ಮಂಗಳೂರು: ವಿಶ್ವದಾದ್ಯಂತ ಕೊರೋನಾ ಭೀತಿ ಹೆಚ್ಚಾಗಿದ್ದು, ಹಲವಾರು ರಾಷ್ಟ್ರಗಳು ಮುಂಜಾಗ್ರತಾ ಕ್ರಮವಾಗಿ ವಿದೇಶಗಳಿಗೆ ವಿಮಾನಯಾನ ಸೇವೆಯನ್ನೇ ರದ್ದುಗೊಳಿಸಿವೆ. ಇನ್ನು ಭಾರತದಲ್ಲೂ ಕೊರೋನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರತದಲ್ಲೂ ಕೇಂದ್ರ ಸರ್ಕಾರ ವಿದೇಶಗಳಿಗೆ ವಿಮಾನಯಾನ ಸೇವೆಯನ್ನು ರದ್ದುಗೊಳಿಸಲು ಚಿಂತನೆ ನಡೆಸಿದೆ.
ಈಗಾಗಲೇ ಮಂಗಳೂರಿನಿಂದ ಕೆಲವು ಕೊಲ್ಲಿ ರಾಷ್ಟ್ರಗಳಿಗೆ ತೆರಳುವ ವಿಮಾನಯಾನ ಸೇವೆಗಳು ರದ್ದಾಗಿವೆ. ಸೌದಿ ಅರೇಬಿಯಾ, ಕುವೈತ್ ಹಾಗೂ ಕತಾರ್ಗೆ ತೆರಳುವ ಏರ್ ಇಂಡಿಯಾ ವಿಮಾನ ಸೇವೆಗಳು ರದ್ದಾಗಿದ್ದು, ಇನ್ನುಳಿದಂತೆ ದುಬೈ, ಅಬುಧಾಬಿ ಹಾಗೂ ಮಸ್ಕತ್ಗೆ ವಿಮಾನಯಾನ ಸೇವೆಗಳು ಇರಲಿವೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.