ಮುಂಬೈ: 8 ಜನರ ಸಾವಿಗೆ ಕಾರಣವಾದ ಇಎಸ್ಐಸಿ ಕಾಮ್ಗಾರ್ ಆಸ್ಪತ್ರೆಯಲ್ಲಿ ನಡೆದ ಬೆಂಕಿ ಅವಘಡದ ಸಂದರ್ಭ ಫುಡ್ ಡೆಲಿವರಿ ಯುವಕನೊಬ್ಬ 10 ಜನರ ಪ್ರಾಣ ಉಳಿಸಿದ್ದಾರೆ.
ಆಸ್ಪತ್ರೆಯ ಸಮೀಪದಲ್ಲಿ ಸಾಗುತ್ತಿದ್ದ ಸ್ವಿಗ್ಗಿ ಫುಡ್ ಡೆಲಿವರಿ ಬಾಯ್ ಸಿಧು ಎಂಬ ಯುವಕ ಕಟ್ಟಡದಲ್ಲಿ ಬೆಂಕಿ ಕಂಡು ಬೈಕ್ ನಿಲ್ಲಿಸಿ ನೆರವಿಗೆ ಧಾವಿಸಿದ್ದಾನೆ. ಅಗ್ನಿಶಾಮಕ ದಳದ ಸಿಬ್ಬಂದಿಯ ಅನುಮತಿ ಕೇಳಿ ಆಸ್ಪತ್ರೆ ಒಳಗೆ ಸಿಲುಕಿದ್ದವರನ್ನು ರಕ್ಷಿಸುವಲ್ಲಿ ಸಿಧು ನೆರವಾಗಿದ್ದಾರೆ. ದಟ್ಟ ಹೊಗೆಯ ನಡುವಲ್ಲಿಯೂ ಎರಡು ಗಂಟೆಗಳಲ್ಲಿ ಸಿಧು 10 ಜನರ ಪ್ರಾಣ ಉಳಿಸಿದ್ದಾರೆ. ಈ ಸಂದರ್ಭ ಹೊಗೆಯಲ್ಲಿ ಸಿಲುಕಿಕೊಂಡಿದ್ದು ಈಗ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆ ಸಮೀಪ ಹಾದು ಹೋಗುವಾಗ ಜನ ನೆರವಿಗಾಗಿ ಬೊಬ್ಬಿಡುವುದು ಕೇಳಿಸಿತು. ಹಾಗೇ ಆಸ್ಪತ್ರೆಯತ್ತ ಧಾವಿಸಿದ್ದೆ. ಅಗ್ನಿಶಾಮಕ ದಳದ ಸಿಬ್ಬಂದಿ ಅವರ ಲೇಡರ್ ಬಳಸಿ ನಾಲ್ಕನೇ ಮಹಡಿಗೆ ಹೋಗಲು ನೆರವಾದರು. ನಂತರ ಗಾಜು ಒಡೆದು ಒಳಗೆ ಹೋಗಿದ್ದೆ. ನಂತರ ಒಳಗಿದ್ದ ರೋಗಿಗಳನ್ನು ಹೊರಕರೆತಂದಿದ್ದೇನೆ ಎಂದು ಸಿಧು ಹೇಳಿದ್ದಾರೆ.
generic name for zithromax
zithromax buy