Home ರಾಜ್ಯ ಪ್ರವಾಹ ಪೀಡಿತ ಜಿಲ್ಲೆಗಳ ಮೂಲಸೌಕರ್ಯಕ್ಕೆ ಆದ್ಯತೆ : ಬೈರತಿ ಬಸವರಾಜು

ಪ್ರವಾಹ ಪೀಡಿತ ಜಿಲ್ಲೆಗಳ ಮೂಲಸೌಕರ್ಯಕ್ಕೆ ಆದ್ಯತೆ : ಬೈರತಿ ಬಸವರಾಜು

ಕೋಲಾರ : ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಿಎಂ ಯಡಿಯೂರಪ್ಪ ವಿವೇಚನೆಗೆ ಬಿಟ್ಟಿದ್ದು, ನಮ್ಮ ವರಿಷ್ಠರು ಚರ್ಚಿಸಿ ತೀರ್ಮಾನ ಮಾಡ್ತಾರೆ ಅಂತ ಕೋಲಾರದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು.

ಜಿಲ್ಲೆಯ ನಗರಾಭಿವೃದ್ಧಿ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತು ಬಹಿರಂಗವಾಗಿ ಮಾತನಾಡಬಾರದೆಂದು ವರಿಷ್ಠರು ಸೂಚಿಸಿದ್ದಾರೆ. ಈ ಬಗ್ಗೆ ನಾನು ಹೆಚ್ಚಾಗಿ ಮಾತನಾಡುವುದಿಲ್ಲ ಎಂದರು. ಕಾಂಗ್ರೆಸ್​ನಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಟೀಕೆ ಮಾಡೋದಿಲ್ಲ, ನಾನು ಪಕ್ಷದಿಂದ ಹೊರ ಬಂದು 60 ಸಾವಿರ ಮತಗಳಿಂದ ಬಿಜೆಪಿ ಪಕ್ಷದಿಂದ ಗೆದ್ದಿದ್ದೇನೆ. ಬಿಜೆಪಿ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ ಬೇರೆ ಪಕ್ಷದ ಬಗ್ಗೆ ಮಾತನಾಡಲು ಹೋಗುವುದಿಲ್ಲ ಎಂದ್ರು.

ಪತ್ರಕರ್ತರಿಗೆ ನಗರಾಭಿವೃದ್ದಿ ಪ್ರಾಧಿಕಾರಗಳು ಅಭಿವೃದ್ದಿ ಪಡಿಸುವ ಬಡಾವಣೆಗಳಲ್ಲಿ ಶೇಕಡ 5ರಷ್ಟು ನಿವೇಶನಗಳು ಮೀಸಲು ಇಡಲಾಗುವುದು. ಈ ಬಗ್ಗೆ ಸರ್ಕಾರ ಶೀಘ್ರದಲ್ಲಿಯೇ ಆದೇಶ ಹೊರಡಿಸಲಿದೆ ಎಂದರು. ರೈತರಿಂದ ಪಡೆದ ಜಮೀನಿನಲ್ಲಿ ಅಭಿವೃದ್ದಿಪಡಿಸುವ ಬಡಾವಣೆಗಳಲ್ಲಿ ಶೇಕಡ 50ರಷ್ಟು ಪಾಲು ರೈತರಿಗೆ ಮೀಸಲು ಇಡಲಾಗುವುದು ಅಂತ ಹೇಳಿದ್ರು. ಕೊರೋನಾ ಹಿನ್ನಲೆಯಲ್ಲಿ ರಾಜ್ಯಾದ್ಯಂತ ತೆರಿಗೆ ವಸೂಲಿಗೆ ತಡೆ ನೀಡಲಾಗಿತ್ತು. ಈಗ ವಸೂಲಿ ಮಾಡಲಾಗುತ್ತಿದೆ. ತೆರಿಗೆಯಿಂದ ಸಂಗ್ರಹವಾಗುವ ಹಣದಿಂದ ನಗರಗಳನ್ನ ಅಭಿವೃದ್ದಿಪಡಿಸಲಾಗುವುದು ಎಂದರು. ಪ್ರವಾಹದಿಂದ ಕೆಲವು ಜಿಲ್ಲೆಗಳಲ್ಲಿ ಹಾನಿಯಾಗಿರುವ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಲು ಆದ್ಯತೆ ಕೊಡಲಾಗುವುದು ಅಂತ ಬೈರತಿ  ಹೇಳಿದ್ರು. ರಾಜ್ಯದ ಏಳು ಸ್ಮಾರ್ಟ್ ಸಿಟಿಗಳನ್ನು ಅಭಿವೃದ್ಧಿ ಮಾಡುವ ಕೆಲಸ ವೇಗವಾಗಿ ಸಾಗುತ್ತಿದೆ ಅಂತ ಸಚಿವರು ವಿವರಿಸಿದ್ದಾರೆ.

