ಮಂಗಳೂರು: ಮಂಗಳೂರಿನಲ್ಲಿ ಉಜಿರೆಯ SDM ಕಾಲೇಜಿನ ಮತ ಏಣಿಕೆ ಕೇಂದ್ರದ ಮುಂದೆ ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ FIR ದಾಖಲು ಮಾಡಲಾಗಿದೆ.
ರಾಜ್ಯದಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆದಿದ್ದು, ಇಂದು ಮತ ಏಣಿಕೆ ಕಾರ್ಯ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಮಂಗಳೂರಿನ ಉಜಿರೆ SDM ಪಿಯು ಕಾಲೇಜಿನಲ್ಲಿ ಮತ ಏಣಿಕೆ ನಡೆಯುತ್ತಿದ್ದು, ಮತ ಏಣಿಕೆ ಕೇಂದ್ರ ಮುಂದೆ 10 ರಿಂದ 15 SDPI ಕಾರ್ಯಕರ್ತರು ಪಾಕಿಸ್ಥಾನ ಜಿಂದಾಬಾದ್ ಎಂದು ಪಾಕ್ ಪರ ಘೋಷಣೆ ಕೂಗಿದ್ದಾರೆ. ಇವರ ವಿರುದ್ಧ ಪೊಲೀಸರು FIR ದಾಖಲು ಮಾಡಿ, ದೇಶದ್ರೋಹ ಪ್ರಕರಣ ದಾಖಲಿಸಿಕೊಂಡಿದ್ದಾರೆ.