ಬೆಂಗಳೂರು: ಇಂದು ಲಿಂಗಾಯತ ಪಂಚಮಸಾಲಿ ಮೀಸಲಾತಿಗಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಯಮೃತ್ಯುಂಜಯ ಶ್ರೀ, ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
2A ಮೀಸಲಾತಿಗೆ ಆಗ್ರಹಿಸಿ ಸುಮಾರು 600 ಕಿ.ಮೀ.ಪಾದಯಾತ್ರೆ ಮೂಲಕ ಬೆಂಗಳೂರಿಗೆ ಪಾದಯಾತ್ರೆ ಬಂದು ತಲುಪಿದೆ. ‘ಪಂಚಮ’ ಸಾಲಿ ಸಮಾವೇಶದಲ್ಲಿ ವಿಜಯಾನಂದ ಕಾಶಪ್ಪನವರ್, ವೀಣಾ ಕಾಶಪ್ಪನವರ್ ಸೇರಿಹಲವರ ನೇತೃತ್ವದಲ್ಲಿ ಹೋರಾಟ ಮುಂದುವರೆದಿದೆ. ಸಮಾವೇಶದಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದಾರೆ.
ಮದ್ಯಾಹ್ನ 2ಗಂಟೆ ಒಳಗೆ ಸರ್ಕಾರದಿಂದ ಲಿಖಿತ ರೂಪದಲ್ಲಿ ಉತ್ತರ ಬರದಿದ್ದರೆ, ವಿಧಾನಸೌಧ ಮುಂದೆ ಧರಣಿ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದ್ದಾರೆ. ಆದೇಶ ಪತ್ರ ತರುವುದಾದರೆ ನಮ್ಮ ವೇದಿಕೆಗೆ ಆಹ್ವಾನ ಇದೆ ಎಂದು ಹೇಳಿದ್ದಾರೆ.