Tuesday, September 27, 2022
Powertv Logo
Homeದೇಶಭಾರತದಲ್ಲಿ ಮೊದಲ ಬಾರಿಗೆ 5 ಸಾವಿರಕ್ಕೂ ಅಧಿಕ ಕೊರೋನಾ ಕೇಸ್ ಪತ್ತೆ : 96 ಸಾವಿರದ...

ಭಾರತದಲ್ಲಿ ಮೊದಲ ಬಾರಿಗೆ 5 ಸಾವಿರಕ್ಕೂ ಅಧಿಕ ಕೊರೋನಾ ಕೇಸ್ ಪತ್ತೆ : 96 ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್-19ಗೆ ತುತ್ತಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 5,242 ಜನರಲ್ಲಿ ಸೋಂಕಿಗೆ ತುತ್ತಾಗಿದ್ದು, ಸೋಂಕಿತರ ಸಂಖ್ಯೆ 96,169 ಜನರಲ್ಲಿ ಸೋಂಕು ದೃಢಪಟ್ಟಿದೆ. ಈವರೆಗೆ ಸೋಂಕಿನಿಂದ ಒಟ್ಟು 3,029 ಜನ ಮೃತಪಟ್ಟಿದ್ದಾರೆ. 96 ಸಾವಿರ ಸೋಂಕಿತರಲ್ಲಿ 36,824 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ದೇಶದ ಸೋಂಕಿತರ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಮಹಾರಾಷ್ಟ್ರದಲ್ಲಿ ಕೇವಲ 24 ಗಂಟೆಯಲ್ಲಿ 2,347 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಈವರೆಗೆ 33,053 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯೂ ಹೆಚ್ಚಾಗಿದ್ದು, 1,198 ಏರಿಕೆಯಾಗಿದೆ. ಇದರ ನಡುವೆಯೇ 7,668 ಜನ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಇನ್ನು ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಗುಜರಾತ್​ನಲ್ಲಿ ಸೋಂಕಿತರ ಸಂಖ್ಯೆ 11,379 ಕ್ಕೆ ಏರಿದ್ದು, ಒಂದೇ ದಿನಕ್ಕೆ 391 ರಷ್ಟು ಸೋಂಕಿತರು ಹೆಚ್ಚಾಗಿದ್ದಾರೆ. ಅಲ್ಲದೆ ಈವರೆಗೆ ಒಟ್ಟು 659 ಜನ ಸೋಂಕಿತರು ಮೃತಪಟ್ಟಿದ್ದಾರೆ. ಈ ಮಧ್ಯೆ 4,499 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿದ್ದು, ಗುಜರಾತ್​ನಲ್ಲಿ ಪತ್ತೆಯಾಗಿರುವ ಸೋಂಕಿತರ ಸಂಖ್ಯೆಗೆ ಬಹಳ ಹತ್ತಿರವಾಗಿದೆ. ನಿನ್ನೆಯಿಂದ ಇಂದಿಗೆ 639 ಜನರಲ್ಲಿ ಸೋಂಕು ಪತ್ತೆಯಾಗಿ ಸೋಂಕಿತರ ಸಂಖ್ಯೆ 11,224 ಕ್ಕೆ ಏರಿಕೆಯಾಗಿದೆ. ಈವರೆಗೆ 78 ಜನ ಸಾವನ್ನಪ್ಪಿದ್ದು, 4,172 ಜನ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಇನ್ನು ದೆಹಲಿಯು ನಾಲ್ಕನೇ ಸ್ತಾನದಲ್ಲಿದ್ದು, ಸೋಂಕಿತರ ಸಂಖ್ಯೆ 10, 054 ಕ್ಕೇರಿದ್ದು, ಕಳೆದ 24 ಗಂಟೆಯಲ್ಲಿ 721 ಜನರಲ್ಲಿ ಸೋಂಕು ದೃಢಪಟ್ಟಿದೆ. ನಿನ್ನೆಯಿಂದ ಇಂದಿಗೆ 31 ಜನ ಸಾವನ್ನಪ್ಪಿದ್ದು, ಒಟ್ಟು 160 ಜನ ಮೃತಪಟ್ಟಿದ್ದಾರೆ. ಈವರೆಗೆ 4,485 ಜನ ಸೋಂಕಿತರು ಗುಣಮುಖರಾಗಿದ್ದಾರೆ. 

LEAVE A REPLY

Please enter your comment!
Please enter your name here

- Advertisment -

Most Popular

Recent Comments