Monday, January 17, 2022
Powertv Logo
Homeದೇಶಈಗಲೇ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​!

ಈಗಲೇ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​!

ಜಗತ್ತಿನಾದ್ಯಂತ ಕೊರೋನಾ ಅಲೆ ಕಡಿಮೆ ಆಯ್ತು ಅಂತ ಎಲ್ರೂ ನಿಟ್ಟುಸಿರು ಬಿಡ್ತಾ ಇರೋ ಹೊತ್ತಿಗೆ ಇದೀಗ ಅಮೆರಿಕ, ರಷ್ಯಾ, ಜರ್ಮನಿಯಲ್ಲಿ ಕೊರೋನಾ ಪ್ರಕರಣಗಳು ಜಾಸ್ತಿಯಾಗ್ತಿವೆ. ಈ ಬಗ್ಗೆ ಮಾಹಿತಿ ನೀಡಿರುವ ಸಂಶೋಧಕರು, ಒಂದು ವೇಳೆ ಎಚ್ಚರ ತಪ್ಪಿದ್ರೆ ಮತ್ತೆ ಮಹಾಮಾರಿ ವಕ್ಕರಿಸಿಕೊಳ್ಳುತ್ತೆ ಅನ್ನೋ ಎಚ್ಚರಿಕೆ ನೀಡಿದ್ದಾರೆ

ಕೊರೋನಾ ಹೆಸರು ಕೇಳಿದರೆ ಸಾಕು, ಒಂದು ಕ್ಷಣ ಜಗತ್ತಿನ ನಾನಾ ರಾಷ್ಟ್ರಗಳು, ಜನಸಾಮಾನ್ಯರು ಹೆದರಿಕೊಳ್ತಾರೆ. ಅದೆಷ್ಟೋ ಜನ ತಮ್ಮ ಸುಂದರ ಬದುಕನ್ನ, ತಮ್ಮವರನ್ನ ಕಳೆದುಕೊಂಡು ಅನಾಥ ಪ್ರಜ್ಞೆಯನ್ನ ಕಾಡಿಸಿತ್ತು, ಈ ಮಹಾಮಾರಿ ಕೊರೋನಾ ವೈರಸ್. ಇನ್ನು ಈ ವೈರಸ್​ಗೆ ಇದುವರೆಗೂ ಯಾವುದೇ ಮೆಡಿಸಿನ್ ಪತ್ತೆಯಾಗದೆ ಇದ್ರೂ ಈ ವೈರಸ್​ನ್ನು ನಿಗ್ರಹಿಸೋದಕ್ಕೆ ಹಲವು ಲಸಿಕೆಗಳನ್ನ ಭಾರತ ಸೇರಿದಂತೆ ವಿವಿಧ ದೇಶಗಳು ನೀಡೋದಕ್ಕೆ ಶುರು ಮಾಡಿವೆ. ಈ ಲಸಿಕೆಗಳಿಂದಾಗಿ ವಿಶ್ವದ ನಾನಾ ರಾಷ್ಟ್ರಗಳಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಇಳಿಮುಖವಾಗೋದು ಕಂಡು ಬಂದಿತು. ಆದರೆ ಇದೀಗ ಮತ್ತೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕೊರೋನಾ ರಣಕೇಕೆ ಹಾಕೋದಕ್ಕೆ ಶುರು ಮಾಡಿದೆ.

Red Virus and blue DNA strand – medical 3D illustration with dark blue background

