Home ರಾಜ್ಯ ಬೀಕರ ಅಪಘಾತ ಐವರು ಕೂಲಿ ಕಾರ್ಮಿಕರ ದುರ್ಮರಣ..!

ಬೀಕರ ಅಪಘಾತ ಐವರು ಕೂಲಿ ಕಾರ್ಮಿಕರ ದುರ್ಮರಣ..!

ಚಿತ್ರದುರ್ಗ: ನಸುಕಿನ ಜಾವ ಜವರಾಯನ ಅಟ್ಟಹಾಸಕ್ಕೆ ಕೂಲಿಗಾಗಿ ಹೊರಟಿದ್ದ ಐವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಮೊಳಕಾಲ್ಮೂರು ತಾಲೂಕಿನ ಬಿಜಿಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 150A ನಲ್ಲಿ ಇಂದು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕ್ರೂಸರ್ ವಾಹನಕ್ಕೆ ಬೆಂಗಳೂರಿನಿಂದ ರಾಯಚೂರಿಗೆ ತೆರಳುತ್ತಿದ್ದ KSRTC ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡೂ ವಾಹನಗಳ ಮುಂಭಾಗ ನುಜ್ಜುಗುಜ್ಜಾಗಿದ್ದು, ರಾಯಚೂರು ಜಿಲ್ಲೆ ದೇವದುರ್ಗ ಮೂಲದ ತಿಮ್ಮಣ್ಣ(40), ಆತನ ಪತ್ನಿ ರತ್ನಮ್ಮ(38), ಮಹೇಶ್(19), ದುರ್ಗಪ್ಪ(16) ಹಾಗು ಮತ್ತೋರ್ವ 55 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಳ್ಳಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ದೇಹಗಳನ್ನು ಮೊಳಕಾಲ್ಮೂರು ತಾಲೂಕು ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದ್ದು, ಕ್ರೂಸರ್ ನಲ್ಲಿದ್ದವರು ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಹೊರಟಿದ್ದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ಜಿ.ರಾಧಿಕಾ, ಮೊಳಕಾಲ್ಮೂರು ಠಾಣೆ ಪೊಲೀಸರು ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಕರೋನಾ ಲಸಿಕೆ ಬಂದಿರುವುದು ಸಂತೋಷ : ಯು.ಟಿ.ಖಾದರ್

ಬೆಂಗಳೂರು: ಕೊರೋನಾ ಲಸಿಕೆ ವಿತರಣಾ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಖಾರವಾಗಿ ಟ್ವೀಟ್ ಮಾಡಿದ್ದಾರೆ. ಕೊರೊನಾ ಲಸಿಕೆ ಬಂದಿರುವುದು ಸಂತೋಷ. ಆದರೆ ಮೊದಲು ಗ್ರೂಪ್ ಡಿ ನೌಕರರ ಮೇಲೆ ಯಾಕೆ ಪ್ರಯೋಗ ಮಾಡಬೇಕು....

‘ರಾಜ್ಯದಲ್ಲಿ ಕೊರೋನಾ ಲಸಿಕೆ ವಿತರಣೆ’

ಕಲಬುರಗಿ: ಕಲಬುರಗಿಯಲ್ಲಿ ನಗರದ ಜಿಮ್ಸ್ ಕಾಲೇಜಿನಲ್ಲಿ ಸಂಸದ ಉಮೇಶ್ ಜಾಧವ್ ಕೊವಿಡ್ ವ್ಯಾಕ್ಸಿನ್ ಗೆ ಚಾಲನೆ ನೀಡಿದರು. ಜಿಲ್ಲೆಯ 8 ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸಿನ್ ಗೆ ಚಾಲನೆ ನೀಡಲಾಯಿತು. ಒಂದು ಕೇಂದ್ರದಲ್ಲಿ 100...

‘ಡಿ ಗ್ರೂಪ್‌ ನೌಕರ ಚಂದ್ರಶೇಖರ್‌ಗೆ ಮೊದಲ ಲಸಿಕೆ ವಿತರಣೆ’

ಬೆಂಗಳೂರು: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಸಿಕಾ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಅಟೆಂಡರ್ ನಾಗರತ್ನಾಗೆ ಲಸಿಕೆ ನೀಡಿ  ಹೂ ಗುಚ್ಛ ನೀಡಿ ಅಭಿನಂದಿಸಿದರು. ಜೊತೆ ಆರೋಗ್ಯ...

‘ಲಸಿಕೆ ವಿತರಣೆಗೆ ಚಾಲನೆ ಕೊಟ್ಟ ಪ್ರಧಾನಿ ಮೋದಿ’

ಬೆಂಗಳೂರು: ಜಗತ್ತಿನ ಅತಿ ದೊಡ್ಡ ಕೊವಿಡ್ ಲಸಿಕೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದರು. ಅತಿ ಕಡಿಮೆ ದಿನದಲ್ಲಿ ಮಹಾಮಾರಿ ಕೊರೋನಾ ಗೆ ವಿಜ್ಞಾನಿಗಳು ಎರಡು ಲಸಿಕೆಯನ್ನು ಸಿದ್ಧ ಪಡಿಸಿದ್ದಾರೆ....

Recent Comments