ ಕೂಪನ್ ಗಳ ಸಹಾಯದಿಂದ ಧನ ಸಂಗ್ರಹ ನಡೆಯಲಿದೆ.  2 ಸಾವಿರ ರೂ. ಗಿಂತಲೂ ಹೆಚ್ಚಿನ ಮೊತ್ತದ ಅರ್ಪಿಸಿದ ಭಕ್ತರಿಗೆ ರಶೀದಿ ನೀಡಲಾಗುವುದು.  ಭಕ್ತರು ಭಾರತೀಯ ಆದಾಯ ತೆರಿಗೆ ಕಾಯ್ದೆಯ 80 ಜಿ ಸೆಕ್ಷನ್ ಅಡಿಯಲ್ಲಿ, ತೆರಿಗೆ ವಿನಾಯಿತಿ ಸೌಲಭ್ಯ ಕೂಡ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

2024 ರ ಇಸವಿಯೊಳಗೆ ಶ್ರೀ ರಾಮ ಲಲ್ಲಾನನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ಯೋಜಿಸಲಾಗಿದೆ ಎಂದು ಪಟ್ಟಾಭಿರಾಮ್ ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here

- Advertisment -

Most Popular

‘ಗದಗನಲ್ಲಿ ಕಾಲೇಜ್ ಓಪನ್ ರೂಲ್ಸ್ ಬ್ರೇಕ್’

ಗದಗ: 10 ತಿಂಗಳ ನಂತರ ರಾಜ್ಯದಲ್ಲಿ ಪದವಿ ಕಾಲೇಜುಗಳು ಸಂಪೂರ್ಣ ಆರಂಭವಾಗಿವೆ. ಆದರೆ ಗದಗ ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಸರ್ಕಾರದ ಕೊರೋನಾ ರೂಲ್ಸ್ ಗಳು ಪಾಲನೆ ಆಗುತ್ತಿಲ್ಲ. ಚಿಕ್ಕ...

‘ವಿಶ್ವ ಹಿಂದು ಪರಿಷತ, ಭಜರಂಗದಳ ನೇತೃತ್ವದಲ್ಲಿ ನಿಧಿ ಸಂಗ್ರಹಣೆ’

ಗದಗ: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಗದಗ ಜಿಲ್ಲೆಯಲ್ಲಿ ಕೂಡ ನಿಧಿ ಸಂಗ್ರಹಣೆ ಕಾರ್ಯ ನಡೆಯಿತು. ವಿಶ್ವ ಹಿಂದು ಪರಿಷತ, ಭಜರಂಗದಳ ನೇತೃತ್ವದಲ್ಲಿ ನಿಧಿ ಸಂಗ್ರಹಣೆಗೆ ಮುಂದಾಗಿದ್ದಾರೆ. ನಗರದ ಜೋಡು ಮಾರುತೇಶ್ವರ ದೇವಸ್ಥಾನದಲ್ಲಿ...

ಸಿಎಂ ಅವರ ಸಿಡಿ ಇದ್ರೆ ಕೊಡಿ, ಸುಮ್ನೆ ಹೆದರಿಸುವದು ಏಕೆ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ರಾಜಕಾರಣದಲ್ಲಿ ಆಸೆ ಇರುವದು ತಪ್ಪಲ್ಲ. ಆದರೆ ಬಹಿರಂಗ ಹೇಳಿಕೆ ನೀಡುವದು ಸರಿಯಾದ ಕ್ರಮವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಶಾಸಕ ಅಸಮಾಧಾನವನ್ನು ಮುಖ್ಯಮಂತ್ರಿಗಳು ಬಗೆಹರಿಸುತ್ತಾರೆ. ಆದರೆ...

‘ಹುಬ್ಬಳ್ಳಿ ಚನ್ನಮ್ಮ ವೃತ್ತದ ಮೇಲು ರಸ್ತೆ ನಿರ್ಮಾಣ ಶಿಲಾನ್ಯಾಸ’

ಹುಬ್ಬಳ್ಳಿ: 298 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 63, 218 ಹಾಗೂ 4 ನ್ನು ಸಂಪರ್ಕಿಸುವ 3.6 ಕೀ.ಮೀ ಉದ್ದದ ಚೆನ್ನಮ್ಮ ವೃತ್ತದ ಮೇಲು ರಸ್ತೆ, 25 ಕೋಟಿ ವೆಚ್ಚದಲ್ಲಿ ಕಲಘಟಗಿ ರಾಷ್ಟ್ರೀಯ...

Recent Comments