Sunday, June 26, 2022
Powertv Logo
Homeಸಿನಿಮಾಇಂದಿನಿಂದ ಸೀರಿಯಲ್ ಶೂಟಿಂಗ್ ಆರಂಭ

ಇಂದಿನಿಂದ ಸೀರಿಯಲ್ ಶೂಟಿಂಗ್ ಆರಂಭ

ಬೆಂಗಳೂರು: ರಾಜ್ಯದಾದ್ಯಂತ ಲಾಕ್​ಡೌನ್ ಆದೇಶವನ್ನು ಸಡಿಲಿಸಿದ್ದು, ಇದೀಗ ಸ್ಥಗಿತಗೊಂಡಿದ್ದ ಸೀರಿಯಲ್ ಶೂಟಿಂಗ್ ಮತ್ತೆ ಪ್ರಾರಂಭವಾಗುತ್ತಿದೆ. ಇಂದಿನಿಂದ ಸೀರಿಯಲ್​ಗಳ ಹೊಸ ಎಪಿಸೋಡ್ ಶೂಟಿಂಗ್ ನಡೆಯುತ್ತಿದೆ.

ರಾಜ್ಯದಲ್ಲಿ ಕೊರೋನಾ ಹಾವಳಿ ಹೆಚ್ಚುತ್ತಿದ್ದರಿಂದ ಲಾಕ್​ಡೌನ್ ಆದೇಶವನ್ನು ಹೊರಡಿಸಲಾಗಿತ್ತು. ಈ ಹಿನ್ನೆಲೆ ಮಾರ್ಚ್ 19 ರಿಂದ ಧಾರವಾಹಿಗಳ ಶೂಟಿಂಗನ್ನು ಸ್ಥಗಿತಗೊಳಿಸಲಾಗಿತ್ತು. ಹಾಗಾಗಿ ಇಷ್ಟು ದಿನ ಸೀರಿಯಲ್​ಗಳನ್ನು ಮರು ಪ್ರಸಾರ ಮಾಡಲಾಗುತ್ತಿತ್ತು. ಆದರೆ ಇಂದಿನಿಂದ ಮತ್ತೆ ಸೀರಿಯಲ್ ಶೂಟಿಂಗ್ ಪ್ರಾರಂಭವಾಗುತ್ತಿದೆ. ಹಾಗಾಗಿ ಜೂನ್ 1 ರಿಂದಲೇ ಧಾರವಾಹಿಗಳ ಹೊಸ ಎಪಿಸೋಡ್​ಗಳು ಪ್ರಸಾರವಾಗಲಿದ್ದು, ಈಗಾಗಲೇ ಕೆಲವೊಂದು ಸೀರಿಯಲ್​ಗಳ ಪ್ರೋಮೋಗಳನ್ನು ಚಿತ್ರೀಕರಿಸಿ ಚಾನೆಲ್​ಗಳು ಪ್ರಸಾರ ಮಾಡುತ್ತಿದೆ. ಆದರೆ ಅದಕ್ಕೆ  ಟೆಲಿವಿಷನ್ ಅಸೋಸಿಯೇಷನ್ ಕೆಲವೊಂದು ನಿಭಂದನೆಗಳನ್ನು ಹೊರಡಿಸಲಾಗಿದ್ದು, ಗೈಡ್​ಲೈನ್ಸ್​ಗಳು ಈ ಕೆಳಗಿನಂತಿವೆ.

  • ಶೂಟಿಂಗ್ ಸಮುಯದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು
  • ಶೂಟಿಂಗ್ ನಡೆಸುವ ಸ್ಥಳದಲ್ಲಿ 20ಕ್ಕಿಂತ ಹೆಚ್ಚು ತಂತ್ರಜ್ಞರು ಹಾಗೂ ಕಲಾವಿದರು ಸೇರಬಾರದು
  • ಮಾಸ್ಕ್ ಹಾಗೂ ಸ್ಯಾನಿಟೈಸರ್​ಗಳ ಕಡ್ಡಾಯ ಬಳಕೆ
  • ಪ್ರತಿ ಎರಡು ಗಂಟೆಗೊಮ್ಮೆ ಕಲಾವಿದರ , ತಂತ್ರಜ್ಞರ ಟೆಂಪರೇಚರ್ ಟೆಸ್ಟ್ ಮಾಡಿ ಚಾನೆಲ್​ಗೆ ಹಾಗೂ ಪ್ರೊಡಕ್ಷನ್ ಕಂಪೆನಿಗೆ ಮಾಹಿತಿ ಒದಗಿಸಬೇಕು.
  • ಇನ್ನು ಕಲಾವಿದರಿಗೆ ಬೇಕಾದ ಮೇಕಪ್ ಸೆಟ್​ಗಳನ್ನು ಅವರೇ ತರಬೇಕು
  • ಶೂಟಿಂಗ್​ನಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಇನ್ಸುರೆನ್ಸ್ ಪ್ಲಾನ್​ಗಳನ್ನು ಮಾಡಲಾಗಿದ್ದು, ಇದನ್ನು ಕಲಾವಿದರ ಸಂಭಾವನೆಯಲ್ಲಿ ಕಡಿತಗೊಳಿಸಲಾಗುತ್ತದೆ. 

13 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments