ಮೊದಲ ಲೋಕಪಾಲ್ ಆಗಿ ಪಿ. ಸಿ ಘೋಷ್ ಆಯ್ಕೆ..? ಶೀಘ್ರ ಅಧಿಕೃತ ಘೋಷಣೆ

0
112

ನವದೆಹಲಿ: ಮಾಜಿ ಸುಪ್ರೀಂಕೋರ್ಟ್​ ನ್ಯಾಯಾಧೀಶ ನ್ಯಾ. ಪಿ. ಸಿ ಘೋಷ್ ಅವರು ಮೊದಲ ಲೋಕ್​ಪಾಲ್ ಆಗಿ ಆಯ್ಕೆಯಾಗಿದ್ದಾರೆ. ಈ ಕುರಿತು ಶೀಘ್ರದಲ್ಲಿಯೇ ಅಧಿಕೃತ ಘೋಷಣೆಯಾಗಲಿದೆ ಅಂತ ತಿಳಿದುಬಂದಿದೆ. ಘೋಷ್​ ಅವರನ್ನು ಲೋಕ್​ಪಾಲ್ ಆಗಿ ನೇಮಿಸುವ ಕುರಿತು ಮುಂದಿನ ವಾರದಲ್ಲಿ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ.

ಶುಕ್ರವಾರ ಸಂಜೆ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಜೆಐ ರಂಜನ್​ ಗೊಗೊಯ್​, ಲೋಕಸಭಾ ಸ್ಪೀಕರ್​ ಸುಮಿತ್ರಾ ಮಹಾಜನ್, ಹಿರಿಯ ಅಡ್ವಕೇಟ್ ಮುಕುಲ್ ರೋಹ್ಟಗಿ ಅವರು ಘೋಷ್ ಅವರ ಹೆಸರನ್ನು ಆಯ್ಕೆ ಮಾಡಿದ್ದಾರೆ. ಲೋಕ್​ಪಾಲ್ ಹಾಗೂ ಎಂಟು ಜನ ಸದಸ್ಯರ ಆಯ್ಕೆ ಹಾಗೂ ನೇಮಕದ ಬಗ್ಗೆ ಮುಂದಿನ ವಾರ ಆರಂಭದಲ್ಲಿ ಅಧಿಕೃತ ಘೋಷಣೆಯಾಗಲಿದೆ. ಘೋಷ್​ ಅವರು ಸುಪ್ರೀಂ ಕೋರ್ಟ್​ ನ್ಯಾಯಾಮೂರ್ತಿಗಳಾಗಿ 4 ವರ್ಷ ಸೇವೆ ಸಲ್ಲಿಸಿದ್ದು, 2017ರಲ್ಲಿ ನಿವೃತ್ತರಾಗಿದ್ದಾರೆ. ಪ್ರಸ್ತುತ ರಾಷ್ಟ್ರೀಐ ಮಾನವಹಕ್ಕುಗಳ ಆಯೋಗದ ಸದಸ್ಯರಾಗಿದ್ದಾರೆ.

LEAVE A REPLY

Please enter your comment!
Please enter your name here