ಹೌದು, ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಯುರೋಪ್, ಅಮೆರಿಕಾ, ರಷ್ಯಾ ಮತ್ತು ಚೀನಾದಲ್ಲಿ ಮತ್ತೆ ಕೊರೋನಾ ಸುದ್ದಿಯಾಗ್ತಿದೆ. ಅದರಲ್ಲೂ ಜರ್ಮನಿಯಲ್ಲಿ ಕೊರೋನಾ ಸೋಂಕಿನ ನಾಲ್ಕನೇ ಅಲೆ ಶುರುವಾಗಿದೆ. ಈಗ ಈ ರಾಷ್ಟ್ರಗಳಲ್ಲಿ ದಿನಕ್ಕೆ ಸರಾಸರಿ, ಅಂದ್ರೆ ಒಟ್ಟು 39 ಸಾವಿರದಷ್ಟು ಕೊರೋನಾ ಕೇಸ್​ಗಳು ವರದಿಯಾಗ್ತಿವೆ. ಇನ್ನು ಜರ್ಮನಿಯಲ್ಲಿ ಪರಿಸ್ಥಿತಿ ಶೋಚನೀಯವಾಗಿದ್ದು, ಐಸಿಯುಗಳು ತುಂಬಿ ಹೋಗಿವೆ. ಇದರಿಂದ ಮತ್ತೆ ಕೊರೋನಾ ಜಗತ್ತನ್ನ ಆಕ್ರಮಿಸುವ ಆತಂಕ ಎದುರಾಗೋ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ. ಇದೀಗ ಅಮೆರಿಕದ ಹೆಚ್ಚಿನ ರಾಜ್ಯಗಳಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗ್ತಿದ್ದು, ಕೊರೋನಾ ತವರೂರಾದ ಚೀನಾದಲ್ಲೂ ಈಗ ಕೊರೋನಾ ಸೋಂಕು ಹೆಚ್ಚಾಗುತ್ತಿದೆ.

ಇದೀಗ ಜರ್ಮನಿಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ವಿಪರೀತ ಏರಿಕೆ ಕಂಡು ಬರುತ್ತಿದೆ. ಜರ್ಮನಿ ತನ್ನ ದೇಶದ 67.5% ಜನರಿಗೆ ಕೊರೋನಾ ಲಸಿಕೆಯ ಎರಡು ಡೋಸ್ ನೀಡಿದೆ. ಅಮೆರಿಕಾ ಕೂಡ 58.8% ಜನರಿಗೆ ಕೊರೋನಾ ಲಸಿಕೆಯ ಎರಡು ಡೋಸ್ ನೀಡಿದೆ. ಇಷ್ಟಾದ್ರೂ ಕೂಡ ಆ ದೇಶಗಳಲ್ಲಿ ಮತ್ತೆ ಕೊರೋನಾ ಅಲೆ ಕಾಣಿಸಿಕೊಂಡಿರೋದು ಜನರ ಆತಂಕಕ್ಕೆ ಕಾರಣವಾಗಿದೆ. ಇನ್ನು ರಷ್ಯಾದಲ್ಲಿ ಕೊರೋನಾ ಪ್ರಕರಣ ವ್ಯಾಪಕವಾಗಿ ಹಬ್ಬುತ್ತಿದ್ದು, ಅಲ್ಲಿ ಮತ್ತೊಮ್ಮೆ ಲಾಕ್​ ಡೌನ್​ ಆಗುವ ಸಾಧ್ಯತೆಗಳಿವೆ.

ಇನ್ನು ಚೀನಾದಲ್ಲಿ ಈಗಾಗ್ಲೇ ಸುಮಾರು 6 ಪ್ರಾಂತ್ಯಗಳಲ್ಲಿ ಕೊರೋನಾ ತುಂಬಾ ತೀವ್ರವಾಗಿ ಹಬ್ಬಿದೆ. ಈಗಾಗಲೇ ಚೀನಾದ ಕೆಲ ಪ್ರದೇಶಗಳಲ್ಲಿ ಲಾಕ್​ ಡೌನ್​ ಜಾರಿಗೊಳಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರೋ ವಿಜ್ಞಾನಿಗಳು ಕೊರೋನಾದ 4ನೇ ಅಲೆ ಜರ್ಮನಿ ಸೇರಿದಂತೆ ಬೇರೆ ಬೇರೆ ಕಡೆ ಹೆಚ್ಚಾಗ್ತಿದೆ. ಈ ಬಗ್ಗೆ ಕೊರೋನಾ ಸೋಂಕು ಕಡಿಮೆ ಇರುವ ರಾಷ್ಟ್ರಗಳು ಎಚ್ಚೆತ್ತುಕೊಳ್ಳದೇ ಹೋದ್ರೆ ಮತ್ತೆ ಕೊರೋನಾ ವ್ಯಾಪಕವಾಗಿ ಹಬ್ಬೋದ್ರಲ್ಲಿ ಅನುಮಾನವೇ ಇಲ್ಲ ಅಂತ ವಿಜ್ಞಾನಿಗಳು ಹೇಳ್ತಿದ್ದಾರೆ.

