ಬಿಜೆಪಿ ಭದ್ರಕೋಟೆಗೆ ಇಂದು ದೊಡ್ಡಗೌಡ್ರು ಭೇಟಿ

0
75

ಶಿವಮೊಗ್ಗ: ಮಾಜಿ ಪ್ರಧಾನಿ ಹೆಚ್​. ಡಿ ದೇವೇಗೌಡ ಅವರು ಇಂದು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ. ಬಿಜೆಪಿ ಭದ್ರಕೋಟೆಗೆ ದೊಡ್ಡಗೌಡ್ರು ಎಂಟ್ರಿ ನೀಡುತ್ತಿದ್ದು, ದೋಸ್ತಿ ಅಭ್ಯರ್ಥಿಯ ಹೆಸರು ಅಧಿಕೃತವಾಗಿ ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ. ಶಿವಮೊಗ್ಗ ಜೆಡಿಎಸ್‌ ನಾಯಕರ ಜೊತೆ ದೇವೇಗೌಡರು ಸಭೆ ನಡೆಸಲಿದ್ದು ಚುನಾವಣಾ ಸಂಬಂಧ ಚರ್ಚೆ ನಡೆಸಲಿದ್ದಾರೆ. ಶಿವಮೊಗ್ಗದಿಂದ ದೋಸ್ತಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಅವರ ಹೆಸರನ್ನು ಘೋಷಿಸುವ ಸಾಧ್ಯತೆಯೂ ಇದೆ. ಲೋಕಸಭಾ ಚುನಾವಣಾ ರಣತಂತ್ರಗಳ ಬಗ್ಗೆ ದೇವೇಗೌಡರು ಜಿಲ್ಲಾ ಮುಖಂಡರೊಂದಿಗೆ ಚರ್ಚೆ ನಡೆಸಲಿದ್ದಾರೆ.

LEAVE A REPLY

Please enter your comment!
Please enter your name here