-ಆರ್.ಶ್ರೀನಿವಾಸಮೂರ್ತಿ

LEAVE A REPLY

Please enter your comment!
Please enter your name here

- Advertisment -

Most Popular

‘ಮಾನವೀಯತೆ ಮೆರೆದ ಶಾಸಕ ಪ್ರಸಾದ ಅಬ್ಬಯ್ಯ’

ಹುಬ್ಬಳ್ಳಿ: ಇಂದು ಬೆಳ್ಳಂಬೆಳಿಗ್ಗೆ ನೃಪತುಂಗ ಬೆಟ್ಟದ ಬಳಿಯ ಪಿರಾಮಿಡ್ ಧ್ಯಾನ ಮಂದಿರದ ಪಕ್ಕದ ಉದ್ಯಾನವನದಲ್ಲಿ ನಡೆದ ಘಟನೆಯೊಂದು ಶಾಸಕ ಪ್ರಸಾದ ಅಬ್ಬಯ್ಯ ಅವರ ಮಾನವೀಯ ಕಾರ್ಯಕ್ಕೆ ಸಾಕ್ಷಿಯಾಯಿತು. ಬೆಳಗ್ಗೆ ಉದ್ಯಾನವನದಲ್ಲಿ ಶಾಸಕರು ವಾಕಿಂಗ್ ಮಾಡುತ್ತಿದ್ದ...

ರೋಡ್ ಮೇಲೆ ಅಡುಗೆ ಮಾಡ್ತಿದ್ದೀವಿ…ಗ್ಯಾಸ್ ಬೆಲೆ ಕಡಿಮೆ ಮಾಡ್ರಿ..!

ಹುಬ್ಬಳ್ಳಿ: ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆ ಮಾಡುತ್ತಿರುವುದನ್ನು ಖಂಡಿಸಿ ಹು-ಧಾ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ರಸ್ತೆಯಲ್ಲಿಯೇ ಕಟ್ಟಿಗೆ ಹೊತ್ತಿಸಿ ಅಡುಗೆ ಮಾಡುವ ಮೂಲಕ ಹಳೇ ಹುಬ್ಬಳ್ಳಿಯ ಇಂಡಿ ಪಂಪ...

ಎಮ್ಮೆ ಕೊರಳಿಗೆ ಪ್ರಧಾನಿ ಮೋದಿ ಭಾವಚಿತ್ರ ಯಡಿಯೂರಪ್ಪನವರ ಶವಯಾತ್ರೆ

ಗದಗ: ಜಿಲ್ಲೆ ನರಗುಂದ ಪಟ್ಟಣದಲ್ಲಿ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ವಿನೂತನ ಪ್ರತಿಭಟನೆ ಮಾಡಿದರು. ನೂರಾರು ಟ್ರ್ಯಾಕ್ಟರ್ ಹಾಗೂ ಬೈಕ್ ಸಮೇತ ಪ್ರತಿಭಟನಾ ಮೆರವಣಿಗೆ ನಡೆಸಿದ‌ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ...

ಯಡಿಯೂರಪ್ಪನವರನ್ನ ಗೊಂದಲಕ್ಕೀಡು ಮಾಡಿ ನಿದ್ರೆ ಬರದಂತೆ ಮಾಡಲಾಗುತ್ತಿದೆ: ಬ್ರಹ್ಮಾನಂದ ಸ್ವಾಮೀಜಿ

ಕಾರವಾರ : ನಮ್ಮ ಮಂತ್ರಿಗಳು ರಾಜೀನಾಮೆ ನೀಡಿದರೆ ಸರ್ಕಾರ ದುರ್ಬಲವಾಗುತ್ತದೆ ಎಂದು ಯಡಿಯೂರಪ್ಪನವರನ್ನ ಗೊಂದಲಕ್ಕೀಡು ಮಾಡಿ ನಿದ್ರೆ ಬರದಂತೆ ಮಾಡಿದ್ದಾರೆ ಅಂತಾ ಉಜಿರೆ ಶ್ರೀರಾಮ ಪೀಠದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪಂಚಮಸಾಲಿ ವಿರುದ್ಧ...

Recent Comments