ಇನ್ನು ಭಾರತದಲ್ಲಿ ಕೊರೋನಾ ಸೋಂಕಿನ ಹರಡುವಿಕೆಯ ಪ್ರಮಾಣ ಕಡಿಮೆಯಾಗಿದ್ದು, ಕೊರೋನಾ ತಡೆಗೆ ಲಾಕ್ ಡೌನ್, ಸೀಲ್ ಡೌನ್ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳ ನಂತರ ಇದೀಗ ಸೋಂಕಿಗೆ ಅಂತಿಮ ಪರಿಹಾರ ಲಸಿಕೆಯೊಂದೇ ಅಂತ ಕೇಂದ್ರ ಸರ್ಕಾರ ಹೇಳುತ್ತಿದೆ.

ಭಾರತದಲ್ಲಿ ಜನವರಿ 16ರಂದು ಪ್ರಾರಂಭವಾದ ಕೊರೋನಾ ವಿರುದ್ಧದ ಲಸಿಕಾ ಕಾರ್ಯಕ್ರಮಕ್ಕೆ ಹತ್ತು ತಿಂಗಳು ತುಂಬಿದೆ. ವಿಶ್ವದ ಅತ್ಯಂತ ದೊಡ್ಡ ಲಸಿಕಾ ಉತ್ಪಾದಕ ದೇಶವಾದ ಭಾರತದಲ್ಲಿ ಕೊರೋನಾ ಲಸಿಕೆಯ ಎರಡು ಡೋಸ್ ಪಡೆದುಕೊಂಡಿರೋದು ಮಾತ್ರ ಕೇವಲ 26.8% ಜನರು ಮಾತ್ರ. ವಿಶ್ವದಾದ್ಯಂತ ಒಟ್ಟು, 41.2% ಅಂದ್ರೆ 321 ಕೋಟಿ ಜನರು ಈಗಾಗಲೇ ಎರಡು ಡೋಸ್ ಪಡೆದುಕೊಂಡಿದ್ದಾರೆ.

ಭಾರತದಲ್ಲಿ ಈಗಾಗ್ಲೇ 3.44 ಕೋಟಿ ಜನರಿಗೆ ಕೊರೊನಾ ಸೋಂಕು ತಗುಲಿತ್ತು ಅಂತ ಅಧಿಕೃತವಾಗಿ ವರದಿಗಳಲ್ಲಿ ಹೇಳಲಾಗಿದೆ. ಇದರಲ್ಲಿ 4.64 ಲಕ್ಷ ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಸಂಖ್ಯೆ ಕೂಡ ನಿಖರ ಅಂತ ಸರ್ಕಾರ ಹೇಳಿಲ್ಲ. ಇನ್ನು ಭಾರತದಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಿದ್ರೂ ಸಂಪೂರ್ಣವಾಗಿ ಸೋಂಕಿನಿಂದ ಭಾರತ ಮುಕ್ತವಾಗಿಲ್ಲ. ಹೀಗಾಗಿ ಭಾರತ ಮೂರನೇ ಕೊರೋನಾ ಅಲೆಯ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಅಂತಾ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆಯಾಗಿ ಕೊರೋನಾ ಸೋಂಕು ಕಡಿಮೆಯಾಗಿದೆ ಅಂತ ನಿರ್ಲಕ್ಷ್ಯ ತೋರಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಅದ್ರಲ್ಲೂ ಈಗ ಕೊರೋನಾ ಸೋಂಕು ಕಡಿಮೆ ಆಗಿದೆ ಅಂತ ನಮ್ಮ ಜನಸಾಮಾನ್ಯರು ಮಾಸ್ಕ್​ ಧರಿಸದೇ ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದಾರೆ. ಈ ಬಗ್ಗೆ ಭಾರತ ಸರ್ಕಾರ ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಿದೆ ಅನ್ನೋದನ್ನ ನೋಡಬೇಕು.

4 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments