Sunday, May 29, 2022
Powertv Logo
Homeರಾಜ್ಯಟಗರಿನ ತಲೆಗೆ 'ಸಿದ್ದಣ್ಣ ಬಿಜೆಪಿಗೆ ಗುದ್ದಣ್ಣ' ಬೋರ್ಡ್​​: ಸುದ್ಧಿ ವೈರಲ್​​

ಟಗರಿನ ತಲೆಗೆ ‘ಸಿದ್ದಣ್ಣ ಬಿಜೆಪಿಗೆ ಗುದ್ದಣ್ಣ’ ಬೋರ್ಡ್​​: ಸುದ್ಧಿ ವೈರಲ್​​

ಚಾಮರಾಜನಗರ : ಟಗರಿನ ತಲೆಗೆ ‘ಸಿದ್ದಣ್ಣ- ಬಿಜೆಪಿಗೆ ಗುದ್ದಣ್ಣ’ ಎಂದು ಬೋರ್ಡ್ ಬರೆದಾಕಿ 40 ಪರ್ಸೆಂಟ್ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸುವ ಮೂಲಕ ಚಾಮರಾಜನಗರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಭಟನೆ ಮಾಡುತ್ತಿದ್ದಾರೆ.

ಇಂದು 9 ತಂಡಗಳ ಮೂಲಕ ಬಿಜೆಪಿ ಸರ್ಕಾರದ ಕಮಿಷನ್ ವಿರುದ್ಧ ಜನಜಾಗೃತಿಯ ಮೆರವಣಿಗೆಯಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 40 ಪರ್ಸೆಂಟ್ ಸರ್ಕಾರದ ವಿರುದ್ಧ 9 ತಂಡಗಳ ಮೂಲಕ ಜಿಲ್ಲಾ ಕೇಂದ್ರಗಳಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಅದುವಲ್ಲದೇ 40₹ಗುತ್ತಿಗೆದಾರರ ಸಂಘ ಸರ್ಕಾರಕ್ಕೆ ಪತ್ರ ಬರೆದಿದೆ. ಕಮಿಷನ್ ಆಡಳಿತದಿಂದ ಗುತ್ತಿಗೆದಾರರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿಜೆಪಿ ದುರಾಡಳಿತ ಬಗ್ಗೆ ಜಿಲ್ಲಾ ಕೇಂದ್ರಗಳಲ್ಲಿ 5 ದಿನಗಳ ಕಾಲ ಜಾಗೃತಿ ಮೂಡಿಸಲಾಗುವುದು ಎಂದರು.

ಇನ್ನು ಪ್ರತಿಭಟನೆಯಲ್ಲಿ ಟಗರು, ಖಾಲಿ ಸಿಲಿಂಡರ್‌ ಎಲ್ಲರ ಗಮನ ಸೆಳೆಯಿತು. ರೈತ ಮುಖಂಡ ಅಣಗಳ್ಳಿ ಬಸವರಾಜ್ ಪ್ರತಿಭಟನೆಯಲ್ಲಿ ಟಗರು ತರುವ ಮೂಲಕ ಪ್ರತಿಭಟನೆಗೆ ಮತ್ತೊಂದು ಮೆರವಣಿಗೆ ತಂದರು. ಮತ್ತು ಟಗರಿನ ತಲೆಗೆ ‘ಸಿದ್ದಣ್ಣ- ಬಿಜೆಪಿಗೆ ಗುದ್ದಣ್ಣ’ ಎಂದು ಬೋರ್ಡ್ ಬರೆದು ಹಾಕಿದರು.

ಹಾಗು ವೇದಿಕೆಯಲ್ಲಿ ಖಾಲಿ ಸಿಲಿಂಡರ್​​ಗಳನ್ನು ಜೋಡಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರವಾಸಿ ಮಂದಿರದಿಂದ ನಗರದ ವಿವಿಧ ರಸ್ತೆಗಳಲ್ಲಿ ನೂರಾರು ಕೈ ಕಾರ್ಯಕರ್ತರ ಜೊತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಶಾಸಕ ಪುಟ್ಟರಂಗಶೆಟ್ಟಿ ಸಾಥ್ ನೀಡಿದರು.

- Advertisment -

Most Popular

Recent Comments