Sunday, June 26, 2022
Powertv Logo
Homeರಾಜ್ಯರಾಜ್ಯದಲ್ಲಿ ಗ್ರೀನ್​ ಝೋನ್​ಗೂ ಎಂಟ್ರಿ ಕೊಟ್ಟ ಕಿಲ್ಲರ್ ಕೊರೋನಾ! ಹಾವೆರಿಯಲ್ಲಿ ಮೊದಲ ಕೊರೋನಾ ಕೇಸ್ ಪತ್ತೆ

ರಾಜ್ಯದಲ್ಲಿ ಗ್ರೀನ್​ ಝೋನ್​ಗೂ ಎಂಟ್ರಿ ಕೊಟ್ಟ ಕಿಲ್ಲರ್ ಕೊರೋನಾ! ಹಾವೆರಿಯಲ್ಲಿ ಮೊದಲ ಕೊರೋನಾ ಕೇಸ್ ಪತ್ತೆ

ಹಾವೇರಿ: ರಾಜ್ಯದಲ್ಲಿ ಕೊರೋನಾ ಸೋಂಕಿತರ ಅಂಕಿಅಂಶಕ್ಕನುಗುಣವಾಗಿ ರೆಡ್, ಆರೆಂಜ್ ಹಾಗೂ ಗ್ರೀನ್ ಝೋನ್​ಗಳಾಗಿ ಜಿಲ್ಲೆಗಳನ್ನು ವಿಭಾಗಿಸಲಾಗಿತ್ತು. ಆದರೆ ಈಗ ಗ್ರೀನ್​ ಝೋನ್​ನಲ್ಲಿದ್ದ ಕೆಲವೊಂದು ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಈವರೆಗೂ ಒಂದೂ ಪ್ರಕರಣವೂ ಪತ್ತೆಯಾಗದ ಹಾವೇರಿಯಲ್ಲಿ ಇಂದು ಒಂದು ಪ್ರಕರಣ ಪತ್ತೆಯಾಗಿದೆ.

ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಮೊದಲ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಏಪ್ರಿಲ್ 28 ರಂದು ಈ ವ್ಯಕ್ತಿ ಮುಂಬೈನಿಂದ ಜಿಲ್ಲೆಗೆ ಬಂದಿದ್ದರು. ಸೋಂಕಿತ ವ್ಯಕ್ತಿ ತನ್ನ ಮಕ್ಕಳ ಜೊತೆ ಜಿಲ್ಲೆಗೆ ಬಂದಿದ್ದರು.sದ್ಯ ಸೋಂಕಿತನ ಸಂಪರ್ಕದಲ್ಲಿದ್ದವರನ್ನು ಪರೀಕ್ಷೆಗೆ ಒಳಪಡಿಸಿದ್ದು, ಇಂದು ಸಂಜೆ ಅವರ ರಿಪೋರ್ಟ್ ಕೈಸೇರಲಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments