Sunday, May 29, 2022
Powertv Logo
Homeದೇಶಪಾಕ್​ ಮಾಜಿ ಅಧ್ಯಕ್ಷ ಮುಷರಫ್​​ಗೆ ಗಲ್ಲು!

ಪಾಕ್​ ಮಾಜಿ ಅಧ್ಯಕ್ಷ ಮುಷರಫ್​​ಗೆ ಗಲ್ಲು!

ಪೇಶಾವರ್ : ಪಾಕಿಸ್ತಾನದ ಮಾಜಿ ಅಧ್ಯಕ್ಷ, ಸರ್ವಾಧಿಕಾರಿ ಪರ್ವೇಜ್​ ಮುಷರಫ್​​ಗೆ ಅಲ್ಲಿನ ವಿಶೇಷ ನ್ಯಾಯಾಲಯದ ಗಲ್ಲು ಶಿಕ್ಷೆ ವಿಧಿಸಿದೆ.
ದೇಶದ್ರೋಹದಂತಹ ಆರೋಪ ಎದುರಿಸುತ್ತಿದ್ದ ಮುಷ್ರಫ್ ಕಳೆದ ನಾಲ್ಕು ವರ್ಷದ ಹಿಂದೆ ಲಂಡನ್​ಗೆ ಪಲಾಯನಗೈದಿದ್ದರು. ಆದ್ರೆ, ಕಳೆದ ಚುನಾವಣೆ ವೇಳೆ ಪಾಕಿಸ್ತಾನಕ್ಕೆ ವಾಪಸ್ಸಾಗಿದ್ದರು. ಪ್ರಸ್ತುತ ದುಬೈನಲ್ಲಿ ನೆಲೆಸಿದ್ದಾರೆನ್ನಲಾಗಿದೆ.
ಪಾಕ್ ಸೇನೆಯ ಸೇನಾಧಿಕಾರಿಯಾಗಿದ್ದ ಮುಷರಫ್ 1999 ರಿಂದ 2008ರವರೆಗೆ ಪಾಕ್ ಸರ್ವಾಧಿಕಾರಿಯಾಗಿ ಅಧಿಕಾರ ನಡೆಸಿದ್ದರು. ಭಾರತ ಮತ್ತು ಪಾಕ್​ ನಡುವಿನ ಕಾರ್ಗಿಲ್ ಯುದ್ಧ ನಡೆದಿದ್ದು ಇವರ ಕಾಲದಲ್ಲೇ.
2007ರಲ್ಲಿ ಮುಷರಫ್​​ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. 2013ರಲ್ಲಿ ಪರ್ವೆಜ್​​ ಮುಷರಫ್​ ವಿರುದ್ಧ ದಾಖಲಾಗಿತ್ತು. ನವಾಜ್ ಷರೀಫ್​ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪರ್ವೇಜ್​ ಮುಷರಫ್​​ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇಂದು ಪೇಶಾವರ್​ ವಿಶೇಷ ನ್ಯಾಯಾಲಯ ಮುಷರಫ್ ಮೇಲಿನ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ನೀಡಿದ್ದು, ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments