ಬೆಂಗಳೂರು: ಲಾಕ್ಡೌನ್ ಆದೇಶವಿದ್ದರೂ ರಾಜ್ಯದ ಜನತೆ ಅನಾವಶ್ಯಕವಾಗಿ ಓಡಾಡುತ್ತಿದ್ದಾರೆ. ಅದೆಷ್ಟು ಎಚ್ಚರಿಕೆ ನೀಡಿದರೂ ಜನ ಅದನ್ನು ಪಾಲಿಸುತ್ತಿಲ್ಲ. ಇನ್ನೊಂದೆಡೆ ಸೋಂಕಿತರ ಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಿದೆ. ಹಾಗಾಗಿ ಈ ಬಾರಿ ಲಾಕ್ಡೌನ್ ಬಿಟ್ಟು ಸೀಲ್ಡೌನ್ ಅಸ್ತ್ರವನ್ನು ಪ್ರಯೋಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಲಾಕ್ಡೌನ್ ಮುಗಿಯಲು ಇನ್ನು ನಾಲ್ಕು ದಿನ ಬಾಕಿ ಇರುವಾಗಲೇ ರಾಜ್ಯವನ್ನು ಸೀಲ್ಡೌನ್ ಮಾಡಲು ಮುಂದಾಗಿದೆ. ಒಂದು ವೇಳೆ ನಿರ್ದಿಷ್ಟ ಪ್ರದೇಶವನ್ನು ಸೀಲ್ಡೌನ್ ಮಾಡಿದರೆ ಯಾರೂ ಮನೆಯಿಂದ ಹೊರಬರುವಂತಿಲ್ಲ ಎಂಬ ಕಟ್ಟುನಿಟ್ಟಿನ ಆಜ್ಞೆ ಜಾರಿಯಾಗಲಿದೆ. ಸೀಲ್ಡೌನ್ ಆದರೆ ನಗರದ ಎಲ್ಲಾ ಸಬ್ವೇಗಳನ್ನು ಬಂದ್ ಮಾಡಲಾಗುತ್ತೆ. ಇದರಿಂದ ಏರಿಯಾದಿಂದ ಏರಿಯಾಗಳಿಗೆ ಇರುವ ಸಂಪರ್ಕ ಕಡಿತವಾಗಲಿದೆ. ಯಾವುದೇ ವಾಹನ ಹೊರಗಡೆ ಬಂದ್ರೆ ಮುಖ್ಯ ರಸ್ತೆಗೆ ಬರಲೇಬೇಕಾಗುತ್ತದೆ.
ಈಗಾಗಲೇ ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಸೀಲ್ಡೌನ್ ಆದೇಶವನ್ನು ಪಾಲಿಸುತ್ತಿದ್ದು, ಕತ್ರಿಗುಪ್ಪೆ ಮಾರ್ಗದಲ್ಲಿ ಬರುವ ವಾಹನಗಗಳನ್ನು ವಾಪಾಸ್ಸು ಕಳುಹಿಸುತ್ತಿದ್ದಾರೆ. ತೀರಾ ಎಮರ್ಜೆನ್ಸಿ ಇದ್ದರೆ ಮಾತ್ರ ಬಿಡುತ್ತಿದ್ದಾರೆ. ಇನ್ನು ಪಾದರಾಯನಪುರದಲ್ಲಿ ಐದು ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಪಾದರಾಯನಪುರವನ್ನು ಕಂಪ್ಲೀಟ್ ಲಾಕ್ಡೌನ್ ಮಾಡಲಾಗಿದೆ. ಏಪ್ರಿಲ್ 14 ರಂದು ಬೆಂಗಳೂರು ರೆಡ್ಝೋನ್ ಎಂದು ಸಾಬೀತಾದರೆ ಬೆಂಗಳೂರು ಪೂರ್ಣ ಸೀಲ್ಡೌನ್ ಆಗುವ ಸಾಧ್ಯತೆಯಿದೆ.
ಹಾಗದ್ರೆ ಸೀಲ್ಡೌನ್ ಎಂದರೆ ಏನು?
ರಾಜ್ಯದಲ್ಲಿ ಲಾಕ್ಡೌನ್ ಇರುವಾಗ ಜನತೆಗೆ ಬೇಕಾದ ಅಗತ್ಯ ವಸ್ತುಗಳು ನಿಗದಿತ ಸಮಯದಲ್ಲಿ ಲಭ್ಯವಾಗುತ್ತಿತ್ತು. ಮೆಡಿಕಲ್ ಶಾಪ್ಗಳು, ಹಾಲು, ಹಣ್ಣು ತರಕಾರಿಗಳನ್ನು ಖರೀದಿಸಲು ಅವಕಾಶವಿರುತ್ತಿತ್ತು. ಆದರೆ ಸೀಲ್ಡೌನ್ ಜಾರಿಯಾದರೆ ನಿರ್ದಿಷ್ಟ ಪ್ರದೇಶಗಳು ಸಂಪೂರ್ಣ ಬಂದ್ ಆಗಲಿದೆ. ಹಾಲು, ಹಣ್ಣು, ತರಕಾರಿಗಳನ್ನು ಖರೀದಿಸಲು ಅವಕಾಶವಿರುವುದಿಲ್ಲ. ಅಷ್ಟೆ ಅಲ್ಲ ಯಾವುದೇ ಮೆಡಿಕಲ್ ಶಾಪ್ಗಳು ಓಪನ್ ಇರುವುದಿಲ್ಲ. ಏನೇ ಮೆಡಿಕಲ್ ಎಮರ್ಜೆನ್ಸಿ ಇದ್ದರೂ ಸಹಾಯವಾಣಿ ಮೂಲಕ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಬೇಕು. ಸಾರ್ವಜನಿಕರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಲು ಅವಕಾಶವಿರುವುದಿಲ್ಲ.
zithromax strep throat
zithromax without prescription