ಬೆಂಗಳೂರು: ನಿಶ್ಚಲ್ ಫಿಲಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಟೆಕ್ಕಿಗಳ ಚಿತ್ರ “ಫಾರ್ REGN” (For Registration ) ಈಗಾಗಲೇ ಮೊದಲ ಹಂತದ ಶೂಟಿಂಗನ್ನು ಕಡಲ ದಡದಲ್ಲಿ ಮುಗಿಸಿಕೊಂಡು ಬಂದಿದೆ. ಚಿತ್ರೀಕರಣದ ಕೆಲವು ತುಣುಕುಗಳನ್ನು ಹಾಗೂ ಕ್ಯಾಮೆರಾ ಹಿಂದಿನ ಝಲಕ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದು, ಸದ್ಯ ಗಾಂಧಿನಗರದಲ್ಲಿ ಸಕ್ಕತ್ತಾಗಿ ಸದ್ದು ಮಾಡುತ್ತಿದೆ.
ಸ್ಯಾಂಡಲ್ವುಡ್ನ ನಿಧಿಮಾ ಅಲಿಯಾಸ್ ಮಿಲನಾ ನಾಗರಾಜ್ ಹಾಗೂ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಸುಧಾರಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ತಬಲಾ ನಾಣಿ, ಖ್ಯಾತ ತುಳು ನಟ ಅರವಿಂದ್ ಬೋಳಾರ್ ಹೀಗೆ ಸ್ಯಾಂಡಲ್ವುಡ್ನ ಹಿರಿಯ ಕಲಾವಿದರ ಬಳಗವೇ ಈ ಚಿತ್ರದಲ್ಲಿದೆ.
ಚಿತ್ರವನ್ನು “ಎಲ್ಲೊಬೋರ್ಡ್” ನಿರ್ದೇಶಕ ನವೀನ್ ದ್ವಾರಕನಾಥ ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ನವೀನ್ ರಾವ್ ಬಂಡವಾಳ ಹೂಡಿದ್ದಾರೆ. ಇನ್ನೂ ಚಿತ್ರಕ್ಕೆ ವಿವೇಕ್ ಎಸ್ ಕೆ ಅವರ ಛಾಯಾಗ್ರಹಣವಿದೆ. ಇದು ಈ ತಂಡದ ಮೊದಲ ಪ್ರಯತ್ನವಾಗಿದ್ದರೂ, ಪಕ್ಕಾ ಪ್ರಾಮಿಸಿಂಗ್ ಚಿತ್ರ ಎನ್ನುವುದು ತೆರೆ ಹಿಂದಿನ ಕಸರತ್ತಿನಲ್ಲಿ ಕಂಡುಬರುತ್ತದೆ. ಏನೇ ಇರಲಿ ಸ್ಯಾಂಡಲ್ವುಡ್ಗೆ ಹೊಸ ಪ್ರತಿಭೆಗಳು ಬಂದು ಸುದ್ದಿ ಮಾಡುತ್ತಿರುವುದು ಚಂದನವನಕ್ಕೆ ಮತ್ತೊಂದು, ಮಗೊಂದು ಗರಿ ಹೆಚ್ಚಿದಂತಾಗುತ್ತಿದೆ.
ಈ ಚಿತ್ರವು ಸ್ಯಾಂಡಲ್ವುಡ್ನಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿ ಎಂಬುವುದೇ ನಮ್ಮ ಆಶಯ.